ಕಳ್ಳತನ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ.ಖಾಸೀಮ
ಶಹಾ ತಂದೆ ಅಹಮದ ಶಹಾ ಸಾ||ಕಮಲಾಪೂರ ರವರು ನಾನು ನನ್ನ ಹೆಂಡತಿ ದಿನಾಂಕ: 19/07/2012 ರಂದು ರಾತ್ರಿ 10-00
ಗಂಟೆ ಸುಮಾರಿಗೆ ಊಟ ಮಾಡಿಕೊಂಡು ಮಲಗಿಕೊಂಡಾಗ ಮಧ್ಯರಾತ್ರಿ 2-00 ಗಂಟೆ ಸುಮಾರಿಗೆ ನನಗೆ ನಿದ್ದೆಯಿಂದ ಎಚ್ಚರ ಆಯಿತು. ಮೂತ್ರ ವಿಸರ್ಜನೆ ಕುರಿತು
ಬಾಗಿಲು ತೆರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ. ಆಗ ನಾನು ಹಿಂಬಾಗಿಲು ತೆರೆದು ಹೊರಗೆ ಬಂದು
ಮುಂಬಾಗಿಲ ಹತ್ತಿರ ಬಂದಾಗ ನಾನಿದ್ದ ಬಾಗಿಲಿಗೆ ಕೊಂಡಿ ಹಾಕಲಾಗಿತ್ತು. ಅಲ್ಮಾರಿ ಇದ್ದ ರೂಮಿನ
ಬಾಗಿಲು ನೋಡಿದಾಗ ಅದರ ಕೊಂಡಿಯನ್ನು ಯಾರೋ ಅಪರಿಚಿತ ಕಳ್ಳರು ಕೊಂಡಿ ಮಣಿಸಿ ಒಳಗೆ ಹೋಗಿ ಅಲ್ಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು, ಮತ್ತು ಬೆಳ್ಳಿನ ಸಾಮನುಗಳು ನಗದು ಹಣ
1300=00 ರೂಪಾಯಿ ಹೀಗೆ ಒಟ್ಟು 24,600=00 ರೂಪಾಯಿಯ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ
ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ: 86/2012
ಕಲಂ 457. 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment