ಕೊಲೆ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ :ಶ್ರೀ ಬಾಬು ತಂದೆ ರಾಮಯ್ಯಾ ಬಾಗೋಡಿ ಸಾ|| ನಾಸರ್ ಜಂಗ ಏರಿಯಾ ಚಿತ್ತಾಪೂರರವರು ನನ್ನ ಮಗನಾದ ಭೀಮು ಇತನು ದಿನಾಂಕ: 18-07-2012 ರಂದು ಸಾಯಂಕಾಲ 4-30
ಗಂಟೆ ಏಕಿ ಮಾಡಲು ಹೋದ ಸಮಯದಲ್ಲಿ ತಾಯಪ್ಪಾ ತಂದೆ ರಾಮಯ್ಯ ಭಾಗೋಡಿ ಮತ್ತು ಯಲ್ಲಪ್ಪಾ ತಂದೆ ಸಾಬಣ್ಣ
ಕರದಳ್ಳಿ ಇಬ್ಬರೂ ಹಣ ಕೂಡುವ ತೆಗೆದುಕೊಳ್ಳುವ ಸಂಬಂಧ ತಕರಾರು ಮಾಡಿಕೊಳ್ಳುತ್ತಿರು ಅದನ್ನು ಕಂಡು
ನನ್ನ ಮಗ ಭೀಮು ಇತನು ಜಗಳ ಮಾಡಿಕೊಳ್ಳುವದು ಸರಿಯಲ್ಲ ಅಂತಾ ಹೇಳಿದಾಗ ಭೀಮು ತಂಧೆ ಶಿವಪ್ಪ
ಕರದಳ್ಳಿ, ಈರಪ್ಪ ತಂದೆ ಯಂಕಪ್ಪ ಆಂದೋಲಾ, ಈಸು ತಂಧೆ ಈರಪ್ಪ ಆಂದೋಲಾ, ಯಂಕಟಿ ತಂಧೆ ಈರಪ್ಪ ಇಂಗಳಗಿ, ಸಣ್ಣ ನಾಗಪ್ಪ ತಂದೆ ತಿಮ್ಮಯ್ಯಾ ಬಶಿರಾಬಾದ, ಈಸು ತಂದೆ ರಾಮಯ್ಯಾ ಇಂಗಳಗಿ, ರಾಜು ತಂಧೆ ಸಾಬಯ್ಯಾ ಕರದಳ್ಳಿ, ರಾಜು ತಂಧೆ ಈರಪ್ಪ ಆಂದೋಲಾ, ಯಲ್ಲಪ್ಪ ತಂದೆ ಸಾಬಣ್ಣ ಕರದಳ್ಳಿ ಸಾ|| ಎಲ್ಲರೂ ನಾಸರಜಂಗ ಏರಿಯಾ ಚಿತ್ತಾಫೂರ ರವರು ಎಲ್ಲರೂ ಕೂಡಿಕೊಂಡು ಕೈ
ಮುಷ್ಟಿ ಮಾಡಿ ಹೊಟ್ಟೆಗೆ ಹೊಡೆದಿರುತ್ತಾರೆ. ನಾವು ಸಹ ಅಲ್ಲಿಗೇ ಹೋಗಿ ನೋಡಲು ಭೀಮು ಇತನು
ಸ್ಥಳದಲ್ಲಿ ಕುಸಿದು ಬಿದ್ದನ್ನು , ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದಾಗ ವೈಧ್ಯಾಧಿಕಾರಿಗಳು
ಮೃತ ಪಟ್ಟಿರುವ ಬಗ್ಗೆ ತಿಳಿಸಿದ್ದರು. ನನ್ನ ಮಗನಿಗೆ ಹೊಡೆದು ಕೊಲೆ ಮಾಡಿದವರ ಮೇಲೆ ಕಾನೂನು
ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 69/2012 ಕಲಂ
147, 148, 323, 324, 504, 302 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment