ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ
ಪ್ರಿಯಾಂಕ ಗಂಡ ಶ್ರೀಧರ ಮಾಡೋರಕರ ವ:19 ವರ್ಷ ಸಾ:ಸುಂದರ ನಗರ ಗುಲಬರ್ಗಾರವರು ನನ್ನ ತಂದೆ
ತಾಯಿಗೆ 2 ಹೆಣ್ಣು 2 ಗಂಡು ಮಕ್ಕಳಿದ್ದು, ನಾನೇ ಕೊನೆಯವಳಿದ್ದು, ಪೊಲೀಸ್
ಕಾಲೋನಿ ಶಾಲೆಯಲ್ಲಿ ಓದುತ್ತಿರುವಾಗ 8 ನೇ ತರಗತಿಯಿಂದ 10 ನೇ ತರಗತಿಯವರೆಗೆ ಶ್ರೀದರನೊಂದಿಗೆ
ಪ್ರೀತಿಸುತ್ತಿದ್ದು, ದಿನಾಂಕ: 11.11.2011 ರಂದು ನಾವಿಬ್ಬರೂ ರಾಮ ತೀರ್ಥ ಮಂದಿರದಲ್ಲಿ
ಶ್ರೀಧರನ ಗೆಳೆಯರಾದ ಮೌನೇಶ, ಮೋಹನ, ಮತ್ತು ನನ್ನ ಗೆಳತಿ ಅರ್ಚನಾ ಇವರ ಸಮಕ್ಷಮದಲ್ಲಿ ಮದುವೆ
ಮಾಡಿಕೊಂಡಿರುತ್ತೆವೆ. ಮದುವೆಯಾದ ಮೇಲೆ ನಾನು ಮತ್ತು ಶ್ರೀಧರ ಯಾರಿಗೂ
ನಮ್ಮ ಮನೆಯವರ ಕಡೆಗೆ ತಿಳಿಸದೇ ಶ್ರೀದರ ತಾಯಿಯಾದ ಸುನಿತಾ ಇವಳೊಂದಿಗೆ ಬೆಂಗಳೂರಿಗೆ ಹೋಗಿ
ಚಾಮರಾಜಪೇಟೆಯಲ್ಲಿ ವಾಸವಾಗಿದೆವು,ಆ ಸಮಯದಲ್ಲಿ ನಾನು ನನ್ನ ತಾಯಿಯೊಂದಿಗೆ ಸಂಪರ್ಕದಲ್ಲಿರುವಾಗ ನನ್ನ
ಗಂಡ ಅತ್ತೆ ನಿನ್ನ ತಾಯಿಯಿಂದ ಹಣ ತೆಗೆದುಕೊಂಡು ಬಾ ಅಂತಾ ದೈಹಿಕ ಮಾನಸಿಕ ಹಿಂಸೆಕೊಡಲು
ಪ್ರಾರಂಬಿಸಿದನು. ದಿನಾಂಕ:27.05.2012 ರಂದು ನನ್ನ ಅತ್ತೆ ಹಾಗೂ ನನ್ನ ಗಂಡ ನಮ್ಮ
ಸಂಭಂದಿಕರ ಮದುವೆ ಇದ್ದೆ ಅಂತಾ ಬೆಂಗಳೂರುನಿಂದ ಗುಲಬರ್ಗಾಕ್ಕೆ ಕರೆದುಕೊಂಡು
ಬಂದ್ದರು. ಇಲ್ಲಿ ಬೇರೆ ಮನೆ ಮಾಡುತ್ತೆವೆ. ನಿನ್ನ ತಾಯಿಯಿಂದ 30 ಸಾವಿರ ತೆಗೆದುಕೊಂಡು ಬಾ ಅಂತಾ
ಮಾನಸಿಕ ಹಿಂಸೆ ಕೊಟ್ಟಿರುತ್ತಾರೆ. ದಿನಾಂಕ: 11.06.12 ರಂದು ಸಂಜೆ 7.00 ಗಂಟೆ ಸುಮಾರಿಗೆ ನನ್ನ
ಗಂಡ, ಮಾವನಾದ ರಾಜು, ಗಂಡನ ಚಿಕ್ಕಪ್ಪಾ ಮೂರು ಜನರು ನನಗೆ ಜಬರ ದಸ್ತಿಯಿಂದ ನನ್ನ ತಾಯಿಯ ಮನೆಗೆ
ಕರೆದುಕೊಂಡು ಹೋಗಿ ಬಂಗಾರದ ತಾಳಿ ಚೈನು ಹಾಗೂ 30 ಸಾವಿರ ರೂ ತೆಗೆದುಕೊಂಡು ಬಾ ಅಂತಾ ದೂರದಲ್ಲಿ
ನಿಂತು ಕಳುಹಿಸಿದರು. ನಮ್ಮ ತಂದೆ ತಾಯಿಯವರ ಹತ್ತಿರ ಹಣವಿರುವದಿಲ್ಲ ಅಂತಾ ತಿಳಿಸಿದಾಗ ಗಂಡನ
ಮನೆಯವರು ಕೈಯಿಂದ ಹೊಡೆದು, ಕಾಲಿನಿಂದ ಉದ್ದು, ನಾನು
ಚಿರಾಡುತ್ತಿರುವಾಗ ನನ್ನ ಮಾವ ನನ್ನ ಬಾಯಿ ಒತ್ತಿ ಹಿಡಿದರು. ಸ್ವಲ್ಪ ಸಮಯ ನಂತರ ಕೈ ತೊಳೆದುಕೊಂಡು
ಬಾ ಅಂತಾ ಹೊರಗೆ ಕಳುಹಿಸಿದರು. ನಾನು ನೀರು ತೆಗೆದುಕೊಂಡು ಕಾರಿಡರ ಗೋಡೆ ಹತ್ತಿರ ನಿಂತಿರುವಾಗ ನನ್ನ
ಅತ್ತೆ , ಗಂಡ ನನ್ನನು ನೋಡಿ ನೀನು ಜೀವಂತ ವಿದ್ದರೆ ಪ್ರಯೋಜನ ವಿಲ್ಲಾ ನೀನು ಹಣ
ತರುವುದಿಲ್ಲಾ ನೀನು ಸತ್ತು ಹೋಗು ಅಂತಾ ನನಗೆ 1 ನೇ ಅಂತಸ್ತಿನ ಮೇಲಿಂದ ನೂಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣಾ ಗುನ್ನೆ
ನಂ 46/12 ಕಲಂ 498(ಎ), 307 ಸಂಗಡ 149 ಐ.ಪಿ.ಸಿ ಮತ್ತು 3&4
ಡಿ.ಪಿ.,ಎಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಜೀತೇಂದ್ರ ತಂದೆ
ರಾಮಶೆಟ್ಟಿ ರಾಠೋಡ ಉ ;ಗ್ರಾಮ ಪಂಚಾಯತ ಸದಸ್ಯ, ಸಾ ||ಚೌಕ ತಾಂಡಾ ಚಿಮ್ಮನಚೊಡ ತಾ||ಚಿಂಚೋಳಿ, ಹಾ||ವ|| ಮನೆ ನಂ 43/2 ನಂದನ ನಿವಾಸ, ರಾಮ ತೀರ್ಥ ನಗರ ಗುಲಬರ್ಗಾರವ ರು ನ್ನ ಟಾಟಾ
ಇಂಡಿಕಾ ಕಾರ ನಂ: ಕೆಎ 33 ಎಮ್-4005 ನೇದ್ದು ದಿನಾಂಕ 09-06-2012 ನೇದ್ದು ನಾನು ಬಾಡಿಗೆ ಮನೆಯ
ಮುಂದೆ ನಿಲ್ಲಿಸಿ, ಊರಿಗೆ ಹೋಗಿರುತ್ತೆನೆ. ಮರಳಿ ದಿನಾಂಕ 10/06/12 ರಂದು ಮನೆಗೆ ಬಂದಾಗ, ನಾನು ಮನೆಯ ಮುಂದೆ
ನಿಲ್ಲಿಸಿದ ನನ್ನ ಕಾರ ಇರಲಿಲ್ಲ , ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು
ಸಿಕ್ಕಿರುವದಿಲ್ಲ, ಯಾರೊ ಕಳ್ಳರು ಕಾರ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 199/12
ಕಲಂ 379 ಐಪಿಸಿ ಪ್ರಕಾರ
ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ ಶ್ರೀ ಪಾಂಡು ತಂದೆ ಗಂಗಾರಾಮ ರಾಠೋಡ ಸಾ:
ಮನೆ ನಂ 1-867/28ಸಿ ವೆಂಕಟೇಶ ನಗರ ಗುಲಬರ್ಗಾರವರು ನಾನು ದಿನಾಂಕ 06-06-12 ರಂದು
ಸಾಯಂಕಾಲ 4-30 ಗಂಟೆಗೆ ಮನೆಯ ಮುಂದೆ ಮೊ. ಸೈ ನಂ ಕೆ.ಎ 32 ಕ್ಯೂ 7587 ಹೀರೋ ಹೊಂಡಾ ಪ್ಲಸ್
ಬ್ಲಾಕ ಕಲರ ಇಂಜಿನ ನಂ 05ಎ15ಇ32704 ಚೆಸಿ ನಂ 05ಎ16ಎಫ್.32506 ಅ.ಕಿ 25000/- ರೂ ನೇದ್ದು
ನಿಲ್ಲಿಸಿ ಮನೆಯ ಒಳಗಡೆ ಹೋಗಿದ್ದು, ಮನೆಯಿಂದ ಹೊರಗೆ ಬಂದು ನೋಡಲಾಗಿ ವಾಹನ ನಿಲ್ಲಿಸಿದ ಸ್ಥಳದಲ್ಲಿ
ಇರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೆಲಿಂದ ಠಾಣಾ
ಗುನ್ನೆ ನಂ 83/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment