Police Bhavan Kalaburagi

Police Bhavan Kalaburagi

Thursday, June 21, 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆಶ್ರೀ ಮಲ್ಲಿಕಾರ್ಜುನ ತಂ ಶಿವಶರಣಪ್ಪ ಕಲಬುರ್ಗಿ ಸಾ: ಕಾವೇರಿ ನಗರ ಗುಲಬರ್ಗಾರವರು ಠಾಣಾ ವ್ಯಾಫ್ತಿಯ ಕಲ್ಲಹಂಗರಗಾ ಗ್ರಾಮದ ಸರ್ವೆ ನಂ. 2 ರಲ್ಲಿ ನಿರ್ಮಿಸಿರುವ ಓಡಾಪೊನ್ ಟವರ್‌ಕ್ಕೆ ಅಳವಡಿಸಿದ ಆರ್‌ಎಫ್‌ ಕೇಬಲ್‌ ಸುಮಾರು ಅಂದಾಜು 200 ಮೀಟರ್‌  ಉದ್ದ  ಅಕಿ. 23500/-ರೂಗಳು ಕಿಮ್ಮತ್ತಿನದ್ದನ್ನು ಯಾರೋ ಕಳ್ಳರು  ದಿ:09/06/2012 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ:10/6/2012 ರಂದು ಮಧ್ಯರಾತ್ರಿ 1-00 ಗಂಟೆಯವರೆಗೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 211/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಸಿದ್ದಪ್ಪಾ ತಂದೆ ರಾಯಪ್ಪ ದೇಶಪಾಂಡೆ  ಸಾ: ಪೊಲಕಪಳ್ಳಿ ತಾಚಿಂಚೋಳಿರವರು ನಾನು ದಿನಾಂಕ:20-06-2012 ರಂದು ಬೆಳಿಗ್ಗೆ ಹೆಂಡತಿಯಾದ ವಿದ್ಯಾವತಿ ಮತ್ತು ಅಳಿಯ ಹಾಗು ಮಗಳು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು ಮನೆಗೆ ಹೋಗಬೇಕು ಅಂತಾ ಗೋವಾ ಹೋಟೇಲ ರವರಿಗೆ ನಡೆದುಕೊಂಡು ಬಂದು ಗೋವಾ ಹೋಟೇಲ  ಹತ್ತಿರ ಅಟೋ ಮೂಲಕ ಹೋಗಬೇಕು ಗೋವಾ ಹೋಟೇಲ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಮೋಟಾರ ಸೈಕಲ ನಂ:ಕೆಎ 32 ಜೆ 9488 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ವಾಹನ  ಸಮೇತ ಹೊರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 65/2012 ಕಲಂ 279,338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಕಲಬುರ್ಗಿ,|| ಏರಟೇಲ ನೇಟವರ್ಕದಲ್ಲಿ ಪೆಟ್ರೊಲಿಂಗ ಸುಪರವೈಸರಸಾ|| ಕಾವೇರಿ ನಗರ ಗುಲಬರ್ಗಾರವರು ಮಾಡಿಯಾಳ ಗ್ರಾಮದ ಪ್ಲಾಟ ನಂ:16 & 17 ರಲ್ಲಿ ನಿಲ್ಲಿಸಿರುವ ಏರಟೇಲ ಟವರ್  ಶೇಲ್ಟರ ಕೋಣೆಯಲ್ಲಿ ಅಳವಡಿಸಿರುವ 18 ಬ್ಯಾಟರಿಗಳು ಅಂದಾಜ ಕಿಮ್ಮತ್ತು 22000/- ರೂಪಾಯಿ ನೇದ್ದವುಗಳು ದಿನಾಂಕ 28/04/2012 ರ 20-00 ಗಂಟೆಯಿಂದ 29/04/2012 ರ 07-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರಬಹುದು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 47/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಶಿವಲಿಂಗಪ್ಪ ತಂದೆ ಮಲ್ಲಿಕಾರ್ಜುನ @ ಮಲ್ಲಣ್ಣ  ಮದರಿ ಸಾ: ಸಿಂದಗಿ (ಬಿ) ತಾ: ಜಿ: ಗುಲಬರ್ಗಾರವರು ನಾನು ಮತ್ತು ನನ್ನ ಗೆಳೆಯನಾದ ಅಣ್ಣಪ್ಪಾ ಇಬ್ಬರೂ ಕೂಡಿಕೊಂಡು ದಿನಾಂಕ: 19/6/2012 ರಂದು ಸಾಯಂಕಲ 5:30 ಪಿಎಮ ಸುಮಾರಿಗೆ ಮೋಟಾರ ಸೈಕಲ ನಂಬರ: ಕೆಎ 33 ಇ 5855 ನೇದ್ದರ ಮೇಲೆ ಕುಳಿತುಕೊಂಡು ಆಳಂದ ರೋಡಿನ ವಿಶ್ವರಾದ್ಯ ಗುಡಿಯ ಹತ್ತಿರ ಇರುವ ಪೆಟ್ರೋಲ ಪಂಪಗೆ ಪೆಟ್ರೋಲ ಹಾಕಿಸಿಕೊಳ್ಳಲು ಹೋಗುತ್ತಿರುವಾಗ  ಆಳಂದ ರಸ್ತೆ ಕಡೆಯಿಂದ ಒಂದು ಬುಲೆರೋ ಜೀಪ ನಂ ಎಮ್‌ಹೆಚ್‌ 43 ಎನ್‌ 1618 ನೇದ್ದನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈ ಕಲಗೆ ಡಿಕ್ಕಿ ಹೊಡೆದಿದ್ದರಿಂದ ಕೆಳಗೆ ಬಿದ್ದು ಮೈಕೈಗೆ ಭಾರಿಗಾಯ ಹಾಗೂ ಸಾದಾಗಾಯವಾಗಿ ರಕ್ತಗಾಯವಾಗಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 212/2012 ಕಲಂ 279, 338 ಐಪಿಸಿ ಸಂಗಡ 187 ಐ,ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: