ಹಲ್ಲೆ ಪ್ರಕರಣ:
ಸುಲೇಪೇಟ ಪೊಲೀಸ್ ಠಾಣೆ: ಶ್ರೀ ಪರುಶುರಾಮ ತಂದೆ ಚಂದ್ರಪ್ಪ ಮರಪಳ್ಳಿ ಸಾಃ ಹೂವಿನ ಬಾವಿ ತಾಃ ಚಿಂಚೋಳಿ ರವರು ನಾನು ದಿನಾಂಕಃ18/09/2011 ರಂದು ಬೆಳಿಗ್ಗೆ 8:00 ಗಂಟೆಯ ಸುಮಾರಿಗೆ ಟುಶ್ಯನ್ ಗೆ
ಹೋಗುತ್ತಿರುವಾಗ ನಮ್ಮೂರಿನ ಬಾಶಾ ಸಾಬ ತಂದೆ ಹುಸೇನ ಸಾಬ ಸವಾರಿ, ಮಹಬೂಬ ತಂದೆ ಬಾಶಾ ಸಾಬ ಸವಾರಿ, ಚಿನ್ನು ಸಾಬ ತಂದೆ ಬಾಶಾ ಸಾಬ ಸವಾರಿ, ನಸೀಮಾ ಬೇಗಂ ಗಂಡ ಬಾಶಾ ಸಾಬ ಸವಾರಿ ಇವರೆಲ್ಲರೂ ಬಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ
ನಿಂದನೆ ಮಾಡಿ, ಗಿಡಕ್ಕೆ ಕಟ್ಟಿ ಕಟ್ಟಿಗೆಯಿಂದ
ಮತ್ತು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 62/2012
ಕಲಂ. 341, 504, 323, 324, 506 ಸಂ. 34 ಐಪಿಸಿ & ಕಲಂ. 3 (1)(10) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989 ನೇದ್ದರ ಪ್ರಕಾರ ಪ್ರಕರಣ ದಾಖಲು
ಮಾಡಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ರಾಯಪ್ಪ ತಂದೆ ಲಕ್ಷ್ಮಣ ಮಲ್ಲರ ವ:75 ಉ: ಹಿರಿಯ ನಾಗರೀಕ ಸಾ|| ಸರಕಾರಿ ಗ್ರಂಥಾಲಯ
ಹಿಂದುಗಡೆ ಅಶೋಕ ನಗರ ಗುಲಬರ್ಗಾರವರು ನಾನು ದಿನಾಂಕ 23-06-12 ರಂದು
ಬೆಳಿಗ್ಗೆ 7-00 ಗಂಟೆಯ ಸುಮಾರಿಗೆ ಕಣ್ಣಿ ಮಾರ್ಕೇಟ ಕಡೆಗೆ ನಡೆದುಕೊಂಡು
ಹೋಗುತ್ತಿದ್ದಾಗ ಸುರೇಶ ಗಣಜಲಖೇಡ ಇವರ ಮನೆಯ ಎದುರುಗಡೆ ರೋಡಿನ ಮೇಲೆ ಮೋಟಾರ ಸೈಕಲ ನಂ:ಕೆಎ 32
ಇಬಿ 3226 ನೇದ್ದನ್ನು ಸವಾರ ತನ್ನ ವಾಹನವನ್ನು ಅತೀವೇಗ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ಮೋಟಾರ
ಸೈಕಲ ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 67/2012 ಕಲಂ: 279,338 ಐ.ಪಿ.ಸಿ sಸಂ:187 ಐ.ಎಮ್.ವಿ.ಆಕ್ಟ
ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment