ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಶ್ರೀ ಬಸವರಾಜ ತಂದೆ ಲಕ್ಷ್ಮಣ ತಳವಾರ ಸಾ: ಶಿವಾಜಿ ನಗರ ಗುಲಬರ್ಗಾ ರವರು ನಾನು ಮತ್ತು ಸುಭದ್ರಭಾಯಿ ರಾಧಿಕಾ ಮೂರು ಜನರು ಕೂಡಕೊಂಡು ದಿನಾಂಕ: 21-06-2012 ರಂದು 6-30 ಪಿ.ಎಮಕ್ಕೆ ಕೆ.ಎಮ್.ಎಪ್. ಡೈರಿಯ ಮುಂದೆ ರೋಡಿನ ಮೇಲೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಟೋರಿಕ್ಷಾ ನಂ. ಕೆಎ 32 ಬಿ- 4765 ನೇದ್ದರ ಚಾಲಕನು ತನ್ನ ಅಟೋರಿಕ್ಷಾವನ್ನು ಗಂಜ ಬಸ್ ಸ್ಟಾಂಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಮತ್ತು ಸುಭದ್ರಬಾಯಿ, ರಾಧಿಕಾ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 35/2012 ಕಲಂ 279, 337,338 ಐ.ಪಿ.ಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಸೈಯ್ಯದ ಅಪ್ಸರ ತಂದೆ ಸೈಯ್ಯದ ಫಜಲ ಸಾ: ಹುಸೆನಿ ಗಾರ್ಡನ ಹತ್ತಿರ ಎಮ್‌ಎಸ್‌ಕೆ ಮಿಲ ಜಿಲಾನಾಬಾದ ಗುಲಬರ್ಗಾ ರವರು ನಾನು ಮತ್ತು ಮಹಮದ ಅನ್ವರ ಕೂಡಿಕೊಂಡು ದಿನಾಂಕ:-21/06/21012 ರಂದು ಸಾಯಾಂಕಾಲ 3:30 ಗಂಟೆಯ ಸುಮಾರಿಗೆ ಮೋಟಾರ ಸೈಕಲ ನಂ ಕೆ.ಎ 01 ಇ-ಎಲ್-3226 ನೇದ್ದರ ಮೇಲೆ ಆಳಂದ ಚೆಕ್ಕ ಪೊಸ್ಟ ಹತ್ತಿರ ಈರಫಾರ ಇತನಿಗೆ ಬೇಟ್ಟಿ ಆಗುವ ಕುರಿತು ಹೋಗಿ ಮರಳಿ ಮೋಟಾರ ಸೈಕಲ ಮೇಲೆ ಬರುವಾಗ ಮಿಜಬಾನಗರ ಕ್ರಾಸ ಹತ್ತಿರ ಹಿಂದಿನಿಂದ ಲಾರಿ ನಂ ಕೆ.ಎ 32 ಬಿ-1154 ನೇದ್ದರ ಚಾಲಕ ಶಿವಕುಮಾರ ಖಾಜಾ ಕೊಟನೋರ ಇತನು ತನ್ನ ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಯಾವುದೇ ಹಾರ್ನ ವಗೈರೇ ಹಾಕದೇ ಒಮ್ಮಲೇ ತಂದು ಹಿಂದಿನಿಂದ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಪಡಿಸಿ ಲಾರಿ ಮುಂದಿನ ಎಡ ಬಾಗದ ಟೈರ ಮಹಮ್ಮದ ಅನ್ವರ ಇತನ ತಲೆಯ ಮೇಲೆ ಹೋಗಿ ತಲೆ ಮುಖ ಪೂರ್ತಿ ಜಜ್ಜಿ ಮೆದಳು ಹೊರ ಬಂದು ಸ್ದಳದಲ್ಲಿಯೇ ಮೃತ ಪಟ್ಟಿದ್ದು ನನಗೆ ಸಾದಾ ಗಾಯಗಳು ಆಗಿರುತ್ತವೆ, ಲಾರಿ ಚಾಲಕನು ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 213/2012 ಕಲಂ 279 337 304(ಎ) ಐಪಿಸಿ ಸಂಗಡ 187 ಐಎಮ್‌ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment