Police Bhavan Kalaburagi

Police Bhavan Kalaburagi

Monday, June 4, 2012

GULBARGA DIST REPORTED CRIMES


ಕೊಲೆ ಪ್ರಕರಣದ ಪ್ರಮುಖ ಆರೋಪಿ ನ್ಯಾಯವಾದಿ  ಸೈಯದ ಮಜರ ಹುಸೇನ ಬಂಧನ, ಕೊಲೆ ಕೃತ್ಯಕ್ಕೆ ಬಳಸಿದ ಕಾರ, ಮಾರಕಾಸ್ತ್ರ ಜಪ್ತಿ .   
ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಪೊಲೀಸ್ ಅಧೀಕ್ಷಕರು, ಗುಲಬರ್ಗಾ, ಮಾನ್ಯ ಕಾಶಿನಾಥ ತಳಕೇರಿ ಅಪರ್ ಪೊಲೀಸ್ ಅಧೀಕ್ಷಕರು, ಗುಲಬರ್ಗಾ, ಗ್ರಾಮಾಂತರ ಉಪ-ವಿಭಾಗದ ಉಪಾಧೀಕ್ಷರಾದ  ಹೆಚ. ತಿಮ್ಮಪ್ಪ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಯಾದ ಶ್ರೀ ಚಂದ್ರಶೇಖರ ಬಿಪಿ ವೃತ್ತ ನಿರೀಕ್ಷಕರು ಎಂ.ಬಿ.ನಗರ ಮತ್ತು ಪಂಡಿತ ಸಗರ ಪೊಲೀಸ್ ಸಬ್- ಇನ್ಸಪೇಕ್ಟರ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ, ಸಂಜೀವಕುಮಾರ ಪಿ.ಎಸ.ಐ ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರಾದ ಶಂಕರ, ಚಂದ್ರಕಾಂತ, ಪ್ರಭಾಕರ, ಅಶೋಕ, ಕಮಲರಾಯ, ಅರ್ಜುನ ರವರು ಕೂಡಿಕೊಂಡು ದಿನಾಂಕ: 03-06-2012 ರಂದು ಸೇಡಂ ಬಸ್ಸ ನಿಲ್ದಾಣದ ಹತ್ತಿರ ಕೊಲೆ ಮಾಡಿದ ಆರೋಪಿಯ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ಮಾಲಗತ್ತಿ ಸಿಮಾಂತರದ ಸರ್ವೆ ನಂ: 45, ರಲ್ಲಿ 1 ಎಕರೆ 45 ಗುಂಟೆ ಜಮಿನಿನ ವಿಷಯದಲ್ಲಿ ಮಹದಮ ಹಾರೂನ ತಂದೆ ಜಾನಿಮಿಯ್ಯಾ ಸಾ|| ನೂರಾನಿ ಮೋಹಲ್ಲಾ ಗುಲಬರ್ಗಾ ಇತನನ್ನು ಕೊಲೆ ಮಾಡಿದ ಸೈಯದ ಮಹರ ಹುಸೇನ ತಂದೆ ಸೈಯದ ಇಸ್ಮಾಯಿಲ್ ವ|| 36 ವರ್ಷ ಸಾ|| ನೂರಾನಿ ಮೋಹಲ್ಲಾ ಹಾಗರಗಾ ರೋಡ ಗುಲಬರ್ಗಾ ಇತನನ್ನು ದಸ್ತಗಿರಿ ಮಾಡಿ ತನಿಖೆಗೆ ಒಳಪಡಿಸಿ ವಿಚಾರಣೆ ಮಾಡಲಾಗಿ ದಿನಾಂಕ: 14-03-2012 ರಂದು ಮಹಮದ ಹಾರೂನ ಇತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿದ್ದು, ಕೊಲೆ ಮಾಡಲು ಉಪಯೋಗಿಸಿದ ಮಾರಕಾಸ್ತ್ರಗಳು, ಕಾರು ಆರೋಪಿತನಿಂದ ಜಪ್ತಿ ಮಾಡಕೊಂಡಿರುತ್ತಾರೆ.ಅತ್ಯಂತ ಸೂಕ್ಷ್ಮ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಸೈಯದ ಮಜರ ಹುಸೇನ ವಕೀಲ ಇತನನ್ನು  ನಿನ್ನೆ ರಾತ್ರಿ ಯಶಸ್ವಿಯಾಗಿ ಪತ್ತೆ ಮಾಡಿದ ತಂಡಕ್ಕೆ ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ ರವರು  ಪ್ರಶಂಶಸಿ  ಬಹುಮಾನ ಘೋಷಣೆ ಮಾಡಿರುತ್ತಾರೆ 
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಚಂದ್ರಕಾಂತ ತಂದೆ ಅಂಬರಾಯ ನಾಟೀಕಾರ ಗುಲಬರ್ಗಾ ಸಾ|| ಎಸ್.ಎಮ್. ಕೃಷ್ಣಾ ಕಾಲೋನಿ ಡಬರಾಬಾದ್ ಗುಲಬರ್ಗಾರವರು ನ್ನ ಆಟೋರಿಕ್ಷಾ ನಂ.ಕೆ.ಎ-32 4648 ನೇದನ್ನು ಕಳೆದ 7 ತಿಂಗಳ ಹಿಂದೆ ಗುಲಬರ್ಗಾ ನಗರದ ಬ್ರಹ್ಮಪುರ ಬಡಾವಣೆಯ ಕಲ್ಯಾಣಿ ಬಾಳಿಕಾಯಿ ಈತನಿಗೆ 25,000/- ರೂ.ಗಳಿಗೆ ಮಾರಾಟ ಮಾಡಿದ್ದು, ಅದರಲ್ಲಿ 10,000/- ನಗದು ಕೊಟ್ಟಿದ್ದು, ಉಳಿದ ಹಣ ಸದರಿ ಆಟೋ ಮೇಲೆ ಪೈನಾನ್ಸ್ ಇದ್ದುದರಿಂದ ಕಲ್ಯಾಣಿ ಈತನೆ ಕಟ್ಟಿಕೊಳ್ಳಬೇಕೆಂದು ಮಾತುಕತೆ ಆಗಿರುತ್ತದೆ.  ಕಲ್ಯಾಣಿ ಈತನು ಪೈನಾನ್ಸ್ ಹಣ ಕೊಡದೇ ಇರುವದರಿಂದ ನನಗೆ ಪೈನಾನ್ಸ್ ದವರು ಕೇಳುತ್ತಿದ್ದರು, ಕಾರಣ ಕಲ್ಯಾಣಿ ಈತನಿಗೆ ಪೈನಾನ್ಸ್ ಹಣ ಏಕೆ ಕಟ್ಟಿರುವದಿಲ್ಲಾ ಅಂತಾ ಕೇಳಿದಕ್ಕೆ, ದಿನಾಂಕ 03-06-2012 ರಂದು ರಾತ್ರಿ 8 ಗಂಟೆ ಸುಮಾರಿಗೆ ಬ್ರಹ್ಮಪುರ ಬಡಾವಣೆಯ ಲಾಲಗೇರಿ ಕ್ರಾಸ್ ಹತ್ತಿರ ಕಲ್ಯಾಣಿ ಇತನು ನನಗೆ ಹೊಡೆದು ಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 39/12 ಕಲಂ 341, 323, 504  ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಟಾರ ಸೈಕಲ ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ; ಶ್ರೀ ಚಂದ್ರಕಾಂತ ತಂದೆ ಶರಣಪ್ಪಾ ತಾಂಡೂರ ಸಾ:ಮನೆ ನಂ.1545/86 ಶಿವಾಜಿ ನಗರ ಗುಲಬರ್ಗಾ ವರು ನನ್ನ ಹಿರೋ ಹೊಂಡಾ ಪ್ಯಾಶನ ಪ್ಲಸ ಕಪ್ಪು ಬಣ್ಣ ಮೋಟಾರ ಸೈಕಲ ನಂ: ಕೆಎ 32 ಕ್ಯೂ-5042 ನೇದ್ದು, ದಿನಾಂಕ:05/05/2012 ರಂದು ರಾತ್ರಿ 8:00 ಗಂಟೆಗೆ ಗಂಜ ಕಾಲೋನಿಯ ಡಾ||ಮಂದಕನಳ್ಳಿಯವರ ಆಸ್ಪತ್ರೆಯ ಎದುರುಗಡೆ ನಿಲ್ಲಿಸಿದ್ದಿ,  ನನ್ನ ಕೆಲಸ ಮುಗಿಸಿಕೊಂಡು ಮರಳಿ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾಗಿರುವ ಮೋಟಾರ ಸೈಕಲ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ ನಂ.51/2012 ಕಲಂ.379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: