ಕಳ್ಳತನ
ಪ್ರಕರಣ:
ರಾಘವೇಂದ್ರ ನಗರ
ಪೊಲೀಸ್ ಠಾಣೆ : ಶ್ರೀ ನಾಗೀಂದ್ರಪ್ಪಾ ತಂದೆ ಮಹಾದೇವಪ್ಪಾ ಗುತ್ತೆದಾರ ಸಾ || ಜೆ.ಆರ್.
ನಗರ ಆಳಂದ ರೋಡ್ ಗುಲಬರ್ಗಾ ರವರು ನಮ್ಮ ಮನೆಯ
ಕಳ್ಳತನ ವಾಗಿದೆ ಅಂತಾ ನಮ್ಮ ಸಂಬಂಧಿಕರು ತಿಳಿಸಿದ್ದರಿಂದ ನಾವು ಮನೆಗೆ ಬಂದು ನೋಡಲು ಮನೆಯ ಕೀಲಿ
ಮುರಿದು ಅಲೆಮಾರದಲ್ಲಿಟ್ಟ 5 ಗ್ರಾಂ ಬಂಗಾರದ
ಕಿವಿಯೋಲೆ, 10 ಗ್ರಾಂ ಬಂಗಾರದ ನೆಕ್ಲಸ್, 5 ಗ್ರಾಂ ಬಂಗಾರದ ಲಾಕೀಟ್, 1 ಗ್ರಾಂ ಬಂಗಾರದ ಸಣ್ಣ
ಗುಂಡುಗಳು, 5 ಗ್ರಾಂ ಬೆಳ್ಳಿ ಕಾಲು ಚೈನ್, 2700/- ನಗದು ಹಣ ಹೀಗೆ ಒಟ್ಟು ಎಲ್ಲವು ಸೇರಿ
63,500/- ಬೆಲೆಯುಳ್ಳದ್ದವುಗಳನ್ನು ಯಾರೋ
ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ
ಮೇಲಿಂದ ಠಾಣೆ ಗುನ್ನೆ ನಂ:34/12 ಕಲಂ 457, 380 ಐಪಿಸಿ
ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.
ಅಪಘಾತ
ಪ್ರಕರಣ:
ಮುದೋಳ ಪೊಲೀಸ್ ಠಾಣೆ:ಶ್ರೀ ಸಾಬಣ್ಣಾ ತಂದೆ
ಭೀಮಪ್ಪಾ ದೊಡ್ಲಾ ಸಾ|| ಯಾನಾಗುಂದಿ ಗ್ರಾಮ ರವರು ನಾನು ದಿನಾಂಕ:12-05-2012
ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಕೋಡಂಗಲ ದಿಂದ ನಮ್ಮೂರಾದ ಯಾನಾಗುಂದಿಗೆ ಬಸ್ಸ ನಂಬರ ಎಪಿ-21,ಝಡ್-407
ನೇದ್ದರಲ್ಲಿ ಹೋಗುವಾಗ ಬಸ್ಸಿನ ಚಾಲಕನು ಅತೀವೇಗವಾಗಿ ಹಾಗೂ ನಿರ್ಲಕ್ಷತನದಿಂದ ನಡೆಸಿ ಹುಲಿಗುಂಡಂ
ಕ್ರಾಸ್ ಹತ್ತಿರ ರಸ್ತೆಯ ಬದಿಯಲ್ಲಿ ಹೋಗುತ್ತಿದ್ದಾಗ ಆಪರಿಚಿತ ವ್ಯಕ್ತಿಗೆ ಡಿಕ್ಕಿ ಪಡಿಸಿ ಅಪಘಾತ
ಮಾಡಿ ಅಪರಿಚಿತ ವ್ಯಕ್ತಿಗೆ ಬೆನ್ನಿಗೆ,
ಮುಖಕ್ಕೆ, ಎದೆಗೆ , ಹೊಟ್ಟೆಗೆ
ಮತ್ತು ತಲೆಗೆ ಹಾಗೂ ಇತರ ಕಡೆ ಭಾರೀ ರಕ್ತಗಾಯ ಗುಪ್ತ ಗಾಯಗಳಾಗಿ ಉಪಚಾರ ಕುರಿತು ಸೇಡಂ ಸರಕಾರಿ ದವಾಖಾನೆಗೆ
ತೆಗೆದುಕೊಂಡು ಹೋಗುವಾಗ ಮಾರ್ಗದಲ್ಲಿ ರಾತ್ರಿ 11-15 ಗಂಟೆಗೆ ಮೃತ ಪಟ್ಟಿದ್ದು, ಮೃತನ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲಾ ಅಪಘಾತ
ಪಡಿಸಿದ ಬಸ್ ಚಾಲಕನ ಬಸ್ಸ ಚಾಲಕ ಜಾಹಿದ ಅಲಿ ಸಾ|| ಜಟಚರ್ಲಾ
(ಎಪಿ), ಇತನ ಮೇಲೆ ಕಾನೂನಿನ ಕ್ರಮ ಜರೂಗಿಸಲು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:50/2012
ಕಲಂ 279, 304(ಎ) ಐ.ಪಿ.ಸಿ
ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ
ಪ್ರಕರಣ:
ಕಮಲಾಪೂರ ಪೊಲೀಸ
ಠಾಣೆ:ಶ್ರೀ ಸದಾನಂದ ತಂದೆ ಪಂಚಯ್ಯ ಸ್ವಾಮಿ ಸಾ:ರೇವಣಸಿದ್ದೇಶ್ವರ ಕಾಲೊನಿ
ಗುಲಬರ್ಗಾ ರವರು ನನ್ನ ತಂಗಿಯ ಮಗನಾದ ಈಶ್ವರ ಮಠಪತಿ
ಸಾ: ಬಸವೇಶ್ವರ ಕಾಲನಿ ಗುಲಬರ್ಗಾ ಮತ್ತು ಆತನ ಗೆಳೆಯನಾದ ಮೊಹನ ತಂದೆ ಮಧುಕರ ಸಾ: ಗುಲಬರ್ಗಾ
ಇಬ್ಬರು ಕೂಡಿಕೊಂಡು ದಿನಾಂಕ: 13/05/2012 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನಮ್ಮ
ಮನೆಗೆ ಬಂದು ಹುಮನಾಬಾದದಲ್ಲಿ ಖಾಸಗಿ ಕೆಲಸವಿದೆ ಅಂತಾ ಹೇಳಿ ಹೊಂಡಾ ಶೈಯಿನ ಮೋಟಾರ ಸೈಕಲ ನಂ ಕೆ.ಎ.33-ಜೆ.4324 ನೇದ್ದರ ಮೇಲೆ
ಹೋಗಿದ್ದು ಇರುತ್ತದೆ. ಮಧ್ಯಾಹ್ನ 12-30 ಗಂಟೆ ಸುಮಾರಿಗೆ ನನ್ನ ಅಳಿಯ ಈಶ್ವರ ಈತನಿಗೆ ಗ್ಯಾಸ
ನಂಬರ ಬುಕ್ ಮಾಡಿಸುವದಕ್ಕಾಗಿ ಫೊನ ಮಾಡಿದಾಗ ಆತನ ಫೋನ ಕಮಲಾಪೂರ ಪೊಲೀಸರು ರಿಸೀವ್ ಮಾಡಿ ವಿಷಯ
ತಿಳಿಸಿದ್ದೇನೇಂದರೆ, ಮಧ್ಯಾಹ್ನ 12-15 ಗಂಟೆ ಸುಮಾರಿಗೆ ಕಮಲಾಪೂರ ಹತ್ತಿರ ಬೆಳಕೋಟಾ ಕ್ರಾಸ
ಸಮೀಪ ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ನಂ 218 ರಲ್ಲಿ ರಸ್ತೆ ಅಪಘಾತವಾಗಿದ್ದು ಸದರಿ
ಅಪಘಾತದಲ್ಲಿ ಮೃತ ಪಟ್ಟವರ ಹತ್ತಿರ ಈ ಪೋನ ಸಿಕ್ಕಿದ್ದು ತಾವು ಯಾರು ಅಂತಾ ನನಗೆ ಕಮಲಾಪೂರ
ಪೊಲೀಸರು ಕೇಳಿದ್ದರಿಂದ ನಾನು ಈಶ್ವರ
ಈತನ ಸೊದರ ಮಾವನಿದ್ದೇನೆ. ಈ ಫೋನು ಆತನದೇ ಅಂತಾ ತಿಳಿಸಿದಾಗ ಕಮಲಾಪೂರ ಪೊಲೀಸರು ರಸ್ತೆ
ಅಪಘಾತದಲ್ಲಿ ನಿಮ್ಮ ಅಳಿಯ ಮೃತ ಪಟ್ಟಿರುತ್ತಾನೆ. ಮೋಟಾರ
ಸೈಕಲ ಇಬ್ಬರೂ ಬರುತ್ತಿದ್ದಾಗ ಕಮಲಾಪೂರ ಕಡೆಯಿಂದ ಟ್ರ್ಯಾಕ್ಟರ ನಂ
ಕೆ.ಎ.32-ಟಿ.ಟ.4303-4304 ನೇದ್ದರ ಚಾಲಕ
ತನ್ನ ಟ್ರ್ಯಾಕ್ಟರ ಅತೀವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂಧು ಎದುರಿನಿಂದ
ಬರುತ್ತಿದ್ದ ಮೋಟಾರ ಸೈಕಲಗೆ ಡಿಕ್ಕಿ
ಪಡಿಸಿದ್ದರಿಂದ ಮೃತ ಪಟ್ಟಿರುತ್ತಾನೆ. ಆತನ ಗೆಳೆಯ ಮೋಹನ ಈತನಿಗೆ ಎರಡು ಕೈಗಳಿಗೆ ಅಲ್ಲಲ್ಲಿ
ತರಚಿದ ರಕ್ತಗಾಯ, ಹಣೆಗೆ ರಕ್ತಗಾಯವಾಗಿದ್ದು ಅಲ್ಲಲ್ಲಿ ಗುಪ್ತಗಾಯಗಳಾಗಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 52/2012 ಕಲಂ. 279, 337 , 338 304(ಎ)
ಐಪಿಸಿ ಸಂ. 187 ಐಎಂವಿ ಆಕ್ಟ್ ಪ್ರಕಾರ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ
ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ :ಶ್ರೀ ಈರಣ್ಣ ತಂದೆ ಶರಣಪ್ಪ ಕುಂಬಾರ ಸಾ|| ಹಿಂಚಗೇರ ತಾ|| ಅಫಜಲಪೂರ ರವರು ದಿನಾಂಕ 13.05.12 ರಂದು ಬೆಳಿಗ್ಗೆ 8:15 ಗಂಟೆಗೆ ಬಸವೇಶ್ವರ ಸರ್ಕಲ್ ದಲ್ಲಿ ಮೃತ ಚಾಲಕ
ತನ್ನ ಜೀಪ ನಂಬರ ಕೆ ಎ-33 ಎಮ್-1515 ರಲ್ಲಿ ಜನರನ್ನು ಕುಡಿಸಿಕೊಂಡು ದುದನಿಗೆ ಜೀಪ ನಡೆಸಿಕೊಂಡು
ಹೋಗುತ್ತಿದ್ದು ಹಳ್ಯಾಳ ಕ್ರಾಸ ಹತ್ತಿರವಿದ್ದ ಖಯುಮ ಕೆಈಬಿ ಇವರ ಹೊಲದ ಹತ್ತಿರ ಹೊಗಿದಾಗ ಚಾಲಕ
ತನ್ನ ಜೀಪನ್ನು ಅತೀ ವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿ ಖಯುಮ ಇವರ ಹೊಲದತೆ ಗ್ಗಿನಲ್ಲಿ ಜೀಪ ಪಲ್ಟಿ ಮಾಡಿರುತ್ತಾನೆ ಇದರಿಂದಾಗಿ ಜೀಪಿನಲ್ಲಿ ಕುಳಿತ್ತಿದ್ದ ಧಾನಮ್ಮ
ಕಲಶೇಟ್ಟಿ, ನನಗೆ ಗುಪ್ತಪೆಟ್ಟು ಮತ್ತು ತರಚಿದ ಗಾಯಗಳು
ಆಗಿದ್ದು ಜೀಪ ಚಾಲಕ ಬಸವರಾಜ ತಂದೆ ಪಾಂಡು ಚೌವ್ಹಾಣ ಇತನಿಗೆ ನಿಗೆ ಎದೆಗೆ ಸ್ಟೇರಿಂಗ ಬಡಿದು ಭಾರಿ ಒಳಪೆಟ್ಟು ಆಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ
ಅಂತಾ ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ 83/12 ಕಲಂ 279 337 304 (ಎ) ಐ ಪಿ ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment