ಜೂಜಾಟ
ಪ್ರಕರಣ:
ಬ್ರಹ್ಮಪೂರ
ಪೊಲೀಸ್ ಠಾಣೆ:ದಿನಾಂಕ: 31-05-2012 ರಂದು ಸಾಯಂಕಾಲ ವಿಠಲ ನಗರ
ಬಡಾವಣೆಯ ರೋಜ ಅಪಾರ್ಟಮೆಂಟನ 2ನೇ ಅಂತಸ್ತಿನ ಕಿರಣ ಈತನ ಮನೆಯಲ್ಲಿ ಕೆಲವು ಜನರು
ಗುಂಪಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ
ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ಶ್ರೀ. ಶರಣಬಸವೇಶ್ವರ ಪಿ.ಐ
ಬ್ರಹ್ಮಪೂರ ಮತ್ತು 'ಎ' ಉಪ-ವಿಭಾಗದ
ಎ.ಎಸ್.ಪಿ ರವರಾದ ಶ್ರೀ.ಭೂಷಣ ಜಿ ಬೊರಸೆ ಹಾಗೂ 'ಎ' ಉಪ-ವಿಭಾಗದ ಅಪರಾಧ
ಪತ್ತೆ ದಳದ ಸಿಬ್ಬಂದಿಯವರಾದ ಮಹ್ಮದ ರಫಿ, ರಾಮು ಶಿವಪ್ರಕಾಶ,ಚಂದ್ರಕಾಂತ ರವರೆಲ್ಲರು ಹೋಗಿ
ದಾಳಿ ಮಾಡಲಾಗಿ ಜೂಜಾಡುತ್ತಿದ್ದ 8 ಜನರನ್ನು ಹಿಡಿದು
ಹೆಸರು ವಿಳಾಸ ವಿಚಾರಿಸಲು ಕಿರಣ ತಂದ ಶೃವಣಕುಮಾರ ಜಂಗೆ, ಸಾ|| ವಿಠಲನಗರ ಗುಲಬರ್ಗಾ,ಇತನಿಂದ
ನಗದು ಹಣ 15,500, ಮಹೇಶ ತಂದೆ
ಮಲ್ಲಿಕಾರ್ಜುನ ಪಾಟೀಲ, ಉ|| ಪೈನಾನ್ಸ ವ್ಯವಹಾರ, ಸಾ|| ಚೌಡೇಶ್ವರಿ ಕಾಲೋನಿ
ಬ್ರಹ್ಮಪೂರ ಗುಲಬರ್ಗಾ ಇತನಿಂದ ನಗದು ಹಣ 25000/-, ಪ್ರಶಾಂತ ತಂದೆ
ಶಿವಶರಣಪ್ಪ ಖಂಡೇಲವಾಲ, ಉ|| ಬಿ.ಕಾಂ ವಿದ್ಯಾರ್ಥಿ, ಸಾ|| ವಿಠಲನಗರ ಗುಲಬರ್ಗಾ ಇತನಿಂದ ನಗದು ಹಣ 14100/- , ಶೈಲೇಶ ತಂದೆ ಗುರುಲಿಂಗಪ್ಪ ಪಾಟೀಲ, ಉ|| ಪೈನಾನ್ಸ ವ್ಯವಹಾರ, ಸಾ|| ರಾಘವೇಂದ್ರ ಗುಡಿಯ
ಹತ್ತಿರ ಬ್ರಹ್ಮಪೂರ ಗುಲಬರ್ಗಾ ಸದರಿಯವನ ಹತ್ತಿರ ನಗದು ಹಣ 8200/-, ಆರೀಫ ಅಹ್ಮದ ತಂದೆ
ರಹೀಮ ಅಹ್ಮದ ಉ|| ಬಿ.ಇ ವಿದ್ಯಾರ್ಥಿ, ಸಾ||ಪ್ರಿಯದರ್ಶಿನಿ ಬಾರ
ಹತ್ತಿರ ಸ್ಟೇಷನ ಬಜಾರ ಗುಲಬರ್ಗಾ ಸದರಿಯವನ ಹತ್ತಿರ ನಗದು ಹಣ 10300/-, ಶೇಖ ಅಜೀಮ ತಂದೆ ಶೇಖಚಾಂದ ಉ| ಎಮ್.ಸಿ.ಎ
ವಿದ್ಯಾರ್ಥಿ, ಸಾ|| ಸಿಟಿ ಬಸ್ಸ
ನಿಲ್ದಾಣದ ಹತ್ತಿರ ಹಮಾಲವಾಡಿ ಸ್ಟೇಷನ ಬಜಾರ ಏರಿಯಾ ಗುಲಬರ್ಗಾ ಸದರಿಯವನ ಹತ್ತಿರ ನಗದು ಹಣ 9500/-,ಆಕಾಶ ತಂದೆ ಸಿದ್ದಲಿಂಗಪ್ಪ ಪಾಟೀಲ, ಉ|| ಎಮ್.ಕಾಂ
ವಿದ್ಯಾರ್ಥಿ , ಸಾ|| ಸಂಜೇವಾಣಿ ದಿನ
ಪತ್ರಿಕೆ ಹತ್ತಿರ ವಿದ್ಯಾನಗರ ಗುಲಬರ್ಗಾ ಸದರಿಯವನ ಹತ್ತಿರ ನಗದು ಹಣ 30500/-,ರಾಜಶೇಖರ ತಂದೆ ಮಲಕಾಜಪ್ಪ ಪಾಟೀಲ, ಉ|| ಪೈನಾನ್ಸ ವ್ಯವಹಾರ
ಸಾ|| ಮಹಾಲಕ್ಷ್ಮಿ ಲೇಔಟ ಬ್ರಹ್ಮಪೂರ ಗುಲಬರ್ಗಾ ಸದರಿಯವನ
ಹತ್ತಿರ ನಗದು ಹಣ 7500/-, ಅಲ್ಲದೆ ನೆಲದ ಮೇಲೆ
ಜೂಜಾಟಕ್ಕೆ ಇಡಲಾದ ನಗದು ಹಣ 21470/- ಹೀಗೆ ಒಟ್ಟು ನಗದು
ಹಣ 1,42,070/- ಮತ್ತು ಇಸ್ಪೆಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ
ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 68/2012 ಕಲಂ: 79, 80 ಕೆ.ಪಿ.ಆಕ್ಟ್
ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ: ಶ್ರೀ. ಬನ್ನಪ್ಪ ತಂದೆ ಚನ್ನಬಸಪ್ಪ ಜಿರಗಿ ಸಾ:ಪೋಲಿಸ
ಪಾಟೀಲಗಲ್ಲಿ ಸೇಡಂ ತಾ:ಸೇಡಂ ರವರು ನನ್ನ ಅಳಿಯ ವೀರೆಶ ತಂದೆ ಕಾಳಪ್ಪಾ ಹೆಬ್ಬಾಳ ಇತನು 6
ತಿಂಗಳಿಂದ ವಿಸಿಎಫ್. ಪ್ಯಾಕಿಂಗ್ ಪ್ಲ್ಯಾಂಟದಲ್ಲಿ ಸುಪರವೈಜರ ಕೆಲಸ ಮಾಡುತ್ತಿದ್ದು, ಪ್ರತಿ
ನಿತ್ಯದಂತೆ 10 ಗಂಟೆಗೆ ವಿಸಿಎಫ್.ಕ್ಕೆ ಕೆಲಸಕ್ಕೆ ಹೋಗುವಾಗ ಎಮ್.ಆರ್. ಎಫ್. ಶೋರೂಮ್ ಮುಂದುಗಡೆ
ಜಿ.ಕೆ. ರೋಡಿನ ಮೇಲೆ ಅವನ ಗೆಳೆಯರಾದ ರಘುಪತಿರೆಡ್ಡಿ ತಂದೆ ಹಾಸರೆಡ್ಡಿ,ಅಬ್ದುಲ್ ರಶೀದ@ಶೇಖ ಮೈಯೊದ್ದಿನ್ ತಂದೆ ಅಬ್ದುಲ್
ಹಮೀದ್ ಸಾ: ಸೇಡಂ ಇವರು ಸಿಕ್ಕಾಗ ಅವರೊಂದಿಗೆ ಮಾತ್ತಾನಾಡುತ್ತಾ ನಿಂತಿರುವಾಗ ವಿಸಿಎಫ್ ಕಡೆಗೆ
ಹೋಗುವ ಒಂದು ಲಾರಿ ನಂ ಎಮ್.ಹೆಚ್.-12 ಎಫ್, ಝಡ್-9305 ನ್ನೇದ್ದರ ಚಾಲಕ ತನ್ನ ಲಾರಿಯನ್ನು ನಿಸ್ಕಾಳಜೀತನದಿಂದ
ಚಲಾಯಿಸಿಕೊಂಡು ಬಂದು ಮಾತಾನಾಡುತ್ತಾ ನಿಂತ 3 ಜನರಿಗೆ ಡಿಕ್ಕಿ ಹೊಡೆದಿರುತ್ತಾನೆ.ವೀರೇಶ ಇತನು
ಸ್ಥಳದಲ್ಲಿಯೇ ಮೃತಪಟ್ಟಿದ್ದು, ರಘುಪತಿರೆಡ್ಡಿ ಇವರಿಗೆ ಎಡಗಾಲಿನ ಮೊಳಕಾಲಿಗೆ ತರಚಿದ ಗಾಯ
ಅಲ್ಲದೆ ಅಬ್ದುಲ್ ರಶೀದ@ಶೇಖ ಮೈಯೊದ್ದಿನ್ ತಂದೆ ಅಬ್ದುಲ್
ಹಮೀದ್ ಇವನಿಗೆ ಬಲಗಾಲು ಮುಂಗಾಲು ಮುರಿದು ಭಾರಿ ರಕ್ತಗಾಯವಾಗಿರುತ್ತದೆ.ಲಾರಿ ಚಾಲಕನು ತನ್ನ
ಲಾರಿ ನಿಲ್ಲಿಸದೆ ಹಾಗೇ ಓಡಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ
ಸೇಡಂ ಠಾಣೆ ಗುನ್ನೆ ನಂ 119/2012 ಕಲಂ 279, 337,338, 304(ಎ) ಐಪಿಸಿ ಮತ್ತು 187 ಐ. ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ಶರಣಪ್ಪ ತಂದೆ
ಹಣಮಂತಪ್ಪ ವಡ್ಡರ ಸಾ: ರಾಜಾಪೂರ ರವರು ನಾವು ದಿನಾಂಕ:31/5/2012 ರಂದು ಮುಂಜಾನೆ ಆಟೋ ನಂ ಕೆಎ32
ಬಿ 2924 ನೇದ್ದರಲ್ಲಿ ನಾನು ಮತ್ತು ನನ್ನ ತಾಯಿ
ಹಾಗೂ ನನ್ನ ತಮ್ಮನ ಹೆಂಡತಿ, ಮತ್ತು ಮಗ ಕುಳಿತುಕೊಂಡು ಕೇರೂರ ಗ್ರಾಮಕ್ಕೆ ಹೋಗಲು ಹುಮನಾಬಾದ
ರಿಂಗ ರೋಡ ಕಡೆಗೆ ಬರುವಾಗ ಆಟೋ ಚಾಲಕನ್ನು ಅತೀವೇಗ ಅಲಕ್ಷತನದಿಂದ ನಡೆಸುತ್ತಾ ಬಂದೂಕವಾಲಾ ಕಾಟಾದ
ಎದುರಿನ ರಸ್ತೆ ಮೇಲೆ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಆಟೋ ಪಲ್ಟಿಯಾಗಿ ನಮ್ಮೆಲ್ಲರಿಗೆ ಗಾಯಗಳು
ಆಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 180/2012 ಕಲಂ 279,
337, ಐಪಿಸಿ ಸಂಗಡ 187 ಐ.ಎಮ ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment