ಹೆಣ್ಣು ಮಗಳು ಕಾಣೆಯಾದ ಪ್ರಕರಣ:
ಗ್ರಾಮಿಣ ಪೊಲೀಸ್ ಠಾಣೆ: ಶ್ರೀ ಮಹಾಂತೇಶ ತಂದೆ ಈರಣ್ಣಾ ಹೀರಾಪುರ ವಯಾ:35 ವರ್ಷ ಜಾ:ಲಿಂಗಾಯತ ಉ:ಟೇಲರ ಕೆಲಸ ಸಾ:ಲಂಗರ ಹನುಮಾನ ಗುಡಿಯ ಹತ್ತಿರ ಗುಲಬರ್ಗಾ ರವರು ನನ್ನ ಹೆಂಡತಿಯಾದ ಅಂಬಿಕಾ ವಯಾ:32 ವರ್ಷ ಇವಳು ದಿನಾಲು ಗೌಂಡಿ ಕೆಲಸ ಹೋಗುತ್ತಿದ್ದು ದಿನಾಂಕ:-27/06/2012 ರಂದು ಮುಂಜಾನೆ 9:00 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೋಗುತ್ತೇನೆ ಅಂತಾ ಹೇಳಿ ಹೋದವಳು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲಾ. ನಾವು ಎಲ್ಲಾ ಕಡೆ ಹುಡಿಕಾಡಿದೂ ಪತ್ತೆಯಾಗಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.221/2012 ಕಲಂ ಹೆಣ್ಣು ಮಗಳು ಕಾಣೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.ಕಾಣೆಯಾದ ಹೆಣ್ಣು ಮಗಳು ಚಹರೆ ಪಟ್ಟಿ ಈ ರೀತಿ ಇರುತ್ತದೆ. ಎತ್ತರ 5 ಪೀಟ 4 ಇಂಚು, ಗುಂಡು ಮುಖ, ಸಾದಾ ಕಪ್ಪು ಬಣ್ಣ, ಸಧ್ರಡ ಮೈಕಟ್ಟು, ಕನ್ನಡ ಹಿಂದಿ ಮರಾಠಿ ಭಾಷೆ ಮಾತನಾಡುತ್ತಾಳೆ ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಕಂಟ್ರೊರ್ಳ ರೂಮ್ ದೂರವಾಣಿ ನಂ: 08472-263604/ ಅಥವಾ 08472-263631 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
No comments:
Post a Comment