ಹಲ್ಲೆ ಪ್ರಕರಣ:
ದೇವಲ ಗಾಣಗಾಪೂರ ಠಾಣೆ: ಶ್ರೀ ರಾಜು ತಂದೆ ಗೋವಿಂದಪ್ಪ ಜಾ: ಡೋರ ಸಾ|| ಗೊಬ್ಬೂರ [ಬಿ] ರವರು ಮಾನ್ಯ 2 ನೇ ಅಪರ ಸತ್ರ ನ್ಯಾಯಾಲಯದಿಂದ ಖಾಸಗಿ ದೂರು ಸಂಖ್ಯೆ: 04/2012 ನೇದ್ದರ ಸಾರಾಂಶವೇನೆಂದರೆ, ಶ್ರೀ ರಾಜು ಇವರು ಗೊಬ್ಬೂರ[ಬಿ] ಗ್ರಾಮದ ಸರ್ವೆ ನಂ. 176 ನೇದ್ದರ ವಾರಸುದಾರನಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದಿದ್ದು ದಿನಾಂಕ:23-03-2012 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಚಂದಪ್ಫಾ ತಂದೆ ನಾಗಪ್ಪಾ, ಬಸವರಾಜ ತಂದೆ ಶಾಂತಪ್ಪಾ, ಶಿವಾನಂದ ಮಾನಕರ, ಮಹಿಬೂಬ ಅವರಳ್ಳಿ ರವರು ಪ್ರದೀಪ ತಂದೆ ಶಿವಾನಂದ, ಪ್ರಶಾಂತ ತಂದೆ ಶಿವಾನಂದ ಎಲ್ಲರೂ ಸಾ|| ಗೊಬ್ಬುರ (ಬಿ) ರವರು ಹೊಲದಲ್ಲಿ ಹಾಕಿದ ಜೋಪಡಿ ಕಿತ್ತಿ ಹಾಕಿ ನನಗೆ ಮತ್ತು ನನ್ನ ತಮ್ಮನಿಗೂ ಅವಾಚ್ಯ ವಾಗಿ ಬೈದು ಹೊಡೆ ಮಾಡಿ ಗಾಯಗೊಳಿಸಿರುವ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಇಂದು ದಿನಾಂಕ:30-06-2012 ರಂದು ಬೆಳಿಗ್ಗೆ 10-00 ಗಂಟೆಗೆ ಖಾಸಗಿ ದೂರು ವಸೂಲಾಗಿದ್ದರ ಮೇರೆಗೆ ಠಾಣೆ ಗುನ್ನೆ ನಂಬರ :75/2012 ಕಲಂ.323,324,504,506, ಸಂ. 149 ಐಪಿಸಿ ಮತ್ತು 3 (1)(10) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಚಂದ್ರಕಾಂತ ತಂದೆ ನಾಗಪ್ಪ ಹಾದಿಮನಿ ವ|| 40 ಸಾ|| ಬೋರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾ ರವರು ನನ್ನ ಚಿಕ್ಕಪ್ಪನ ಮಗನಾದ ಅಶೋಕನ ಮದುವೆ ಮಾಡಿ ಮದು ಮಕ್ಕಳ ಮೆರವಣಿಗೆ ಹಮ್ಮಿಕೊಂಡಿರುವಾಗ ರಾತ್ರಿ 11 ಗಂಟೆಯ ಸುಮಾರಿಗೆ ರೋಡಿನ ಮೇಲೆ ಹೋಗಿ ಬರುವ ವಾಹನಗಳಿಗೆ ಹಾಗು ಸಾರ್ವಜನಿಕರಿಗೆ ಅಡಚಣೆಯಾಗುತ್ತಿದೆ ಹೀಗೆ ಮಾಡುವದು ಸರಿಯಲ್ಲ ಅಂತ ನಾನು ಬುದ್ಧಿಮಾತು ಹೇಳಿದ್ದು, ಅದಕ್ಕೆ ಅನಿಲ ತಂದೆ ರಾಣಪ್ಪ ಈತನು ತನ್ನ ಜೊತೆಯಲ್ಲಿ ಇನ್ನೂ ಮೂರು ಜನರೊಂದಿಗೆ ಬಂದವನೇ ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನ್ನ ಕೈಯಲ್ಲಿದ್ದ ತಲವಾರದಿಂದ ಹೊಡೆಯಲು ಬಂದಾಗ,ನಾನು ಕೈಮುಂದೆ ಮಾಡಲು ಆ ಏಟು ಬಲಗೈ ಹಸ್ತದ ಮೇಲೆ ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ. ಇನ್ನುಳಿದ ಮೂರು ಜನರು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 46/2012 ಕಲಂ 341, 323, 324, 504 ಸಂಗಡ 34 ಐಪಿಸಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment