ದರೋಡೆ ಪ್ರಕರಣ:
ಸ್ಟೇಷನ
ಬಜಾರ ಪೊಲೀಸ ಠಾಣೆ : ಶ್ರೀಮತಿ ಮಾಧವಿ ಗಂಡ ಹರ್ಷವರ್ಧನ ಶಹಾ ಸಾ: ರೈಲ್ವೆ ಲೈನ್
ಪ್ರಿಯಾಂಕ ರೆಸಿಡೆನ್ಸಿ ಸೊಲಾಪೂರ ರವರು ನಾನು ದಿನಾಂಕ 15-07-2012 ರಂದು ಕೊಠಾರಿ
ಭವನದಲ್ಲಿ ಸಂಬಂಧಿಕರ ಮದುವೆ ಇದ್ದ ಪ್ರಯುಕ್ತ ದಿನಾಂಕ 14-07-12 ರಂದು ಮಧ್ಯಾಹ್ನ ಗುಲಬರ್ಗಾಕ್ಕೆ ಬಂದು ಹೋಟೆಲ್ ರಾಜ್ ರಾಜೇಶ್ವರಿ ದಲ್ಲಿ ರೂಮ್ ಬುಕ್ ಮಾಡಿ ಸಾಯಂಕಾಲ ಕೊಠಾರಿ ಭವನಕ್ಕೆ ಹೋಗಿ ಸಂಭದಿಕರಿಗೆ ಮಾತಾಡಿಸಿ
ರಾತ್ರಿ 11-45 ಗಂಟೆಗೆ ನಾನು ಸಂಜೀವ ಕುಮಾರ, ಪ್ರತಿಭಾ, ಶುಭಾಂಗಿ ಎಲ್ಲರೂ ಕೂಡಿ ಕಾರಿನಲ್ಲಿ ಹೊಟೆಲಕ್ಕೆ ಬಂದು ಒಳಗಡೆ ಹೊಗುತ್ತಿರುವಾಗ
ಹಿಂದಿನಿಂದ ಯಾರೋ ಒಬ್ಬ ಬಂದವನೆ ನನ್ನ ಕೊರಳಲ್ಲಿಯ ನೆಕಲೆಸ ಲಕ್ಷ್ಮಿ ಹಾರ 3 ತೊಲಿ (30 ಗ್ರಾಂ) ಅ.ಕಿ 1,00000/- ರೂಪಾಯಿಗಳ ಕಿಮ್ಮತ್ತಿನದ್ದು ಕಿತ್ತುಕೊಂಡು ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ
99/2012 ಕಲಂ 392 ಐಪಿಸಿ ಪ್ರಕಾರ ಗುನ್ನ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಶ್ರೀ ಅಬ್ದುಲ ಖದೀರಖಾನ ತಂದೆ
ಮಹ್ಮದ ಯುನುಸಖಾನ ಸಾಃ ಆದರ್ಶ ನಗರ ಗುಲಬರ್ಗಾರವರು ನಾನು ದಿನಾಂಕ 12-07-2012 ರಂದು 1-30 ಪಿ.ಎಮ್ ಕ್ಕೆ ದರ್ಗಾ ರೋಡಿನಲ್ಲಿ
ಬರುವ ಮಗದುಮ ಟ್ರಾನ್ಸಪೊರ್ಟ ಎದರು ರೋಡಿನ ಮೇಲೆ ನನ್ನ ತಂದೆಯಾದ ಮಹ್ಮದ ಯುನುಸ್ ಖಾನ ಇವರು ತನ್ನ
ಮೋಟಾರ ಸೈಕಲ ನಂ. ಕೆ.ಎ 32 ಇ.ಎ 1786 ನೇದ್ದನ್ನು ಚಲಾಯಿಸಿಕೊಂಡು
ಹೋಗುತ್ತಿದ್ದಾಗ ಕಾರ ನಂ. ಎಮ್.ಎಚ್. 12 ವೈ.ಎ 3876 ನೇದ್ದರ ಚಾಲಕನು ತನ್ನ ಕಾರನ್ನು
ಎಮ್.ಎ.ಟಿ ಕ್ರಾಸ ಕಡೆಯಿಂದ ಅತಿವೇಗ ಮತ್ತು ಅಲಕ್ಷತದಿಂದ ಚಲಾಯಿಸಿಕೊಂಡು ಬಂದು ನನ್ನ ತಂದೆಯ
ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಭಾರಿ ಗುಪ್ತಗಾಯ ಗೊಳಿಸಿದ್ದು ಗಾಯಾಳುವಿಗೆ ಉಪಚಾರ ಕುರಿತು
ಅದೇ ಕಾರಿನಲ್ಲಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ಆಸ್ಪತ್ರೆಯಿಂದ ಕಾರ ಚಾಲಕನು ತನ್ನ ಕಾರ ಸಮೇತ ಓಡಿ
ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ; 37/2012 ಕಲಂ 279,
338, ಐಪಿಸಿ ಸಮಗಡ 187 ಐ.ಎಮ.ವಿ ಆಕ್ಟ ಪ್ರಕಾರ ಗುನ್ನ ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment