ಕಳ್ಳತನ
ಪ್ರಕರಣ:
ಅಶೋಕ
ನಗರ ಪೊಲೀಸ್ ಠಾಣೆ:ಶ್ರೀ ಚಂದ್ರಕಾಂತ
ತಂದೆ ಕೀಶನರಾವ ಕುಲಕರ್ಣಿ ಸಾ|| ಅಂದೋಲಾ ತಾ|| ಜೇವರ್ಗಿ ಹಾವ|| ಅರ್ಜುನ ಮಿತ್ರಾ ರವರ ಮನೆಯಲ್ಲಿ ಬಾಡಿಗೆ ರೈಲ್ವೆ ಗೇಟ
ಹತ್ತಿರ ಬಿದ್ದಾಪೂರ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ: 31-05-2012 ರಂದು ಭಾರತ ಬಂದ
ಇರುವದಿರಿಂದ ನಮ್ಮ ಆಫೀಸ ಬಂದ್ ಮಾಡಿ ಮನೆಗೆ ಹೋಗಿದ್ದು, ಸಾಯಂಕಾಲ 4 ಗಂಟೆ ಸುಮಾರಿಗೆ ವಿಶ್ವರಾಜ
ರೋಡಲೈನ್ಸ ರವರು ಸೋಲಾರ ಬ್ಯಾಟರಿ ಮತ್ತು ಆಕ್ಸಸರಿಸ್ ಗಳನ್ನು ಟಂಟಂದಲ್ಲಿ ಕಳುಹಿಸಿದ್ದರಿಂದ
ಅಂಗಡಿಗೆ ಬಂದು ಸೋಲಾರ ಬ್ಯಾಟರಿಗಳನ್ನು ಅಂಗಡಿಯಲ್ಲಿ ಇಟ್ಟು ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿರುತ್ತೆನೆ.ದಿನಾಂಕ:01-06-2012
ರಂದು ಮುಂಜಾನೆ 9-30 ಗಂಟೆಗೆ ಆಪೀಸ್ ಗೆ ಬಂದು ಅಂಗಡಿ ತೆಗೆಯಲು ಬಂದಾಗ ಬೀಗ ಇರಲಿಲ್ಲ, ಒಳಗೆ ಹೋಗಿ
ನೋಡಲಾಗಿ ಸೋಲಾರ ಬ್ಯಾಟರಿ 60 ಹೆಚಪಿ, ಸೋಲಾರ 2.5 ಎಸ.ಎಸ. ಎಂ.ಎಂ ಕೇಬಲ ವೈರಗಳು, ಸೋಲಾರ
ಲುಮಿನರಿಯ 11 ಅಸ್ಟ್ರಾ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಅಂಗಡಿಯ ಶೇಟರ ಬೀಗ ಮುರಿದು ಯಾರೊ
ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ
ಗುನ್ನೆ ನಂ: 48/2012 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment