ಹಲ್ಲೆ ಪ್ರಕರಣ:
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ
ಮೋಸಿನ ಖಾನ ತಂದೆ ಹಮೀದ ಖಾನ ಚಿಂಚೋಳಿವಾಲೆ ಸಾ|| ಹುಸೇನಿ ಗಾರ್ಡನ್ ಎಮ್.ಎಸ್.ಕೆ ಮಿಲ್
ಗುಲಬರ್ಗಾರವರು ನಾನು ಅಸ್ಪಾಕ ಈತನಿಗೆ 13,500/-ರೂಪಾಯಿ ಕೊಟ್ಟಿದ್ದರಿಂದ ಮರಳಿ ಕೊಡುವಂತೆ ಕೇಳಿದಾಗ
ಅಸ್ಪಾಕ, ಅಲ್ತಾಫ, ಮುಸ್ತಾಕ ಸಾ|| ಮದಿನಾ ಕಾಲೋನಿ ಗುಲಬರ್ಗಾ ಇವರು ದಿನಾಂಕ
13-06-2012 ರಂದು ಖದೀರ ಚೌಕ ಹತ್ತಿರ ನನಗೆ ಅಸ್ಪಾಕ,ಅಲ್ತಾಫ ಮುಸ್ತಾಕ ರವರು ಹೊಡೆ ಬಡೆ
ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 42/12 ಕಲಂ
341, 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀ
ಅಸ್ಪಾಕ ತಂದೆ ಅಬ್ದುಲ ರಜಾಕ ಸಾ|| ಮದಿನಾ ಕಾಲೋನಿ ಎಮ್.ಎಸ್.ಕೆ ಮಿಲ್ ಗುಲಬರ್ಗಾರವರು ನಾನು
ಮೋಸಿನಖಾನ ಈತನಿಂದ 3,500/-ರೂಪಾಯಿ ತೆಗೆದುಕೊಂಡಿದ್ದು, ಹಣ ಮರಳಿ ಕೊಡುವದು ತಡವಾಗಿರುವದರಿಂದ ಮೋಸಿನ
ಖಾನ ತಂದೆ ಹಮೀದ ಖಾನ ಚಿಂಚೋಳಿವಾಲೆ ಈತನು ತನ್ನ ಜೊತೆಯಲ್ಲಿ ಮಜ್ಜಿದ
ಖಾನ, ಆಸೀಪ ಹುಸೇನ ಹಾಗು ತಜಮಲ್ ಹುಸೇನ ಎಲ್ಲರನ್ನು ಕರೆದುಕೊಂಡು ಬಂದು ಎದೆಯ
ಮೇಲಿನ ಅಂಗಿ ಹಿಡಿದುಅವಾಚ್ಯವಾಗಿ ಬೈದು, ಹೊಡೆ ಬಡೆ ಮಾಡಿರುತ್ತಾರೆ.ಅಂತಾ ದೂರು ಸಲ್ಲಿಸಿದ
ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 43/12 ಕಲಂ 341, 323, 504, 506
ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ
ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ಗುಂಡು @ ಗುಂಡಪ್ಪಾ ತಂದೆ ಉತ್ತಮ ಚುಬನಕರ ಸಾ:ಇಂದಿರಾ ನಗರ ಗುಲಬರ್ಗಾ ನಾನು, ನನ್ನ ಸ್ನೇಹಿತರಾದ ಕಿಟ್ಟು ತಂದೆ ದಿಗಂಬರ, ಮಲ್ಲು ತಂದೆ ದೌಲಪ್ಪಾ, ಮೂರು ಜನರು ಮತ್ತು ದಿನಾಂಕ:13/06/2012 ರಂದು ಮದ್ಯಾಹ್ನ 1:30 ಗಂಟೆಯ
ಸುಮಾರಿಗೆ ಕಿಟ್ಟು ಇತನ ಮೋಟಾರ ಸೈಕಲ ಮೇಲೆ ಕಾಕಡೇ ಚೌಕ ಹತ್ತಿರ ಇರುವ ಈಜು ಕೊಳದ ಹತ್ತಿರ ಹೋಗಿ ನಾವು ಈಜಾಡುತ್ತಿದ್ದಾಗ, ಮಲ್ಲು ತಂದೆ ದೌಲಪ್ಪಾ ಕಿಟ್ಟು ತಂದೆ ದಿಗಂಬರ ಇಬ್ಬರೂ ಕೂಡಿ ನನಗೆ ಅಲ್ಲಿಯೇ ಬಿಟ್ಟು ಮೋಟಾರ ಸೈಕಲ ಮೇಲೆ ಹೊರಟು ಹೋದರು, ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಈಜು ಕೊಳದ ಮಾಲಿಕ ನನಗೆ ಇಲ್ಲಿ ಹೊರಗೆ ಬಾ ಸಮಯ ಮುಗಿದಿದೆ ಅಂತಾ ಅನ್ನಲು ನಾನು ಹೊರಗೆ ಈ ವಿಷಯದ ಬಗ್ಗೆ ನಿಜಲಿಂಗಪ್ಪಾನಿಗೆ ಕೇಳಲು,
ಅವನು ಜಾತಿ ಎತ್ತಿ ಬೈದು ಅಲ್ಲಿಯೇ ಬಿದ್ದ ಕಬ್ಬಿಣದ ಪೈಪನಿಂದ ತಲೆಯ ಹಿಂದುಗಡೆ ಮತ್ತು ಬೆನ್ನಿಗೆ ಹೊಡೆದು ರಕ್ತ ಗುಪ್ತಗಾಯ ಗೊಳಿಸಿದನು. ಚಾಕುವಿನಿಂದ ನನ್ನ ಎಡಗೈ ಹಸ್ತಕ್ಕೆ ಹೊಡೆದು ರಕ್ತಗಾಯಗೊಳಸಿರುತ್ತಾನೆ. ನಾನು ಚೀರಾಡುತ್ತಿದ್ದಾಗ ಅಲ್ಲಿಯೇ ಈಜಾಡಲು ಬಂದ ನನಗೆ ಪರಿಚಯದವರಾದ ಚೆನ್ನಪ್ಪಾ ತಂದೆ ಸಿದ್ದಣ್ಣಾ ರಾಮಶೇಟ್ಟಿ, ಮಲ್ಲಿಕಾರ್ಜುನ ತಂದೆ ಕಾಶಿನಾಥ ಅಲ್ಲಪೂರ ಇಬ್ಬರು ಕೂಡಿ ಬೀಡಿಸಲು ಬಂದವರಿಗೆ ನಿಜಲಿಂಗಪ್ಪಾನ ಹೋಲದಲ್ಲಿ ಕೆಲಸ ಮಾಡುತ್ತಿದ್ದ 6-7 ಜನರು ನಿಮ್ಮದು ಬಹಳ ಆಗಿದೆ ಅಂತಾ ಬೈಯ್ದು ಚೆನ್ನಪ್ಪಾ ಮತ್ತು ಮಲ್ಲಿಕಾರ್ಜುನ ಇಬ್ಬರಿಗೆ ಬಡಿಗೆಯಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತ ಮತ್ತು ಗುಪ್ತ ಗಾಯಗೊಳಿಸಿರುತ್ತಾರೆ , ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 202/2012 ಕಲಂ 143
147 148 324 504 506 ಸಂ 149 ಐ.ಪಿ.ಸಿ ಮತ್ತು 3 (1) (10) SC/ST P.A ACT 1989 ಪ್ರಕಾರ ಪ್ರಕರಣ ದಾಖಲ
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment