ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಕು: ಸುನಂದ ತಂದೆ ರಾಮದಾಸ ರಾಠೋಡ
ಸಾ: ಕೆ.ಹೆಚ್.ಬಿ ಕಾಲೋನಿ ಸೋಲಾಪೂರ ರೋಡ ಬಿಜಾಪೂರರವರು ನಾನು ಮತ್ತು ನಮ್ಮ ದೊಡ್ಡಪ್ಪ ರೂಪಸಿಂಗ ರಾಠೋಡ, ಮತ್ತು ದೊಡ್ಡಮ ರುಕಾಮ್ಮಬಾಯಿ , ರೂಪಸಿಂಗ
ಇವರ ಪಿ.ಎ ಶ್ರೀಶೈಲ , ಸಪಾರಿ ವಾಹನ ಚಾಲಕ ಕಮಲಪ್ಪ ಎಲ್ಲಾರೂ ಸಪಾರಿ ವಾಹನ ನಂಬರ ಕೆಎ. 28
ಎಮ್ 5605 ನೇದ್ದರಲ್ಲಿ ಕುಳಿತು ದಿನಾಂಕ: 11/06/2012 ರಂದು ಬೆಳ್ಳಗಿನ ಜಾವ 1-00 ಗಂಟೆಗೆ ಬಿಜಾಪೂರದಿಂದ
ಹೈದ್ರಾಬಾದಕ್ಕೆ ಬರುತ್ತಿದ್ದಾಗ ರಾತ್ರಿ ಜೇವರ್ಗಿ ಸಮೀಪ ಸಪಾರಿ ವಾಹನ ಚಾಲಕ ಕಮಲಪ್ಪ ಇತನು
ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ರೋಡಿನ ಸೈಡಿಗೆ ಯಾವುದೆ ರೀತಿಯ
ಮುಂಜಾಗ್ರತೆ ಕ್ರಮ ಕೈಗೊಳ್ಳದೆ ನಿಲ್ಲಿಸಿದ ಲಾರಿ ನಂ ಕೆಎ-36/5281 ನೇದ್ದಕ್ಕೆ ಹಿಂದಿನಿಂದ ಜೋರಾಗಿ
ಡಿಕ್ಕಿ ಹೊಡೆದಿದ್ದರಿಂದ ನನಗೆ ಮತ್ತು ನಮ್ಮ
ದೊಡ್ಡಪ್ಪ,
, ದೊಡ್ಡಮ್ಮ , ವಾಹನ ಚಾಲಕ ಕಮಲ್ಲಪ್ಪ ಮೂವರಿಗೆ ಗಾಯಾ ಪೆಟ್ಟು ಆಗಿದ್ದು, ಪಿ.ಎ
ಶ್ರೀಶೈಲ ಇತನಿಗೆ ಭಾರಿ ಗಾಯಾಗಳಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಲಾರಿ ಕ್ಲಿನರ ಹುಸೇನ ಭಾಷ
ತಂದೆ ಮಹಿಬೂಬ ಇತನು ಕೂಡ ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುವಾಗ ಫರತಬಾದ ಹತ್ತಿರ
ಮೃತಪಟ್ಟಿರುತ್ತಾನೆ ಅವನ ಶವವು ಕೂಡ ಮರಳಿ ಸರಕಾರಿ ಆಸ್ಪತ್ರೆ ಜೇವರ್ಗಿಯಲ್ಲಿ ಇರುತ್ತದೆ. ಕಾರಣ
ನಮ್ಮ ಸಪಾರಿ ವಾಹನ ಚಾಲಕ ಕಮಲ್ಲಪ್ಪ ಮತ್ತು ಲಾರಿ ಚಾಲಕ ಹುಸೇನ ಭಾಷ ಇವರ ವಿರುದ್ದ ಕಾನೂನು
ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ
87/2012 ಕಲಂ 279, 337, 338, 283 , 304
(ಎ), ಐಪಿಸಿ
ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment