ಆಯುಧ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ :ದಿನಾಂಕ 08.06.12 ರಂದು 8:30 ಎ ಎಮ್ ಕ್ಕೆ ಅಫಜಲಪೂರ ಬಸ್ಸ್
ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಆಯುಧ ಹೊಂದಿರುವ ಖಚಿತ ಮಾಹಿತಿ ಬಂದ ಮೇರೆಗೆ ಮಂಜುನಾಥ
ಪಿ ಎಸ್ ಐ ಅಫಜಲಪೂರ ಪೊಲೀಸ್ ಠಾಣೆರವರು ತಮ್ಮ ಸಿಬ್ಬಂದಿಯವರೊಂದಿಗೆ ಹಿಡಿದು ವಿಚಾರಿಸಲ ಹೆಸರು ಮತ್ತು ವಿವರಣೆ ಕೇಳಲು ತನ್ನ ಹೆಸರು ಶ್ರೀಕಾಂತ ತಂದೆ ಪುಂಡಪ್ಪ ನಿಂಬರ್ಗಿ ಸಾ|| ಗೌರ (ಬಿ) ಎಂದು
ತಿಳಿಸಿದನು. ಅವನ ಹತ್ತಿರವಿರುವ ಒಂದು ನಾಡ ಫಿಸ್ತೂಲ್, 4 ಜೀವಂತ ಗುಂಡುಗಳು ಯಾವದೇ ಪರವಾನಿಗೆ
ಇಲ್ಲದೇ ಇಟ್ಟಿಕೊಂಡಿದ್ದರಿಂದ ಸದರಿಯವಗಳನ್ನು ಜಪ್ತಿ ಮಾಡಿದ ಆರೋಪಿತನ್ನು ವಶಕ್ಕೆ ತೆಗೆದುಕೊಂಡು
ಆತನ ಮೇಲೆ ಠಾಣೆ ಗುನ್ನೆ ನಂ 100/12 ಕಲಂ 37, 25, 27, ಐ ಆರ್ಮ್ಸ ಆಕ್ಟ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ
ಪ್ರಕರಣ:
ಗುಲಬರ್ಗಾ ಗ್ರಾಮೀಣ
ಪೊಲೀಸ ಠಾಣೆ:ಶ್ರೀ ಶರದ ತಂದೆ ಹಣಮಂತ ಪವಾರ ಉ:ಲಾರಿ ಚಾಲಕ ಸಾ: ನರಖೇಡ ತಾ: ಮೂಳ ಜಿ:
ಸೋಲ್ಲಾಪೂರ ಮಹಾರಾಷ್ಟ್ರ ರಾಜ್ಯ ರವರು ನಾನು ದಿನಾಂಕ: 07/06/2012 ರಂದು ಮಧ್ಯಾಹ್ನ 2-00 ಗಂಟೆಗೆ ಪೂನಾದಿಂದ ಲುಕ್ಕಡ ಕಂಪನಿಯ ಲಾರಿ ನಂ ಎಮ್‌ಹೆಚ್ 12 ಎಪ್‌ಸಿ 8543
ನೇದ್ದನ್ನು ಸೇಡಂದಲ್ಲಿರುವ ವಾಸವದತ್ತ ಪ್ಯಾಕ್ಟರಿಯಿಂದ ಸಿಮೆಂಟ ಮಾಡಿಕೊಂಡು ಹೋಗಲು ಹೊರಟಿದ್ದು
ರಾತ್ರಿ 11-00 ಗಂಟೆಗೆ
ಅಕ್ಕಲಕೋಟ ಸ್ವಾಮಿ ಸಮರ್ಥ ಧಾಬಾದ ಹತ್ತಿರ ಊಟಕ್ಕೆ ನಿಂತಾಗ ಮಹಾವೀರ ಟ್ರಾನ್ಸಪೋರ್ಟದಲ್ಲಿ ಲಾರಿ ಚಾಲಕನಾಗಿರುವ ಪರಿಚಯದ
ಶಿವಾನಂದ ಇತನು ಬಂದು ನನಗೆ ಕೇಳಲು ನಾನು ಸೇಡಂ ಪಟ್ಟಣಕ್ಕೆ ಸಿಮೇಂಟ ತರಲು ಹೋಗುತ್ತಿದ್ದೆನೆ ಅಂತಾ ತಿಳಿಸಿದ್ದರಿಂದ, ಇಬ್ಬರೂ ಊಟ ಮಾಡಿಕೊಂಡು ಲಾರಿಯಲ್ಲಿ ಹೊರಟಿದ್ದು ಶಿವಾನಂದ ಇತನ
ಊರಾದ ಸಾವಳೇಶ್ವರ ಗ್ರಾಮದ ಹತ್ತಿರ ಬಂದಾಗ
ಶಿವಾನಂದನು, ಮನೆ ದಾರಿ
ಗೊತ್ತಾಗಲ್ಲಾ ಅಂತ ಅವನೇ ಲಾರಿ ನಡೆಸುತ್ತಾ ಊರಿಗೆ ಹೋಗಿ ಮನೆಯಲ್ಲಿ ಮಾತಾಡಿಸಿಕೊಂಡು ಮರಳಿ
ಇಬ್ಬರೂ ಕೂಡಿ ಸೇಡಂಕ್ಕೆ ಹೊರಟಿದ್ದು ಆಳಂದ ಚೆಕ್ಕ ಪೋಸ್ಟ ದಾಟಿ ಹುಮನಾಬಾದ ರಿಂಗ ರೋಡ ಕಡೆಗೆ
ಬರುವಾಗ ಶಿವಾನಂದ ಇತನು ಲಾರಿಯನ್ನು ಅತೀವೇಗವಾಗಿ ಅಲಕ್ಷತನದಿಂದ ನಡೆಯಿಸಿ ದಿ:08/06/2012 ರಂದು ಮಧ್ಯರಾತ್ರಿ 3-30 ಗಂಟೆಗೆ ಸೈಯ್ಯದ
ಚಿಂಚೋಳಿ ಕ್ರಾಸ ಸಮೀಪ ಮೈಲಾರಿಂಗ ಪೆಟ್ರೋಲ ಪಂಪ ಎದುರಿನ ರೋಡಿನ ಮೇಲೆ ಒಮ್ಮೇಲೆ
ಬಲಭಾಗಕ್ಕೆ ಕಟ್ಟ್ ಮಾಡಲು ಹೋಗಿ ವೇಗದ ನಿಯಂತ್ರಣ ತಪ್ಪಿ ರೋಡ ಡಿವೈಡರ
ಮೇಲೆ ಏರಿ 100 ಪೀಟ ಅಂತರದ ಮೇಲೆ ಹೋಗಿ ಪಲ್ಟಿಯಾಗಿ
ಬಿದ್ದು, ಲಾರಿ ಉತ್ತರಕ್ಕೆ ಮುಖ ಮಾಡಿ ಬಿದಿದ್ದು. ನನಗೆ ಮೈ ಕೈಗೆ ಕಾಲಿನ ಎಡ ತೋಡೆಗೆ ಭಾರಿ ಗುಪ್ತಗಾಯವಾಗಿದ್ದು, ಚಾಲಕ ಶಿವಾನಂದ ಇತನು ಭಾರಿಗಾಯ ಹೊಂದಿ ಸ್ಟೇರಿಂಗ
ಹಾಗೂ ಸೀಟನಲ್ಲೆ ಸಿಕ್ಕಿಹಾಕಿಕೊಂಡು ಮೃತಪಟ್ಟಿರುತ್ತಾನೆ . ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 191/2012 ಕಲಂ 279,338 304(ಎ) ಐಪಿಸಿ
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment