ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ
ನಾಗೇಶ ತಂದೆ ಗುಂಡಪ್ಪ ನಾಟಿಕರ ಸಾ|| ತರನಳ್ಳಿ ರವರು ನಾನು ಮತ್ತು ನನ್ನ ಗೆಳೆಯರು
ಕೂಡಿಕೊಂಡು ದಿನಾಂಕ:01/06/2012 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ಕ್ರಿಕೇಟ ಆಟ ಆಡುತ್ತಿದ್ದೇವು ನಾನು ಬಾಲಿಂಗ್
ಮಾಡುತ್ತಿದ್ದೆ, ಮಶಾಕ ಇತನು ಬ್ಯಾಟಿಂಗ ಮಾಡುತ್ತಿದ್ದ ಆಗ ನಾನು ಔಟ
ಅಂದೆನು ಅದಕ್ಕೆ ಅವನು ಬಂದವನೆ ಬ್ಯಾಟನಿಂದ ನನ್ನ ಎಡಕಿವಿಯ ಮೇಲೆ ಹೊಡೆದನು ಇದರಿಂದ ನನ್ನ ಎಡ ಕಿವಿಯಲ್ಲಿ
ರಕ್ತ ಬರಹತ್ತಿತ್ತು ಮತ್ತು ತಲೆಗೆ ಒಳ ಪೆಟ್ಟಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:
77/2012 ಕಲಂ 324 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಫಜಲಪೂರ
ಪೊಲೀಸ್ ಠಾಣೆ: ಶ್ರೀ ಮಲ್ಲಿಕಾರ್ಜುನ
ತಂದೆ ಸಿದ್ರಾಮಪ್ಪ ಮಾನಕರ ಸಾ|| ಅಫಜಲಪೂರರವರು ನನ್ನ ಮಗನು ಅಫಜಲಪೂರ ಪಟ್ಟಣದ ಶೇಳ್ಳಗಿ ಮನೆ ಹತ್ತಿರ ಮನೆ ಭಾಡಿಗೆ ಹಿಡಿದು
ಕಂಪ್ಯೂಟರ ತರಬೇತಿ ಕೇಂದ್ರ ಇರುತ್ತದೆ. ತರಬೇತಿ ಕೇಂದ್ರದ ಮುಂದೆ ನಿಲ್ಲಿಸಿರುವ ಮೊಟಾರ ಸೈಕಲ ನಂ” ಕೆಎ 32 ಅರ್-4962 ನೇದ್ದು ದಿನಾಂಕ: 27-04-2012 ರ ರಾತ್ರಿ ವೇಳೆಯಲ್ಲಿ ಯಾರೋ
ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ
ಗುನ್ನೆ ನಂ 98/12 ಕಲಂ 379 ಐ ಪಿ ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment