4 ದಿವಸಗಳ
ಹಿಂದೆ ಜೇವರ್ಗಿಯಲ್ಲಿ ಕಳ್ಳತನ ಮಾಡಿದ ಆರೋಪಿ ಬಂದನ;
5 ತೊಲಿ ಬಂಗಾರದ
ಆಭರಣ, ನಗದು ಹಣ ಮತ್ತು ಮೊಬಾಯಿಲ್ ಜಪ್ತಿ.
ಶ್ರೀ ಚನ್ನಮಲ್ಲಯ್ಯ ಹಿರೇಮಠ ಇವರು ತಮ್ಮ ಮನೆಯಲ್ಲಿ ದಿನಾಂಕ 22-05-2012 ರ ಮಧ್ಯ ರಾತ್ರಿ
ಯಾರೋ ಕಳ್ಳರು ಮನೆಯೊಳಗೆ ಪ್ರವೇಶಿಸಿ 5 ತೊಲೆ ಬಂಗಾರದ ಆಭರಣಗಳು, 9000=00 ರೂ ನಗದು ಹಣ, ಹಾಗೂ
ಒಂದು ಸ್ಯಾಮಸ್ಯಾಂಗ್ ಮೋಬೈಲ್ ಹೀಗೆ ಒಟ್ಟು 1,
35,000=00 ರೂ ಕಳುವಾದ ಬಗ್ಗೆ ಜೇವರಗಿ
ಠಾಣೆಯಲ್ಲಿ ದೂರು ನೀಡಿದ್ದರ ಮೇರೆಗೆ ಮಾನ್ಯ
ಶ್ರೀ ಪ್ರವೀಣ ಪವಾರ ಎಸ್ ಪಿ ಗುಲಬರ್ಗಾ, ಶ್ರೀ ಕಾಶಿನಾಥ ತಳಿಕೇರಿ ಹೆಚ್ಚುವರಿ ಎಸ್ ಪಿ
ಗುಲಬರ್ಗಾ, ಹಾಗೂ ಶ್ರೀ ತಿಮ್ಮಪ್ಪ ಡಿ ಎಸ್ ಪಿ
ಗ್ರಾಮೀಣ ಉಪ ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ವಿಶ್ವನಾಥ ಕುಲಕರ್ಣಿ ಸಿಪಿಐ ಜೇವರಗಿ ರವರ
ನೇತೃತ್ವದಲ್ಲಿ ಸಿಬ್ಬಂದಿಯವರಾದ ಗುರುಬಸ್ಸು, ತುಕರಾಮ, ಜಗದೇವಪ್ಪ, ಅಣ್ಣಪ್ಪ, ರವರು ಕಳ್ಳತನ
ಮಾಡಿದ ಆರೋಪಿ ಹಣಮಂತ ತಂದೆ ಯಮನಪ್ಪ ಚಲವಾದಿ ವಯ: 40ವರ್ಷ ಸಾ: ಕಲಕೇರಿ ತಾ: ಸಿಂದಗಿ ಜಿ:
ಬಿಜಾಪೂರ ಇತನನ್ನು ಕಲಕೇರಿ ಗ್ರಾಮದಲ್ಲಿ ಬಂದಿಸಿ ಕಳುವಾದ 5 ತೊಲಿ ಬಂಗಾರದ ಆಭರಣಗಳು ಹಾಗೂ
ಮೋಬೈಲ್ ಹ್ಯಾಂಡ್ ಸೆಟ್ ಹೀಗೆ ಒಟ್ಟು 1, 26,000=00 ರೂ ವಶಪಡಿಸಿಕೊಂಡಿರುತ್ತಾರೆ, ಆರೋಪಿತನು ಇದಕ್ಕೂ
ಮುಂಚೆ ಹುಣಸಗಿ ಹಾಗೂ ಚೌಕ ಪೊಲೀಸ ಠಾಣಾ ವ್ಯಾಪ್ತಿಯಲ್ಲಿಯು ಸಹ ಕಳ್ಳತನ ಮಾಡಿದ್ದು ತನಿಖೆಯಿಂದ ತಿಳಿದು
ಬಂದಿರುತ್ತದೆ. ಆರೋಪಿತನನ್ನು ಮಾನ್ಯ ನ್ಯಾಯಾಲಕ್ಕೆ ಒಪ್ಪಿಸಲಾಗಿದೆ.
No comments:
Post a Comment