ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 06-06-2012.
ಬ.ಕಲ್ಯಾಣ ನಗರ ಪೊಲೀಸ್ ಠಾಣೆ ಗುನ್ನೆ ನಂ. 72/12 ಕಲಂ 498(ಎ), 306, ಜೊತೆ 34, ಐ.ಪಿ.ಸಿ.:-
ದಿನಾಂಕ 05/06/2012 ರಂದು
1100 ಗಂಟೆಗೆ ಫಿರ್ಯಾದಿ ಶ್ರೀ ಶಿವಾನಂದ ತಂದೆ ರೇವಣಯ್ಯಾ ಸ್ವಾಮಿ ವಯ 48 ವರ್ಷ ಉ/ ಒಕ್ಕಲುತನ
ಜಾತಿ ಸ್ವಾಮಿ ಸಾ; ಚಿಟ್ಟಾ(ಕೆ) ತಾ; ಬಸವಕಲ್ಯಾಣ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ
ಸಾರಾಂಶವೇನೆಂದರೆ ಫಿರ್ಯಾದಿ ಮಗಳಾದ ಶ್ರೀಮತಿ ಉರ್ಮಿಳಾ ರವರನ್ನು ಸಂತೋಷ ತಂದೆ ಶಾಂತಯ್ಯಾ
ಸ್ವಾಮಿ ರವರ ಜೊತೆಯಲ್ಲಿ 5 ವರ್ಷದ ಹಿಂದೆ ಮದುವೆ ಮಾಡಿದ್ದು ಮದುವೆಯಾದಾಗಿನಿಂದ ಗಂಡ ಮತ್ತು ಇತರೆ
ಕೈಲಾಸ, ರಾಜು, ಶಾಂತಯ್ಯಾ ಇವರುಗಳು ನನ್ನ ಮಗಳಿಗೆ ತೊಂದರೆ ಕೊಡುತ್ತಿದ್ದರು ನಾನು ಬಡವ ನನ್ನಿಂದ
ಮದುವೆ ಡೌರಿ ಮತ್ತು ಬಂಗಾರ ಕೊಡುವುದು ಆಗಿಲ್ಲಾ ಆದ್ದರಿಂದ ನನ್ನ ಮಗಳಿಗೆ ತೊಂದರೆ ಅಂದರೆ
ಮಾನಿಸಿಕ ಮತ್ತು ದೈಹಿಕ ತೊಂದರೆ ಕೊಟ್ಟು ಅವಳಿಗೆ ಮಾನಸಿಕ ಅನಾರೋಗ್ಯವಾಗಿ ಬೇನೆಯಿಂದ
ನರಳುತ್ತಿದ್ದಳು ಮತ್ತು ಅವಳ ಹೆರಿಗೆ ದಿನಾಂಕ 16/05/2012 ರಂದು ಆಗಿತ್ತು ಅವರು ಅವಳಿಗೆ ಸರಿಯಾದ
ಚಿಕಿತ್ಸೆ ಕೊಡಿಸಲಿಲ್ಲಾ ಮಾನಸಿಕ ಹಿಂಸೆ ಕೊಟ್ಟಿದರಿಂದ ನನ್ನ ಮಗಳು ದಿನಾಂಕ 04/06/2012 ರಂದು
ಮರಣ ಹೊಂದಿದ್ದಾಳೆಂದು ನನಗೆ ಫೋನ ಮೂಲಕ ಸುದ್ದಿ ಬಂದಾಗ ನಾನು ನನ್ನ ಮಗಳಿಗೆ ಇವರೆ
ಕೊಂದಿದ್ದಾರೆಂದು ತಿಳಿದು ಬಂದು ನೋಡುವಾಗ ಅಲ್ಲೆ ಆಸ್ಪತ್ರೆಯಲ್ಲಿ ಅಂದರೆ ಸೋಲಾಪೂರದ ಯೇಶೊಧಾ
ಆಸ್ಪತ್ರೆಯಲ್ಲಿ ಭತರ್ಿ ಮಾಡಿದಾಗ ಇವಳಿಗೆ ಇನ್ನು ಚಿಕಿತ್ಸೆ ಕೊಟ್ಟರೆ ಆರಾಮ ಆಗುತ್ತದೆ ಎಂದರು
ಕೂಡಾ ಇವರು ಚಿಕಿತ್ಸೆ ಕೊಡಿಸಲಿಲ್ಲಾ ಚಿಕಿತ್ಸೆ ಅನಾನೂಕೂಲದಿಂದ ನನ್ನ ಮಗಳು ಬಸವಕಲ್ಯಾಣದಲ್ಲಿ
ಗಂಡನ ಮನೆಯಲ್ಲಿ ತಂದಾಗ ಮರಣ ಹೊಂದಿರುತ್ತಾಳೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ. 64/12 ಕಲಂ 498 (ಎ) ಐಪಿಸಿ :-
ದಿನಾಂಕ 05-06-2012 ರಂದು 1430 ಗಂಟೆಗೆ
ಫಿರ್ಯಾದಿ ಶ್ರೀಮತಿ ರಂಜನಾ ಗಂಡ ದೀಲಿಪ ಪರಶೇಟ್ಟೆ ಸಾ: ಶಿವಣಿ ಸಧ್ಯ ಡಾವನ ಹಿಪ್ಪರಗಾ ತಾ: ದೇವಣಿ
ಜಿಲ್ಲೆ ಲಾತೂರ (ಎಂಎಸ್). ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ
24-08-2009 ರಂದು ಶಿವಣಿ ಗ್ರಾಮದ ದೀಲಿಪ ತಂದೆ ಶರಣಪ್ಪಾ ಪರಶೇಟ್ಟಿ ಇವರೊಂದಿಗೆ ಮದುವೆಯಾಗಿದ್ದು
ಮದುವೆಯಾಗಿದ ನಂತರ ಸುಮಾರು ಒಂದು ವರ್ಷದವರೆಗೆ ಎಲ್ಲರು ಫೀರ್ಯಾದಿಯೊಂದಿಗೆ ಸರಿಯಾಗಿದ್ದು, ಈಗ
ಫಿರ್ಯಾದಿ ಗಂಡ ಫಿರ್ಯಾದಿ ನೀನು ಸರಿಯಾಗಿ ಇಲ್ಲಾ ತಾನು ಮತ್ತೊಂದು ಮದುವೆ ಮಾಡಿಕೊಳ್ಳುತ್ತೇನೆ
ಅಂತಾ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಿದ್ದು ಅತ್ತೆಯಾದ ಶಕುಂತಲಾ ಪರಶೇಟ್ಟೆ ಇವಳು ಕೂಡ
ನನಗೆ ನೀನು ಸರಿಯಾಗಿ ಇಲ್ಲಾ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ ನನ್ನ ಮಗ ದೀಲಿಪ
ಇತನಿಗೆ ಇನ್ನೊಂದು ಮದುವೆ ಮಾಡುತ್ತೇನೆ ಅಂತಾ ನನಗೆ ಕಿರುಕುಳ ನೀಡುತ್ತದ್ದಳು. ಆಗಾಗ ನನ್ನ ಗಂಡ
ದೀಲಿಪ ಇತನ ಅಕ್ಕ ಹೇಮಾ ಗಂಡ ಕಲ್ಯಾಣರಾವ ಹಿರಂಗಗಾವೆ ಹಾಗೂ ಹೇಮಾ ಇನತ ಗಂಡ ಕಲ್ಯಾಣರಾವ
ಹಿರಂಗಗಾವೆ ಸಾ: ವಿ ಕೆ ಸಲಗರ ತಾ: ಅಳಂದ ಜಿಲ್ಲೆ ಗುಲಬರ್ಗಾ ಇವರು ಆಗಾಗ ಶಿವಣಿ ಗ್ರಾಮಕ್ಕೆ
ಬಂದಾಗ ಇವರಿಬ್ಬರು ಕೂಡ ನನಗೆ ನೀನು ಸರಿಯಾಗಿ ಇಲ್ಲಾ ನನ್ನ ತಮ್ಮನ ಇನ್ನೊಂದು ಮದುವೆ ಮಾಡುತ್ತೇವೆ
ಅಂತಾ ಕಿರುಕುಳ ನೀಡುತ್ತಿದ್ದರು. ಸದರಿ ನಾನು ಹಬ್ಬ ಹರಿದಿನಗಳಲ್ಲಿ ನನ್ನ ತವರೂ ಮನೆಗೆ ಹೋದಾಗ
ನನ್ನ ತಾಯಿ ಅಲಕಾಬಾಯಿ ಗಂಡ ತ್ರೀಂಬಕ ಖಿಂಡೆ, ನನ್ನ ತಂದೆ ತ್ರೀಂಬಕ ತಂದೆ ಸಂಬಾಜಿ ಖಿಂಡೆ ಇವರಿಗೆ
ನನ್ನ ಗಂಡ ದೀಲಿಪ, ಅತ್ತೆ ಶಕುಂತಲಾ, ನಾದಣಿ ಹೇಮಾ, ಮತ್ತು ಹೇಮಾಳ ಗಂಡ ಕಲ್ಯಾಣರಾವ ಹಿರಂಗಗಾವೆ
ಇವರೆಲ್ಲರೂ ನನಗೆ ನೀನು ಸರಿಯಾಗಿ ಇಲ್ಲಾ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ ದೀಲಿಪ
ಇತನ ಇನ್ನೊಂದು ಮದುವೆ ಮಾಡುತ್ತೇವೆ ಅಂತಾ ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ
ನೀಡುತ್ತಿದ್ದಾರೆ. ದಿನಾಂಕ 05-06-2012 ರಂದು 10-00 ಗಂಟೆಗೆ ನಾನು ಮತ್ತು ನನ್ನ ಅಣ್ಣ ಉಮೇಶ
ತಂದೆ ತ್ರೀಂಬಕರಾವ ಖಿಂಡೆ ಇಬ್ಬರು ಕೂಡಿಕೊಂಡು ನನ್ನ ಗಂಡನ ಮನೆ ಶಿವಣಿ ಗ್ರಾಮಕ್ಕೆ ಬಂದಾಗ
ಅವಾಚ್ಯವಾಗಿ ಬೈದು ಮಾನಸಿಕ, ದೈಹಿಕ ಕಿರುಕುಳ ಕೊಟ್ಟ ನನ್ನ ಗಂಡ, ಅತ್ತೆ , ನಾದಣಿ ಮತ್ತು
ನಾದಣಿಯ ಗಂಡ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಇದೆ ಅಂತಾ ಹೇಳಿಕೆ ಕೊಟ್ಟಿದ್ದರ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 93/2012 ಕಲಂ 143,147,494,498 (ಎ), 323,504,506 ಜೊತೆ 149 ಐಪಿಸಿ :-
ದಿನಾಂಕ 05/06/2012 ರಂದು
ಫಿರ್ಯಾದಿಶ್ರೀಮತಿ. ಪದ್ಮಾವತಿ
ಗಂಡ ವೆಂಕಟ ಗೋಧೆ ವಯ: 25 ವಷð ಜಾತಿ : ಕುರಬುರ ಉ:
ಮನೆಕೆಲಸ ಸಾ: ಸುಭಾಷ ಚೌಕ ರವರು ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ದಿನಾಂಕ
17/04/2008 ರಂದು ಭಾಲ್ಕಿಯ ವೆಂಕಟ ತಂದೆ ನರಸಿಂಗರಾವ ಗೋದೆ ಈತನೊಂದಿಗೆ ಮದುವೆಯಾಗಿರುತ್ತದೆ.
ನನಗೆ ಮದುವೆಯಾದ ನಂತರ 2 ಹೆಣ್ಣು ಮಕ್ಕಳು ಆಗಿದ್ದು ಆದ ನಂತರ ಈಗ ಸುಮಾರು 2010 ನೇ ವರ್ಷದಿಂದ
ನನ್ನ ಗಂಡ ವೆಂಕಟ ಈತನು 2 ವರ್ಷ ಮಾತ್ರ ಒಳ್ಳೆ ಸಂಸಾರ ಮಾಡಿರುತ್ತಾನೆ. ತದ ನಂತರ ನನ್ನ ಗಂಡ 1)
ವೆಂಕಟ ತಂದೆ ನರಸಿಂಗರಾವ 2) ಸೋನುಬಾಯಿ ಗಂಡ ನರಸಿಂಗರಾವ (ಅತೆ) 3) ನರಸಿಂಗರಾವ ತಂದೆ
ಭಾಲ್ಕೇಶ್ವರ (ಮಾವ) 4) ಗಣೇಶ ತಂದೆ ನರಸಿಂಗರಾವ (ಭಾವ) ಎಲ್ಲರು ಸಾ: ಸುಭಾಷ ಚೌಕ ಭಾಲ್ಕಿ 5)
ಶಶಿಕಾಲಾ ಗಂಡ ಚಿದಾನಂದ ಸಾ: ಕಾಶೆಮಪೂರ (ನಾದನಿ 6) ಸರಸ್ವತಿ ಗಂಡ ಪ್ರೇಮಶೇಖರ (ನಾದನಿ) ಸಾ:
ಚಾಂದೊರಿ ಎಲ್ಲರು ಕೂಡಿ ಕೊಂಡು ಅವಾಚ್ಯವಾಗಿ ಬೈದು ನಿನ್ನ ನಡತೆ ಸರಿಯಾಗಿರುವುದಿಲ್ಲ. ಅಂತಾ ನನಗೆ
ದಿನಾಲು ಮಾನಸಿಕ ಹಾಗು ದೈಹಿಕವಾಗಿ ಕಿರಕುಳ ಕೋಡುತ್ತಿರುತ್ತಾರೆ. ಎರಡನೆ ಮಗು ನನಗೆ ಹುಟ್ಟಿಲ್ಲ.
ಎಂದು ಅವಾಚ್ಯವಾಗಿ ಬೈದು ನನ್ನ ಮೇಲೆ ಸುಳ್ಳು ಅಪಾದನೆ ಮಾಡಿ ಕೈಯಿಂದ ದಿನಾಲು ಹೋಡೆಯುವುದು
ಮತ್ತು ಒದೆಯುವುದು ಮಾಡಿರುತ್ತಾರೆ ಹಾಗು ನೀನ ತಂದೆಯ ಮನೆಯಿಂದ ವರದಕ್ಷಣೆ ತೆಗೆದು ಕೊಂಡು ಬಾ
ಇಲ್ಲಿದಿದರೆ ನಮ್ಮ ಮನೆಯಲ್ಲಿ ಇರಬೇಡ ಮನೆಯಿಂದ ಹೋರಗೆ ಹೋಗು ವರದಕ್ಷಣೆ ತರದಿದರೆ ನೀನಗೆ ಖತಂ
ಮಾಡುತ್ತೇನೆ. ಅಂತ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಅಲ್ಲದೆ ನನ್ನ ಗಂಡನು ನಾನು ಜೀವಂತ
ಇರುವಾಗಲ್ಲೆ ದಿನಾಂಕ 27/05/2012 ರಂದು ಕಲವಾಡಿ ಗ್ರಾಮದ ದತ್ತು ನೇಳಗೆ ಎಂಬುವರ ಮಗಳಾದ ರೇಣುಕಾ
ಇವಳೊಂದಿಗೆ ಮದುವೆವಾಗಿದ್ದು ಇರುತ್ತದೆ.. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.
ಮಾರ್ಕೇಟ ಪೊಲೀಸ ಠಾಣೆ ಗುನ್ನೆ ನಂ. 75/2012 ಕಲಂ. 419, 420, 468, 471, 474, ಜೊತೆ 34 ಐ.ಪಿ.ಸಿ :-
ದಿನಾಂಕ: 05-06-2012 ರಂದು ಫಿರ್ಯಾಧಿ
ಪ್ರೇಮಲಾ ಗಂಡ ಸಣ್ಮುಖಪ್ಪಾ ಪಾಟೀಲ್ ಸಾ: ನಿಟ್ಟೂರ ಸದ್ಯ ಗುಮ್ಮಾ ಕಾಲೋನಿ, ಫಿಯರ್ಾದಿ ಗುಮ್ಮಾ
ಕಾಲೋನಿಯಲ್ಲಿ ಪ್ಲಾಟ ನಂ 12-29 ಅಳತೆ 30+40 ನೇದ್ದು ಇದ್ದು ಆರೋಪಿತನಾದ ವಿಜಯಕುಮಾರ ತಂದೆ
ನಾಗುರಾಮ, ಜ್ಯೋತಿಬಾ ಸಾ: ರಾಜನಾಳ ಇವರು ಸದರಿ ಪ್ಲಾಟನ ನಕಲಿ ದಾಖಲೆಗಳನ್ನು ಸ್ಥಷ್ಟಿಸಿ ದಿನಾಂಕ
12-04-2010 ರಂದು ಒಬ್ಬ ಮಹಿಳೆಯಿಂದ ಸುಳ್ಳು ಮಾರಾಟ ಪತ್ರವನ್ನು ಮಾಡಿಕೊಂಡಿರುತ್ತಾರೆ ಮತ್ತು
ವಿಜಯಕುಮಾರ ಇವನು ಸಿದ್ರಾಮ ತಂದೆ ಶರಣಪ್ಪಾ ಇವನಿಗೆ ಮಾರಾಟ ಮಾಡಿರುತ್ತಾನೆ ಸದರಿ ಅಸ್ತಿಯನ್ನು
ಕಬಳಿಸುವ ಸಲುವಾಗಿ ಬೇರೆಯವರಿಗೆ ಮಾರಾಟ ಮಾಡಿ ಫಿಯರ್ಾದಿಗೆ ಮೋಸ ಮತ್ತು ವಂಚನೆ ಮಾಡಿರುತ್ತಾರೆ.
ಅಂತ ಫಿಯರ್ಾದು ಮೇರಗೆ ಬೀದರ ಮಾ ಪೊಲೀಸ ಠಾಣೆಯ ಅಪರಾಧ ಸಂಖ್ಯೆ 75/2012 ಕಲಂ 419, 420,
468, 471, 474, ಜೊತೆ 34 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ. 65/12 ಕಲಂ 504, 506, 353 ಐಪಿಸಿ :-
ದಿನಾಂಕ 06-06-2012 ರಂದು 1530 ಗಂಟೆಗೆ ಫಿರ್ಯಾಧಿ ಶ್ರೀ ವಿನೋದಕುಮಾರ
ತಂದೆ ದತ್ತಾತ್ರಿ ಕುಲಕರ್ಣಿ ಸಾ: ಪಿಡಿಓ ಬಾಳೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ
ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಕೇರೂರ ಗ್ರಾಮದ ತುಕಾರಾಮ ತಂದೆ ವಿಶ್ವನಾಥ ನಾಗಲಗಿದ್ದೆ
ಇತನು ಸುಮಾರು ಒಂದು ವರ್ಷದಿಂದ ಮಾಹಿತಿ ಹಕ್ಕು ವಿಷಯ ಮುಂದಿಟ್ಟು ಅದರ ನೆಪದಲ್ಲಿ ನನಗೆ ಫೋನ ಮೂಲಕ
ಮತ್ತು ಬರವಣಿಗೆ ಮೂಲಕ ಅನೇಕ ಸಲ ಪತ್ರ ವ್ಯವಹಾರ ಮಾಡಿದ್ದು ಅದರ ಪ್ರಕಾರ ಸರಿಯಾಗಿ ಮಾಹಿತಿ ಲಿಖಿತ
ಮೂಲಕ ಕೊಟ್ಟಿರುತ್ತೇನೆ. ಸದರಿ ಇತನು ನನಗೆ ತೊಂದರೆ ಕೊಡುತ್ತಿದ್ದ ಬಗ್ಗೆ ನನ್ನ
ಮೇಲಾಧಿಕಾರಿಯವರಗೆ ತಿಳಿಸಿರುತ್ತೇನೆ. ದಿನಾಂಕ 06-06-2012 ರಂದು ಮುಂಜಾನೆ ಯಥಾ ಪ್ರಕಾರ
ಪಂಚಾಯತ ಕಾಯರ್ಾಲಯಕ್ಕೆ ಬಂದು ಕರ್ತವ್ಯ ನಿರ್ವಹಿಸುವಾಗ ತುಕಾರಾಮ ತಂದೆ ವಿಶ್ವನಾಥ ನಾಗಲಗಿದ್ದೆ
ಇತನು ಉದ್ದೇಶಪೂರ್ವಕವಾಗಿ ಕಾಯರ್ಾಲಯದಲ್ಲಿ ಬಂದು ನನಗೆ ಜೀವದ ಬೇದರಿಕೆ ಹಾಕಿ ನೀನು ಯಾವ ರೀತಿ
ಪಂಚಾಯತಿಯಲ್ಲಿ ಕೆಲಸ ಮಾಡುತ್ತಿ ಅಂತಾ ಬಾಯಿಗೆ ಬಂದಂತೆ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದು
ಹೊಡೆಯಲಿಕ್ಕೆ ಬಂದಿರುತ್ತಾನೆ ಹಾಗೂ ನನ್ನ ಕರ್ತವ್ಯದಲ್ಲಿ ಅಡತಡೆ ಮಾಡಿರುತ್ತಾನೆ ಅಂತಾ ನೀಡಿದ
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಗೋಳ್ಳಲಾಗಿದೆ.
No comments:
Post a Comment