ಅಪಘಾತ
ಪ್ರಕರಣ:
ಸಂಚಾರಿ
ಪೊಲೀಸ್ ಠಾಣೆ:ಶ್ರೀ ಚಿದಾನಂದಯ್ಯ
ತಂದೆ ಚಂದ್ರಶೇಖರಯ್ಯಾ ಹಿರೇಮಠ, ಉಃ ಪೊಸ್ಟ ಮ್ಯಾನ ಸಾಃ ಅತ್ತರ ಕಂಪೌಂಡ ಗುಲಬರ್ಗಾರವರು ನಾನು ದಿನಾಂಕ 26-05-2014 ರಂದು ಮಧ್ಯಾಹ್ನ
12-00 ಗಂಟೆಗೆ ನನ್ನ ಟಿ.ವಿ.ಎಸ್ ನಂ. ಕೆ.ಎ 32 ಎಕ್ಸ 3245 ನೇದ್ದರ ಮೇಲೆ ಶಹಾಬಜಾರ ಕಡೆಗೆ
ಚಲಾಯಿಸಿಕೊಂಡು ಹೋಗುತ್ತಿದ್ದಾಗ ಲಾಲ ಹನುಮಾನ ಗುಡಿ ಕಡೆಯಿಂದ ಯಾವುದೋ ಅಟೋರಿಕ್ಷಾ ಚಾಲಕ ತನ್ನ
ಅಟೋರಿಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ಎದರುಗಡೆಯಿಂದ ಚಲಾಯಿಸಿಕೊಂಡು ಬಂದು ನನ್ನ
ಟಿ.ವಿ.ಎಸ ಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ
ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 29/2012 ಕಲಂ 279, 338 ಐಪಿಸಿ
ಸಂಗಡ 187 ಐ.ಎಮ.ವಿ. ಆಕ್ಟ ಪ್ರಕಾರ ಪ್ರಕರಣ ದಾಖಲ
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಉದ್ದೇಶ
ಪೂರ್ವಕವಾಗಿ ಮನೆ ಸುಟ್ಟಿರುವ ಬಗ್ಗೆ:
ಮಾದನ
ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ಮಿತಾನಂದ ತಂದೆ ನಾಗಪ್ಪ ಕುಡಕೆ ಸಾ: ಕಿಣ್ಣಿಅಬ್ಬಾಸ ರವರು ನಮ್ಮ ಹುಲ್ಲಿನ
ಜಪ್ಪರ ಮನೆಯಲ್ಲಿ ವಾಸವಾಗಿರುತ್ತೆವೆ. ದಿನಾಂಕ 26/05/2012 ರಂದು ನಾನು ಗುಲಬರ್ಗಾಕ್ಕೆ ಕೆಲಸದ
ಮೇಲೆ ಬಂದಿದ್ದು, ನನ್ನ ತಂದೆ ತಾಯಿ ಅಣ್ಣ ಅತ್ತಿಗೆಯವರು ಹೊಲದಲ್ಲಿ ಸೇಂಗಾ ಬೇಳೆ ಕಿತ್ತಲು ನಮ್ಮ
ಹೊಲಕ್ಕೆ ಹೋಗಿದ್ದರು. ಮನೆಯಲ್ಲಿ ನನ್ನ ಅಣ್ಣನ ಮಗಳು ಸಂಗೀತಾ ಒಬ್ಬಳೆ ಇದ್ದಾಗ ನಮ್ಮ ಅಣ್ಣತಮ್ಮಂದಿರು
ಚಂದ್ರಭಾಗಮ್ಮ ಗಂಡ ನಾಮದೇವ ಕುಡಕೆ, ಸಂತೋಷಕುಮಾರ ತಂದೆ ನಾಮದೇವ ಕುಡಕೆ, ಸಂಜಕುಮಾರ ತಂದೆ ನಾಮದೇವ ಕುಡಕೆ ಮೂರು ಜನರು ಮತ್ತು ಇತರರ
ಪ್ರಚೋದನೆಯಿಂದ ಮನೆಗೆ ಬೆಂಕಿ ಹಚ್ಚಿರುತ್ತಾರೆ. ಮನೆಯಲ್ಲಿಟ್ಟಿದ ದವಸ ಧಾನ್ಯಗಳು ಬಂಗಾರದ ಆಭರಣ
ಇನ್ನಿತರ ಮನೆಯ ಸಾಮಾನುಗಳು ಹೀಗೆ ಒಟ್ಟು 1,50,000/- ಕೀಮ್ಮತ್ತಿನದು ಸುಟ್ಟಿರುತ್ತವೆ ಅಂತಾ ದೂರು
ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 22/2012 ಕಲಂ436 ,109, ಸಂಗಡ 149 ಐಪಿಸಿ ಪ್ರಕಾರ ಪ್ರಕರಣ
ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:26/05/2012 ರಂದು 12-30 ಗಂಟೆ ಸುಮಾರಿಗೆ ಶಾಂತಿನಾಥ.ಬಿ.ಪಿ. ಪಿಎಸ್ಐ ಕಮಲಾಪೂರ
ಪೊಲೀಸ್ ಠಾಣೆರವರು ಠಾಣೆಯ ಸಿಬ್ಬಂದಿಯವರೊಂದಿಗೆ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಿರುವಾಗ ಕಮಲಾಪೂರ
ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ತಾರಸಿಂಗ
ತಂದೆ ರೂಪಸಿಂಗ್ ರಾಠೋಡ ಇತನು ಪಧವಿಧರ ಮತ ಕೇತ್ರದ ವಿಧಾನ ಪರಿಷತ್ ಚುನಾವಣೆ ನಿಮಿತ್ಯವಾಗಿ ಅವಾಚ್ಯವಾಗಿ
ಬೈಯುತ್ತಾ.,ಚಿರಾಡುವುದು, ಹೆದರಿಸುವುದು ಮಾಡುತ್ತಾ ಸಾರ್ವಜನಿಕ ಶಾಂತತೆಗೆ ಭಂಗ ತರುತ್ತಿದ್ದಾಗ, ಈತನಿಗೆ ಹೀಗೇಯೇ ಬಿಟ್ಟಲ್ಲಿ ಮುಂದೆ ಯಾವುದಾದರು ಸಂಜ್ಞೆಯ ಅಪರಾಧ
ಮಾಡುವುದಾಗಿ ಕಂಡು ಬಂದಿದ್ದರಿಂದ ಮತ್ತು ಏರಿಯಾದಲ್ಲಿ ಸಾರ್ವಜನಿಕರ ನೆಮ್ಮದಿ ಹಾಳು ಮಾಡುವ
ಸಾಧ್ಯತೆ ಕಂಡುಬಂದಿದ್ದರಿಂದ ಠಾಣೆ ಗುನ್ನೆ ನಂ: 59/2012 ಕಲಂ 110 (ಇ) & (ಜಿ) ಸಿಆರ್.ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದರೋಡೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ ಮಹ್ಮದ ಯುಸಫ್ ತಂದೆ ಗಪೂರಸಾಬ ಸೌದಾಗರ
ಉಃ ಗ್ರಾಮ ಪಂಚಾಯತ ಅಧ್ಯಕ್ಷ ಸಾಃ ಸೊಂತ ತಾಃಜಿಃ ಗುಲಬರ್ಗಾ ರವರು ದಿನಾಂಕ: 26/05/12 ರಂದು ಸಾಯಂಕಾಲ
5-00 ಗಂಟೆ ಸುಮಾರಿಗೆ ಕಮಲಾಪೂರದಲ್ಲಿ ಖಾಸಗಿ ಕೆಲಸವಿದ್ದ ಪ್ರಯುಕ್ತ ಸೊಂತ ದಿಂದ ಕಮಲಾಪೂರಕ್ಕೆ ಜೀಪ
ನಂ. ಕೆಎ:17, ಎ:2171 ನೇದ್ದರಲ್ಲಿ ಕುಳಿತಕೊಂಡು ಬರುತ್ತಿರುವಾಗ ಸೊಂತದ ನಾಲಾದ ಹತ್ತಿರ ಬರುತ್ತಿದ್ದಂತೆ 3-4
ಜನರು ತಮ್ಮ ತಮ್ಮ ಕೈಯಲ್ಲಿ ಹರಿತವಾದ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಜೀಪ ನೋಡಿ ಅಡ್ಡಗಟ್ಟಿ
ನಿಲ್ಲಿಸಿ ನಮಗೆ ಜೀಪಿನಿಂದ ಕೆಳಗೆ ಇಳಿಸಿ, ನಮ್ಮ ಹತ್ತಿರ ಇದ್ದ ಹಣ ಬಂಗಾರಗಳು ಕೊಡಿ ಇಲ್ಲಿದ್ದಿದ್ದರೆ ಜೀವ ಸಹಿತ
ಬಿಡುವುದಿಲ್ಲಾ ಅಂತಾ ಹೇದರಿಸುತ್ತಾ ನಮ್ಮೊಂದಿಗೆ ತೆಕ್ಕೆ ಕುಸ್ತಿ ಮಾಡುತ್ತಿದ್ದಾಗ ನಮ್ಮ
ಗ್ರಾಮದ ವಿಠಲ ಮಾಸ್ಟರ ಮತ್ತು ಅರ್ಜುನ ಇಬ್ಬರು ತಮ್ಮ ಮೋಟಾರ ಸೈಕಲ ಮೇಲೆ ಸೊಂತದಿಂದ ಕಮಲಾಪೂರ
ಕಡೆಗೆ ಬರುತ್ತಿದ್ದವರು ನಮ್ಮ ಸಹಾಯಕ್ಕೆ ಬಂದಾಗ ಅವರು ತಪ್ಪಿಸಿಕೊಂಡು ಓಡಿ ಹೋಗುತ್ತಿದ್ಧಾಗ ಅವರಿಗೆ
ಬೆನ್ನು ಹತ್ತಿ ಹಿಡಿಯಲಾಗಿ 4 ಜನರಲ್ಲಿ 3 ಜನರು ಓಡಿ ಹೋಗಿದ್ದು. ಒಬ್ಬನು ನಮ್ಮೊಂದಿಗೆ ತೆಕ್ಕೆ ಕುಸ್ತಿ
ಮಾಡಿ ತಪ್ಪಿಸಿಕೊಳ್ಳುತ್ತಿರುವಾಗ ಕೆಳಗೆ ಬಿದ್ದು ತಲೆಗೆ ರಕ್ತಗಾಯ ಮಾಡಿಕೊಂಡಿರುತ್ತಾನೆ. ಅವನ
ಹತ್ತಿರ ಇದ್ದ ಚಾಕು ಮತ್ತು ಓಡಿ ಹೋದವರಲ್ಲಿ ಒಬ್ಬನ ಹತ್ತಿರ ಇದ್ದ ಇನ್ನೊಂದು ಚಾಕು
ಸ್ಥಳದಲ್ಲಿಯೇ ಇದ್ದವು ಆತನ ಹೆಸರು ವಿಚಾರಿಸಲಾಗಿ, ಟಕ್ಲ್ಯಾ ತಂದೆ ಶಂಕರ ಗಿರಗಿರ ವಯ: 45 ವರ್ಷ ಜಾ: ಪಾರ್ದಿ ಉಃ ಬುರಲಿ
ಹೊಡೆಯುವುದು. ಸಾಃ ಗೊಬ್ಬುರ (ಕೆ) ತಾಃ ಅಫಜಲಪೂರ ಜಿಃ ಗುಲಬರ್ಗಾ ಅಂತಾ ತಿಳಿಸಿದ್ದು. ಇನ್ನೂ
ಓಡಿ ಹೋದ 3 ಜನರನ್ನು ನಾವು ಗುರ್ತಿಸುತ್ತೇವೆ. ತಮ್ಮ ಕೈಯಲ್ಲಿ ಹರಿತವಾದ ಮಾರಕ ಅಸ್ತ್ರಗಳನ್ನು ಹಿಡಿದುಕೊಂಡು ದರೋಡೆ
ಮಾಡುವ ಉದ್ದೇಶದಿಂದ ನಮಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದವರ ಮೇಲೆ ಕ್ರಮ ಜರುಗಿಸಬೇಕು
ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 60/2012, ಕಲಂ. 398, 504, 506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment