Police Bhavan Kalaburagi

Police Bhavan Kalaburagi

Monday, June 11, 2012

GULBARGA DIST REPORTED CRIMES


ಕೊಲೆ ಪ್ರಕರಣ :
ಅಫಜಲಪುರ ಠಾಣೆ: ಶ್ರೀಮತಿ ನಾಗಮ್ಮ ಗಂಡ ಭೀಮರಾಯ ಕಂಬಾರ ಸಾ|| ಕೊರಳ್ಳಿ ತಾ|| ಸಿಂದಗಿ ಹಾ|| || ಮಲ್ಲಾಬಾದ ರವರು, ನನ್ನ  ಮಗ ವಿಜಯಕುಮಾರನ 5ನೇ ವರ್ಷದ ಹುಟ್ಟುಹಬ್ಬ ಇದ್ದುದ್ದರಿಂದ ಅಫಜಲಪೂರಕ್ಕೆ ಹೊಸ ಬಟ್ಟೆಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದು ವಿಜಯಕುಮಾರನನ್ನು  ದೊಡ್ಡಪ್ಪನಾದ ಶಾಮರಾಯರವರ ಮನೆಯಲ್ಲಿ ಇದ್ದನು. ನಾನು ಮಧ್ಯಾಹ್ನ ಅಫಜಲಪೂರದಿಂದ ಮರಳಿ ನಮ್ಮ ಮನೆಗೆ ಹೋದಾಗ ಮಗಳು ವಿದ್ಯಾ ಮನೆಯಲ್ಲಿದ್ದು ಮಗ ವಿಜಯಕುಮಾರನು ಆಟ ಆಡಲು ಹೊರಗಡೆ ಹೋಗಿದ್ದಾನೆ ಅಂತಾ ತಿಳಿಯಿತು. ಸುಮಾರು ಹೊತ್ತಾದರೂ ವಿಜಯಕುಮಾರನು ಬರಲಿಲ್ಲ. ಎಲ್ಲಾ ಕಡೆಗಳೆಲ್ಲಾ ಹುಡುಕಾಡಿದರೂ ಸಿಗಲಿಲ್ಲ. ಮದ್ಯಾಹ್ನ 4:30 ಗಂಟೆ ಸುಮಾರಿಗೆ ನಾನು ನನ್ನ ಮನೆಯಲ್ಲಿದ್ದಾಗ ಮಹಾಂತಪ್ಪರವರು ನನ್ನ ಮೊಬೈಲ್ ನಂಬರಿಗೆ ತಮ್ಮ ಮೋಬೈಲ್ ಪೋನನಿಂದ ಕರೆಮಾಡಿ ಅಳುತ್ತಿದ್ದರಿಂದ ನಾನು ನನ್ನ ಮೋಬೈಲ್ ಪೋನನ್ನು ನನ್ನ ಅಣ್ಣ ಚಂದ್ರಕಾಂತ ಕಂಭಾರರವರ ಕೈಯಲ್ಲಿ ಕೊಟ್ಟಾಗ ಮಹಾಂತಪ್ಪ ರವರು ಪೋನ ಅಳುತ್ತಾ ಕಟ್ಟ ಮಾಡಿದರು. ನಾನು ಮತ್ತು ನನ್ನ ಅಣ್ಣ ನಮ್ಮ ಮನೆಯಿಂದ ಹೊರಗೆ ಬಂದಾಗ ನಮ್ಮ ಮನೆಯ ಹತ್ತಿರದಲ್ಲಿ ಇರುವ ಹಳ್ಳದಲ್ಲಿಂದ ಅಳುವ ದ್ವನಿ ಕೇಳಿ ಬಂದಿತು. ಆಗ ನಾನು ನನ್ನ ಅಣ್ಣ ಮತ್ತು ಊರಿನ ಇನ್ನಿತರ ಜನರು ಹಳ್ಳದ ಹತ್ತಿರ ಹೊದಾಗ ಹಳ್ಳದಲ್ಲಿ ನನ್ನ ಮಗ ವಿಜಯಕುಮಾರನ ಶವ ಬಿದ್ದಿತ್ತು. ನನ್ನ ಮಗನಿಗೆ ನನಗೆ ಆಗದವರು ಯಾರೋ ಯಾವುದೊ ದುರುದ್ದೇಶದಿಂದ ನನ್ನ ಮಗನ ತಲೆಯ ಮೇಲೆ  ಭಾರವಾದ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಅಫಜಲಪುರ ಠಾಣೆಯಲ್ಲಿ  ಗುನ್ನೆ ಸಂ: 101/12 ಕಲಂ 302 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ.
C£À¢üÃPÀÈvÀªÁV ªÀÄzÀå ªÀiÁgÁl ¥ÀæPÀgÀt
§æºÀä¥ÀÆgÀ oÁuÉ : ದಿನಾಂಕ: 10/06/2012 ರಂದು ರಾತ್ರಿ 7:15 ಗಂಟೆಯ ಸುಮಾರಿಗೆ ಬಾಪೂನಗರ ಬಡಾವಣೆಯ ವಿಠಲ ಮಂದಿರ ಹತ್ತಿರ ಅನಧೀಕೃತ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿದೊರೆತ ಮೇರೆಗೆ ಮಾನ್ಯ ಭೂಷಣ ಜಿ ಬೋರಸೆ ಐ.ಪಿ.ಎಸ್  ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಠಲ ಮಂದಿರ ಹತ್ತಿರ ಅನಧೀಕೃತ  ಮದ್ಯ ಮಾರಾಟ ಮಾಡುತ್ತಿದ್ದವಳ ಮೇಲೆ ದಾಳಿ ಮಾಡಿದ್ದು, ಸದರಿಯವಳು ತಪ್ಪಿಸಿಕೊಂಡು ಓಡಿ ಹೋಗಿದ್ದುಅನಧೀಕೃತವಾಗಿ ಮದ್ಯ ಮಾರುತ್ತಿದ್ದ ಸ್ಥಳದಲ್ಲಿ 1) 16 ಪಾಕೀಟ ಓರಿಜನಲ್ ಚಾಯ್ಸ 90 ಎಮ್.ಎಲ್ 2) 7 ಬಾಟಲ್ ನಾಕೌಟ ಬೀಯರ್ 330 ಎಮ್.ಎಲ್ 3) 5 ಕಾಗದದ ಒಲ್ಡ ಟಾವರನ ಪಾಕೇಟ 180 ಎಮ್.ಎಲ್ ಹೀಗೆ ಒಟ್ಟು ಅಂದಾಜು ಮೌಲ್ಯ ರೂ. 915/- ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅನಧೀಕೃತ ಮದ್ಯ ಮಾರಾಟ ಮಾಡುತ್ತಿದ್ದವಳ ಹೆಸರು ಯಶೋಧಾ ಗಂಡ ಭಿವಾಲಾಲ ಉಪಾದ್ಯಸಾ|| ಬಾಪೂನಗರ ಅಂತಾ ತಿಳಿದು ಬಂದಿದ್ದು, ಜಪ್ತಾದ ಮಾಲು ಮತ್ತು ಓಡಿ ಹೋದ ಆರೋಪಿತಳ ವಿರುದ್ದ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಸದರ ವರದಿಯ ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: 74/2012 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.
ಸಂಚಾರಿ ಪೊಲೀಸ್ ಠಾಣೆ
ಅಪಘಾತ ಪ್ರಕರಣ : ಶ್ರೀ ನಾಗಭೂಷಣ ತಂದೆ ಬಸಪ್ಪಾ ಸಿಪಾಯಿ ಸಾಃ ಭಾಗ್ಯ ನಗರ ಗುಲಬರ್ಗಾ ರವರು, ನಾನು  ದಿನಾಂಕ 21-05-2012 ರಂದು ರಾತ್ರಿ 8-45 ಪಿ.ಎಮ್ ಸುಮಾರಿಗೆ ಗುಬ್ಬಿ ಕಾಲೂನಿ ಕ್ರಾಸ್ ಹತ್ತಿರದ ಎಚ್.ಡಿ.ಎಪ್.ಸಿ ಬ್ಯಾಂಕ ಎ.ಟಿ.ಎಮ್ ಮುಂದಿನ ರೋಡಿನಲ್ಲಿ ನನ್ನ  ಮಹಿಂದ್ರಾ ಡುರೋ ಸ್ಟೂಟರ ನಂ. ಕೆ.ಎ 32 ಎಕ್ಸ 7880 ನೇದ್ದರ ಮೇಲೆ ಹೆಂಡತಿ ಶ್ರೀಮತಿ ಶಶಿಕಲಾ ಜೊತೆ ಮನೆಗೆ ಹೋಗುತ್ತಿದ್ದಾಗ ಎದರುಗಡೆ ಸೇಡಂ ರೋಡ ಕಡೆಯಿಂದ ಬಂದ ಮೋಟಾರ ಸೈಕಲ ನಂ. ಕೆ.ಎ 32 ಕ್ಯೂ 8688 ನೇದ್ದರ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ  ಸ್ಕೂಟರಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಪೊಲೀಸ್ ಠಾಣೆಯಲ್ಲಿ  ಗುನ್ನೆ ನಂಬರ: 32/2012 ಕಲಂ 279, 338 ಐ.ಪಿ.ಸಿ ಸಂಗಡ 187 ಐ.ಎಮ್.ವಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ.
ಕಳುವು ಮಾಡಿದ ಸಿಮೆಂಟ್ ಚೀಲಗಳನ್ನು ಮಾರಾಟಕ್ಕೆ ಸಾಗಣೆ ಮಾಡುತ್ತಿದ್ದ ಪ್ರಕರಣ :
ಮಾದನ ಹಿಪ್ಪರಗಾ ಪೊಲೀಸ್ ಠಾಣೆ :   ಸರಕಾರಿ ತರ್ಪೆ ಪಿರ್ಯಾದಿಯಾದ ನಾನು ಶ್ಯಾಮರಾವ ಎ.ಎಸ್.ಐ ಮಾದನಹಿಪ್ಪರಗಾ ಪೊಲೀಸ್ ಠಾಣೆ ದಿನಾಂಕ 09/06/2012 ರಂದು ಠಾಣೆ ಗುನ್ನೆ ನಂ 26/2012 ರ ಪ್ರಕರಣದಲ್ಲಿ ತನಿಖೆ ಕುರಿತು ಲಕ್ಷ್ಮೀಪುತ್ರ ಪಿ.ಸಿ. 1083 ರವರಿಗೆ ಸಂಗಡ ಸರಸಂಬಾ ಗ್ರಾಮಕ್ಕೆ ಹೊರಟೆನು.  ಮದ್ಯಾನ 01 ಗಂಟೆಗೆ ಸರಸಂಬಾ-ನಾಗಲೆಗಾಂವ ರಸ್ತೆಯ ಹತ್ತಿರ ಒಂದು ಮೇಟಕಿ ಹತ್ತಿರ ನಾವು ಬರುವಾಗ  ಸದರ ಮೇಟಕಿಯ  ಹತ್ತಿರ 30-40 ಸಿಮೇಂಟ ತುಂಬಿದ ಚೀಲಗಳು ಇದ್ದವು. ಅಲ್ಲಿ ಜನರು ಇದ್ದರು ನಮಗೆ ನೊಡಿ ಅವರು ಮರೆಮಾಚಿಕೊಳುವ ಪ್ರಯತ್ನದಲ್ಲಿದಾಗ ನಾವು ಅವರ ಹತ್ತಿರ ಹೊಗಿ ಸಿಮೇಂಟ ಚೀಲಗಳು ನೊಡಿ ಈ ಸಿಮೇಂಟ ತುಂಬಿದ ಚೀಲಗಳು ಯಾರದು ಇವೆ ಮತ್ತು ಖರೀದಿ  ಮಾಡಿದ ರಸೀದಿ ತೊರಿಸಿರಿ ಅಂತಾ  ಕೇಳಲು ಅವರು ಹೇಳಲು ತಡವರಿಸುತ್ತಾ ಏನು ಹೇಳದೆ ಹಾಗೆ ನಿಂತುಕೊಂಡರು ನನಗೆ ಅವರ ಮೇಲೆ ಸಂಶಯ ಬಂದು ಕೂಲಕುಂಶವಾಗಿ ಅವರ ಹೆಸರು ವಿಳಾಸ ಕೇಳಲು ಒಬ್ಬನು 1] ನಾಗಪ್ಪ ತಂದೆ  ಬಸವಣ್ಣಪ್ಪ ಮುಗಳೆ 2] ಜಗನ್ನಾಥ ತಂದೆ ಶಾಂತಪ್ಪ ಚೌದರಿ,  3] ನಟರಾಜ ತಂದೆ ಶಿವಲಿಂಗಪ್ಪ ಜಿಡಗೆ ಸಾ: ಸರಸಂಬಾ ಅಂತಾ ಹೇಳಿದರು ಇವರಿಗೆ ವಿಚಾರ ಮಾಡುತ್ತಿದ್ದಾಗ ಅವರ ಸಂಗಡ ಇದ್ದವರು ಓಡಿ ಹೊದರು ಈ ಮೂರು ಜನರಿಗೆ ಈ ಸೀಮೆಂಟ ತುಂಬಿದ ಚೀಲಗಳು ಎಲ್ಲಿಂದ ತಂದಿರುವಿರಿ ಯಾರದು ಇವೆ ಮತ್ತು ಇದರ ಬಗ್ಗೆ ರಸೀದಿ ಎನಾದರೂ ಇರುತ್ತದೆ ಹೇಗೆ ತೊರಿಸಿರಿ ಅಂತಾ ಕೇಳಲು ನಾಗಪ್ಪ ಮುಗಳೆ ಹೇಳಿದ್ದೆನೆಂದರೆ ದಿನಾಂಕ 06/06/2012 ರಂದು ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ  ನಾವು ಆಳಂದ-ಸರಸಂಬಾ ರಸ್ತೆಯಲ್ಲಿ ಲಾರಿಯಿಂದ ತಂದಿರುತ್ತೆವೆ ರಸೀದಿ ವಗೈರೆ ಇರುವುದಿಲ್ಲಾ ಮಾರಾಟಕ್ಕಾಗಿ ಜಗನಾಥ ಚೌದರಿ ಇವರ ಮೇಟಕಿಯಲ್ಲಿ ಇಟ್ಟಿರುತ್ತೆವೆ ಅಂತಾ  ಹೇಳಿ  ರಸೀದಿ ತೊರಿಸದೆ ಈ ಮೂರು ಜನರು ಸಹ ನಮ್ಮ ಕೈಗೆ ಸಿಗದೆ ನಾವು ವಿಚಾರಣೆ ಮಾಡುತ್ತಿರುವಾಗಲೆ ಓಡಿ ಹೊದರು. ಆದ್ದರಿಂದ ಕಳುವಿನ ಮಾಲು ಎಂದು ಖಾತ್ರಿಪಡಿಸಿಕೊಂಡು ಪಂಚ ಜನರಿಗೆ ಬರ ಮಾಡಿಕೊಂಡು ಸೀಮೇಂಟ ತುಂಬಿದ  ಒಟ್ಟು 44 ಚೀಲಗಳು ಮಾದನ ಹಿಪ್ಪರಗಾ ಠಾಣೆ  ಗುನ್ನೆ. ನಂ.27/2012 ಕಲಂ 102,  41 (ಡಿ) ಸಿ.ಆರ್.ಪಿ.ಸಿ  ಅಡಿಯಲ್ಲಿ   ಪ್ರಕರಣ  ದಾಖಲಾಗಿರುತ್ತದೆ. 
ಅಪಘಾತ ಪ್ರಕರಣ :
ಗ್ರಾಮೀಣ ಪೊಲೀಸ್ ಠಾಣೆ : ಶ್ರೀ  ಜಮೀರ ಪಟೇಲ ತಂದೆ ಚಾಂದ ಪಟೇಲ ವಯಾ:26 ವರ್ಷ ಸಾ:ಜಿಲನಾಬಾದ ಎಂ.ಎಸ್.ಕೆ ಮೀಲ ಗುಲಬರ್ಗಾ ಇವರು ದಿನಾಂಕ 10/06/12 ರಂದು ಮುಂಜಾನೆ 09:30  ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಗಾಯಾಳು ಮೋಟಾರ ಸೈಕಲ ನಂ ಕೆ.ಎ 32 ವ್ಹಾ-5174 ನೇದ್ದರ ಮೆಲೆ ಆಳಂದದಿಂದ ಗುಲಬರ್ಗಾಕ್ಕೆ ಬರುವಾಗ ಸುಂಟನೂರ ಕ್ರಾಸ ಹತ್ತಿರ ಬರುವಾಗ ಹಿಂದಿನಿಂದ ಕಾರ ನಂ ಎಂ.ಎಚ್.-25 ಆರ್-0776 ನೇದ್ದರ ಚಾಲಕ ಶಿವಶಂಕರ ಸೂರ್ಯವಂಶಿ ಸಾ:ಮುರಳಿ ತಾ:ಉಮರ್ಗಾ ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ತಂದು ಸದರ ಮೊಟಾರ ಸೈಕಲಕ್ಕೆ ಡಿಕ್ಕಿ ಕೊಟ್ಟು ಬಾರಿ ರಕ್ತಗಾಯ ಪಡಿಸಿದ್ದು ಇರುತ್ತದೆ ಅಂತಾ  ಕೊಟ್ಟ ಫೀರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ  196/2012 ಕಲಂ  279, 338, ಐಪಿಸಿ   ಪ್ರಕಾರ ಪ್ರಕರಣ ದಾಖಲಾಗಿದೆ.

No comments: