ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 13-06-2012
ನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 121/12 ಕಲಂ 454,457,380 ಐಪಿಸಿ :-
ದಿನಾಂಕ 08-06-2012 ರಿಂದ 10-06-2012 ರ ಅವಧಿಯಲ್ಲಿ ಕರ್ನಾಟಕ ಗೃಹ ಮಂಡಳಿಯ ನೌಬಾದ ಬಡವಾಣೆಯಲ್ಲಿ ವಾಣಿಜ್ಯ ಸಂಕೀರ್ಣದ ಮೋದಲನೆ ಮಹಡಿಯಲ್ಲಿರುವ ಜಿಲ್ಲಾ ಯೋಜನಾ ಕಛೇರಿ ಕನರ್ಾಟಕ ಗೃಹ ಮಂಡಳಿ ಬೀದರ ಕಛೇರಿಗೆ ಅಳವಡಿಸಿದ ಒಟ್ಟು 3 ಅಲೂಮಿನಿಯಂ ಬಾಗಿಲುಗಳು ಚೌಕಟ್ಟು ಸಮೇತ ಕಳವು ಮಾಡಿಕೊಂಡು ಹೊಗಿರುತ್ತಾರೆ ಕಳ್ಳತನವಾದ 3 ಅಲೂಮಿನಿಯಂ ಬಾಗಿಲುಗಳು ಅಂದಾಜು ಕಿಮ್ಮತ್ತು ರೂ 20,000/- ವಾಗಿರುತ್ತದೆ. ಅಂತಾ ದಿನಾಂಕ 12-06-2012 ರಂದು ಅಂತಾ ಸದರಿ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಬಸವರಾಜ ತಂದೆ ಹನುಮಂತ ವಯ 23 ವರ್ಷ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬೀದರ ನಗರ ಪೊಲೀಸ್ ಠಾಣೆ ಗುನ್ನೆ ನಂ. 47/12 ಕಲಂ 498(ಎ),324,504,506(2) ಜೊತೆ 149 ಐಪಿಸಿ ಮತ್ತು 3 & 4 ಡಿ.ಪಿ ಆಕ್ಟ್. :-
ದಿನಾಂಕ: 12/06/2012 ರಂದು 1905 ಗಂಟೆಗೆ ಫೀರ್ಯಾದಿ ಶ್ರೀಮತಿ ಸುಮಯ್ಯಾ ಅಫಸಿನ್ ಗಂಡ ಮೊಹ್ಮದ ರಿಯಾಜ್ ವ:26 ವರ್ಷ ಉ:ಮನೆ ಕೆಲಸ ಸಾ:ಮನಿಯಾರ ತಾಲಿಮ ಬೀದರ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೇನೆಂದರೆ, ಫಿಯರ್ಾದಿತಳಿಗೆ ದಿನಾಂಕ:08/11/2007 ರಂದು ಆರೋಪಿ ಮಹ್ಮದ ರಿಯಾಜ್ ತಂದೆ ಮಹ್ಮದ ಸುಲ್ತಾನ ಜೊತೆಯಲ್ಲಿ ಮುಸ್ಲಿಂ ಧರ್ಮದ ಪ್ರಕಾರ ಲಗ್ನವಾಗಿದ್ದು, ವರದಕ್ಷಿಣೆ ರೂಪದಲ್ಲಿ 5-ತೊಲೆ ಬಂಗಾರ, 15-ತೊಲೆ ಬೆಳ್ಳಿ, 2-ಲಕ್ಷ ರೂಪಾಯಿಯ ಸಾಮಾನುಗಳೂ ಹಾಗು 5-ಲಕ್ಷ ರೂಪಾಯಿಯ ಒಂದು ನಿವೇಶನ ಕೊಟ್ಟಿದ್ದು ಮದುವೆಯಾದ 6-7ತಿಂಗಳಗಳ ವರೆಗೆ ಆರೊಪಿತರು ಸರಿಯಾಗಿ ಇಟ್ಟುಕೊಂಡು ನಂತರ ಫಿರ್ಯಾದಿತಳಿಗೆ ದಿನಾಲು ಬೈಯುವುದು, ಕಿರುಕುಳ ನೀಡುವುದು ಅಲ್ಲದೇ ನಿನು ನಮ್ಮ ಮನೆಗೆ ಕಾಲಿಟ್ಟಿದಾಗಿನಿಂದ ನಮಗೆ ಶನಿ ಬಡಿದ ಹಾಗೆ ಆಗಿದೆ. ನಿಮ್ಮ ಅಪ್ಪನಿಗೆ ಗಂಡು ಮಕ್ಕಳೂ ಇಲ್ಲಾ ಇತ್ಯಾದಿಯಾಗಿ ಕಿರುಕುಳ ನೀಡಿ ತವರು ಮನೆಯಿಂದ 5-ಲಕ್ಷ ರೂ. ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೇದರಿಕೆ ಹಾಕಿರುತ್ತಾರೆ. ತನ್ನ ಸಂಸಾರ ಹಾಳಾಗಬಾರದೆಂದು ಆರೋಪಿತರಿಗೆ ಬುದ್ದಿವಾದ ಹೇಳಿದರೂ ಕೇಳದಿದ್ದರಿಂದ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಸದರಿಯವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಗಾಂಧಿ ಗಂಜ ಪೊಲೀಸ್ ಗುನ್ನೆ ನಂ. 91/12 ಕಲಂ 287, 304(ಎ) ಐಪಿಸಿ :-
ದಿನಾಂಕ: 12-06-2012 ರಂದು ಫೀರ್ಯಾದಿ ಶ್ರೀ ಸಂತೋಷ ತಂದೆ ಚಂದ್ರಶೇಖರ ನಾಟಿಕರ್ ವ: 27 , ಉಪಾರ ಕೇಲಸ ಸಾ: ಸಿಎಮ್ಸಿ ಕಾಲೋನಿ ಮೈಲೂರ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಫಿಯರ್ಾದಿಯ ಪತ್ನಿಯು ಅವರ ಮನೆಯ ಪಕ್ಕದ ಹಿಟ್ಟಿನ ಗಿರಣಿಗೆ ಅವರ ಇಬ್ಬರು ಮಕ್ಕಳಾದ 1) ಸಾಕ್ಷಿ @ ಸೋನಿ 8 ವರ್ಷ 2) ವಷರ್ಾ 4 ವರ್ಷ ಇವರಿಗೆ ಜೋಳ ಬಿಸಿಕೊಂಡು ಬರಲು ಕಳಿಸಿದ್ದು ಹಿಟ್ಟಿನ ಗಿರಣಿಯ ಮಾಲಿಕಳಾದ ಚಂದ್ರಕಲಾ ಇವಳು ಹಿಟ್ಟಿನ ಗಿರಣಿ ಚಾಲು ಮಾಡಿ ಜೋಳಾ ಬಿಸುವಾಗ 0800 ಗಂಟೆಗೆ ವರ್ಷಾ ಇವಳಿಗೆ ಹಿಟ್ಟಿನ ಗಿರಣಿಯ ಯಂತ್ರದ ಬೆಲ್ಟ ಅವಳ ತಲೆಗೆ ಹತ್ತಿ ಅವಳ ತಲೆ ಪೂರ್ತಿಯಾಗಿ ಜಜ್ಜಿ ಬಲಗೈ ಕಟ್ಟಾಗಿ ಬಲ ಕಿವಿ ಜಜ್ಜಿ ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಸದರಿ ಹಿಟ್ಟಿನ ಗಿರಣಿಯ ಮಾಲಿಕಳಾದ ಆರೋಪಿ ಚಂದ್ರಕಲಾ ಗಂಡ ವಿಠ್ಠಲ ಡೊಣಗಾಪೂರೆ ಸದರಿ ಯಂತ್ರದ ಸುತ್ತಲು ಕಬ್ಬಿಣದ ಜಾಲಿ ಅಳವಡಿಸಲಾರದ ಕಾರಣ ಆ ಹಿಟ್ಟಿನ ಗಿರಣಿಯ ಯಂತ್ರ ಚಾಲು ಇದ್ದು ಬೆಲ್ಟ ಹತ್ತಿದ್ದರಿಂದ ವರ್ಷಾ ಇವಳು ಮೃತಪಟ್ಟಿರುತ್ತಾಳೆ. ಆರೋಪಿತಳ ಬೇಜವಾಬ್ದಾರಿ ಮತ್ತು ನಿರ್ಲಕ್ಷತನದಿಂದ ಈ ಘಟನೆ ಸಂಭವಿಸಿರುತ್ತದೆ. ಅಂತಾ ನಿಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬೀದರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ 49/2012 ಕಲಂ 457,380 ಐಪಿಸಿ :-
ದಿನಾಂಕ 13/06/12 ರಂದು ಬೆಳಿಗ್ಗೆ 0845 ಗಂಟೆಗೆ ಫೀರ್ಯಾದಿ ಶ್ರೀಮತಿ ಲಲಿತಾ ಗಂಡ ಶಾಂತಯ್ಯಾ ಸಾ// ಕಮಠಾಣಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಕಮಠಾಣಾ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದು ಹೀಗಿರಲಾಗಿ ನಾನು ಮತ್ತು ನಮ್ಮೂರ ವೀರೇಶ ಇಬ್ಬರು ದೇವಸ್ಥಾನದ ಕಮಿಟಿಯಲ್ಲಿ ನಿರ್ಧರಿಸಿದಂತೆ ಪಾಳಿ ಪ್ರಕಾರ ಕೆಲಸ ಮಾಡುತ್ತಿರುತ್ತೇವೆ. ಈ ವರ್ಷ ನನ್ನ ಪಾಳಿ ಇದ್ದ ಪ್ರಯುಕ್ತ ಪ್ರತಿ ದಿವಸ ಬೆಳಿಗ್ಗೆ 0800 ಗಂಟೆಗೆ ದೇವಸ್ಥಾನಕ್ಕೆ ಹೋಗಿ ಬೀಗ ತೆಗೆದು ಪೂಜೆ ಮಾಡಿ ಮತ್ತೆ ದೇವಸ್ಥಾನದ ಬಾಗಿಲು ಬೀಗ ಹಾಕಿಕೊಂಡು ಮನೆಗೆ ಹೋಗುತ್ತೇನೆ. ಪ್ರತಿ ದಿವಸದಂತೆ ಇಂದು 13/06/12 ರಂದು ಬೆಳಿಗ್ಗೆ 0800 ಗಂಟೆಗೆ ನಾನು ಮನೆಯಿಂದ ದೇವಸ್ಥಾನಕ್ಕೆ ಬಂದಾಗ ದೇವಸ್ಥಾನದ ಗರ್ಭಗುಡಿಯ ಬಾಗಿಲ ಬೀಗ ಮುರಿದಿದ್ದು ನಾನು ಕಬ್ಬಿಣದ ಬಾಗಿಲ ಜಾಲಿಯಿಂದ ಒಳಗೆ ನೋಡಲು ಒಳಗೆ ಇದ್ದ ವೀರಭದ್ರೇಶ್ವರ ದೇವರ ಕಂಚಿನ ಮೂ ಹಾಗೂ ಹಿತ್ತಾಳೆ ಗಂಟೆಗಳು ಇರಲಾರದ ಕಾರಣ ಗಾಬರಿಗೊಂಡು ದೇವಸ್ಥಾನದ ಕಮೆಟಿಯ ಅಧ್ಯಕ್ಷರಿಗೆ ಫೋನ ಮಾಡಿ ವಿಷಯ ತಿಳಿಸಿದಾಗ ಸದರಿಯವರೆಲ್ಲರು ಹಾಗೂ ಇತರರು ಬಂದು ನೋಡಲು ಯಾರೊ ಅಪರಿಚಿತ ಕಳ್ಳರು ದಿನಾಂಕ 12/06/12 ರಿಂದ 13/06/12 ರ ಮದ್ಯ ರಾತ್ರಿ ವೇಳೆಯಲ್ಲಿ ವೀರಭದ್ರೇಶ್ವರ ದೇವಸ್ಥಾನದ ಬಾಗಿಲು ಮುರಿದು ಒಳಗೆ ಪ್ರವೇಶ ಮಾಡಿ 10 ಕೆ.ಜಿ ತೂಕ ಉಳ್ಳ ದೇವರ ಕಂಚಿನ ಮೂರ್ತಿ ಅಂ. ಕೀ. ರೂ. 21000/- ಹಾಗೂ 15 ಹಿತ್ತಾಳೆ ಗಂಟೆಗಳು ಅಂ, ಕೀ. ರೂ. 3000/- ನೇದ್ದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 99/12 ಕಲಂ 448, 323, 427, 504, 506 ಐಪಿಸಿ :-
ದಿನಾಂಕ : 12/06/2012 ರಂದು 1900 ಗಂಟೆಗೆ ಫಿರ್ಯಾದಿ ಶ್ರೀ ಅಬ್ದುಲ ಹಫೀಜ ತಂದೆ ಅಬ್ದುಲ ಸಲೀಂ ಪೆಸಕಾರ 23 ವರ್ಷ ಜಾ : ಮುಸ್ಲಿಂ ಉ : ಮೊಬ್ಯಲ ಅಂಗಡಿ ಸಾ : ಮಾಶುಮ ಪಾಶಾ ಕಾಲೋನಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ಕನ್ನಡದ ಫಿರ್ಯಾದು ಅರ್ಜಿ ನೀಡಿದ್ದು ಅದರ ಸಾರಾಂಶವೆನಂದರೆ ಇಂದು ದಿನಾಂಕ : 12/06/2012 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ನನ್ನ ಮೊಬ್ಯಲ ಅಂಗಡಿ ತಾಜ ಮೇಡಿಕಲ ಎದರುಗಡೆ ಇದ್ದದು ಅದರಲ್ಲಿ ಕೆಲಸ ಮಾಡುತ್ತಾ ಕುಳಿತಾಗ ಭಾಲ್ಕಿಯ ಮೇಘರಾಜ ನಿಗೆವಾನ ಸಾ : ಖಂಡ್ರೆ ಗಲ್ಲಿ ಭಾಲ್ಕಿ ಈತನು ನನ್ನ ಅಂಗಡಿಯಲ್ಲಿ ಅತಿಕ್ರಮ ಪ್ರವೇಶ ಮಾಡಿ ವಿನಾ ಕಾರಣ ಜಗಳ ತೆಗೆದು 5 ಸಾವಿರ ರೂ ನನಗೆ ಹಫ್ತಾ ಕೊಡಬೇಕು ಸೂಳಿ ಮಗನಗೆ ಹಣ ಕೊಡಲಿಲ್ಲ ಅಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಎಂದು ಜೀವದ ಬೆದರಿಗೆ ಹಾಕಿರುತ್ತಾನೆ ನಂತರ ಕಲ್ಲು ತೆಗೆದುಕೊಂಡು ಅಂಗಡಿಯ ಗ್ಲಾಸಿಗೆ ಹೊಡೆದು ಗ್ಲಾಸ ಓಡೆದು ಹಾಕಿರುತ್ತಾನೆ. ನನಗೆ ಕ್ಯಯಿಂದ , ಬೆನ್ನಲ್ಲಿ ,ಹೊಟ್ಟೆಯಲ್ಲಿ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment