Police Bhavan Kalaburagi

Police Bhavan Kalaburagi

Friday, June 15, 2012

GULBARGA DIST


ಗುಲಬರ್ಗಾ ನಗರದ ಸಂಚಾರಿ ಪೊಲೀಸ್ ರಿಂದ ವಾಹನ ನಿಮಯಮಗಳನ್ನು ಉಲಂಘಿಸಿದವರ ಮೇಲೆ  ಬ್ಲ್ಯಾಕ್ ಬೆರ್ರಿ ಉಪಕಣದಿಂದ ದಂಡ ವಸೂಲಿ

ವಾಹನ ನಿಯಮಗಳನ್ನು ಉಲಂಘಿಸುವ ವಾಹನ ಸವಾರರಿಗೆ ಆನ್ ಲೈನ ಮೂಲಕ ಸ್ಥಳದಲ್ಲಿಯೇ ಮೋಟಾರ ವಾಹನ ಕಾಯಿದೆ ಅಡಿಯಲ್ಲಿ ಅಧುನಿಕ ಬ್ಲ್ಯಾಕ ಬೆರ್ರಿ ಉಪಕರಣಗಳ ಮೂಲಕ ದಂಡ ವಿಧಿಸುವ ಕಾಗದ ರಹಿತ ವ್ಯವಸ್ಥೆಯನ್ನು ಗುಲಬರ್ಗಾ ನಗರದಲ್ಲಿ ಇಂದು ಜಾರಿಗೆ ತರಲಾಗಿದೆ. ಈಗಾಗಲೇ ಈ ವ್ಯವಸ್ಥೆಯು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೆ ಬಂದಿದ್ದು, ಇದರಿಂದ ಆನ್ ಲೈನ ಮೂಲಕ ದಂಡ ಹಾಕುವ ಕಾಗದ ರಹಿತ ವ್ಯವಸ್ಥೆಯನ್ನು ಹೊಂದಿದ ರಾಜ್ಯವಾಗಿರುತ್ತದೆ.
        ಈ ಮೊದಲು ತಪ್ಪಿತಸ್ಥ ವಾಹನ ಚಾಲಕರ ವಿರುದ್ದ ದಂಡ ಹಾಕುವ ಸಿಅರ್ ಅರ್ ವ್ಯವಸ್ಥೆ ಬದಲಿಗೆ ಕನಾಟಕ ರಾಜ್ಯ ಪೊಲೀಸ್ ಸಾಪ್ಟವೇರ ಅಳವಡಿಸಿದ ಬ್ಲ್ಯಾಕ ಬೆರ್ರಿ ಉಪಕರಣದ ಮೂಲಕ ದಂಡ ವಿಧಿಸಲಾಗುವದು. ಈ ಉಪಕರಣದಲ್ಲಿ ಯಾವದೇ ವಾಹನದ ಮೇಲೆ ಈ ಮೊದಲು ಸಂಚಾರಿ ನಿಯಮದ ಉಲಂಘನೆ  ಬಗ್ಗೆ ಪ್ರಕರಣ ದಾಖಲಾಗಿದ್ದರೆ, ಪ್ರಕರಣ ಇತ್ಯರ್ಥವಾಗದೇ ಬಾಕಿ ಇರುವ ಬಗ್ಗೆ ಚಾಲಕರ ವಾಹನ ಸಂಖ್ಯೆ ಹಾಗು ಡ್ರೈವಿಂಗ್ ಲೈಸನ್ಸ ನಂಬರ ಆಧರಿಸಿದ  ವಿವರ ನೀಡುತ್ತದೆ. ಇದರಿಂದ  ಈ ಮೊದಲು ಮೋಟಾರ ವಾಹನದ ಕಾಯಿದೆ ಉಲ್ಲಂಘಿಸಿದ ಪ್ರಕರಣ ಇತ್ಯರ್ಥವಾಗದೇ ಇದ್ದರೆ ಅವರಿಂದ ಸಹ ದಂಡ ವಸೂಲು ಮಾಡಲಾಗುದು. ಇದರಲ್ಲಿ ಅಳವಡಿಸಿದ ಮಾಹಿತಿ ರಾಜ್ಯ ಮಟ್ಟದ ಸರ್ವರದಲ್ಲಿ ದಾಖಲಾಗುತ್ತದೆ.
        ಗುಲಬರ್ಗಾ ನಗರದಲ್ಲಿ ಸಧ್ಯಕ್ಕೆ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ನಗರದ ಸಂಚಾರಿ ಠಾಣೆಗಳಿಗೆ ಒಟ್ಟು 10 ಬ್ಲ್ಯಾಕ ಬೆರ್ರಿ ಉಪಕರಣಗಳು ಮಂಜೂರಾಗಿದ್ದು, ಸಂಚಾರಿ ಠಾಣೆಗಳ ಒಬ್ಬ ಪಿಐ, ಒಬ್ಬ ಪಿಎಸಐ, ಹಾಗು 4 ಜನ ಎಎಸಐ ಜನರಿಗೆ ಈಗಾಗಲೇ ಬೆಂಗಳೂರಿನಲ್ಲಿ ಇದರ ಬಗ್ಗೆ ತರಬೇತಿ ನೀಡಲಾಗಿದ್ದು, ಅವರೆಲ್ಲರೂ ಎಲ್ಲಾ ವಿಧವಾದ ಮೋಟಾರ ವಾಹನ ಕಾಯಿದೆ ಉಲ್ಲಂಘಿಸಿದ ಪ್ರಕರಣಗಳಲ್ಲಿ ದಂಡ ವಿಧಿಸುವ ಅಧಿಕಾರಿ ಹೊಂದಿರುತ್ತಾರೆ. ಈ ವ್ಯವಸ್ಥೆಯು ಅತ್ಯಂತ ಪಾರದರ್ಶಕವಾಗಿದ್ದು, ಯಾವದೇ ರೀತಿಯ ಅವ್ಯವಹಾರಕ್ಕೆ ಆಸ್ಪದವಿರುವದಿಲ್ಲ. ಇದರಿಂದ ಪದೇ ಪದೇ ರಸ್ತೆ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರ ಮಾಹಿತಿಯು ಬ್ಲ್ಯಾಕ ಬೆರ್ರಿ ಉಪಕರಣಗಳಲ್ಲಿ ಲಭ್ಯವಾಗಿರುವದರಿಂದ ಹೆಚ್ಚಿನ ಪ್ರಮಾಣದ ದಂಡವನ್ನು ವಾಹನ ಚಾಲಕರು ಭರಿಸಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಈ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.
ಅಪಘಾತ ಪ್ರಕರಣ:
ವಾಡಿ ಪೊಲೀಸ್ ಠಾಣೆ:ಶ್ರೀ, ಸಾಬಣ್ಣಾ ತಂದೆ ಸಿದ್ದಪ್ಪಾ ಹಲಗಿ ಸಾ|| ಕನಗನಹಳ್ಳಿ ರವರು ನಾನು ಮತ್ತು ರಾಜು ತಂದೆ ನಾಗಪ್ಪಾ, ಬಸಪ್ಪಾ ಪೂಜಾರಿ ಕೂಡಿಕೊಂಡು ಮುರುಮ ತುಂಬುವ ಕೆಲಸ ಕುರಿತು ನಮ್ಮೂರಿನ ಸುರಣ್ಣ ಗೌಡ ಇವರ ಟ್ರಾಕ್ಟರ ನಂ: ಕೆಎ-32 ಟಿ-1762/63 ನೇದ್ದರ ಮೇಲೆ ನಿನ್ನೆ ದಿನಾಂಕ 14-06-2012 ರಂದು ಹೋಗಿದ್ದು, ಸದರಿ ಟ್ಯಾಕ್ಟರದಿಂದ ಮುರುಮ ತೆಗೆದುಕೊಂಡು ಬಂದು ಮಲ್ಲಣಗೌಡರ ಮನೆಗೆ ಹಾಕಿ 5 ಗಂಟೆಯ ಸುಮಾರಿಗೆ ಮತ್ತೆ ಮುರುಮ ತುಂಬಲು ಕನಗನಹಳ್ಳಿಯಿಂದ ಸನ್ನತಿ ಕಡೆಗೆ ಹೊರಟಿದ್ದೆವು, ಟ್ಯಾಕ್ಟರದಲ್ಲಿ ಮಲ್ಲಣಗೌಡ ಹಾಗು ನಾವು ಮೂರು ಜನರು ಟ್ರ್ಯಾಲಿ ಬಂಪರ ಹಿಡಿದು ನಿಂತೆವು ಬಸಪ್ಪಾ ಎಡಗಡೆಗೆ ನಿಂತಿದ್ದನು. ಚಾಲಕನಾದ ಸುರಣಗೌಡ ಕನಗನಹಳ್ಳಿ ಇತನು ಟ್ರಾಕ್ಟರನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸುತ್ತಿದ್ದು, ರೊಡಿಗೆ ಇರುವ ತಗ್ಗುಗಳನ್ನು ತಪ್ಪಿಸುವ ಕುರಿತು ಒಮ್ಮೆಲೆ ಟ್ರಾಕ್ಟರ ಕಟ್ ಹೊಡೆದ ಪರಿಣಾಮ ಟ್ರ್ಯಾಲಿಯಲ್ಲಿದ್ದ ಬಸಪ್ಪಾ ಪೂಜಾರಿ ಕೆಳಗೆ ಬಿದ್ದನು ಆಗ ನಾವು ಚಾಲಕನಿಗೆ ಬಸಪ್ಪಾ ಬಿದ್ದಾನೆ ಅಂತಾ ಕೂಗಿದಾಗ ಚಾಲಕ ಟ್ಯಾಕ್ಟರನ್ನು ಸ್ವಲ್ಪ ಮುಂದಕ್ಕೆ ಹೊಗಿ ನಿಲ್ಲಿಸಿದನು ನಾವು ಕೆಳಗೆ ಇಳಿದು ನೊಡಲಾಗಿ ಬಸಪ್ಪಾ ಎಡಗಡೆ ರಸ್ತೆಯ ಪಕ್ಕಕ್ಕೆ ರಸ್ತೆ ಮೆಲೆ ಬಿದ್ದಿದ್ದು ನೊಡಲಾಗಿ ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ ರಕ್ತ ಬರುತ್ತಿತ್ತು, ಮತ್ತು ಬಲ ಭುಜಕ್ಕೆ ಬೆನ್ನಿಗೆ, ಎರಡು ಮೊಳಕೈಗೆ ಹಾಗು ಬಲ ಮೊಳಕಾಲಿಗೆ ರಕ್ತಗಾಯವಾಗಿ ಎರಡು ಕಿವಿ ಹಾಗು ಮೂಗಿನಿಂದ ರಕ್ತ ಬರಹತ್ತಿತ್ತು ಮಾತನಾಡಿಸಿದರು ಮಾತನಾಡಲಿಲ್ಲಾ, ಬಸಪ್ಪನ ತಂದೆಯಾದ ಸಿದ್ರಾಮಪ್ಪಾ ಪೂಜಾರಿ ಬಂದು 108 ಅಂಬುಲೆನ್ಸದಲ್ಲಿ ಬಸಪ್ಪನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಯಾದಗಿರಿಗೆ ಕರೆದುಕೊಂಡು ಹೋದರು, ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ದಾರಿಯ ಮಧ್ಯದಲ್ಲಿ ಬಸಪ್ಪಾ ಪೂಜಾರಿ ಮರಣ ಹೊಂದಿರುತ್ತಾನೆ ಅಂತಾ ಸಾಬಣ್ಣ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 83/2012 ಕಲಂ 279,304 (ಎ) ಐಪಿಸಿ ಸಂಗಡ 187 ಐ,ಎಮ್,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: