Police Bhavan Kalaburagi

Police Bhavan Kalaburagi

Monday, July 2, 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಲಾಲಪಾಶಾ ತಂದೆ ರಹಿಮತ ಅಲಿ    ಉ: ಅಟೋರಿಕ್ಷಾ ಚಾಲಕ  ಸಾ||ಹುಸೇನಅಲಿಮಮಜೀದ ಎದುರು ಚೋಟಾ ರೋಜಾ ಪಾಶಾಪೂರ  ಗುಲಬರ್ಗಾರವರು ನಾನು ದಿನಾಂಕ 24-06-12 ರಂದು ಬೆಳಿಗ್ಗೆ 6-45 ಗಂಟೆಗೆ ನನ್ನ ಅಟೋರಿಕ್ಷಾ ನಂ: ಕೆಎ 32  9298 ನೆದ್ದನ್ನು  ಎಸ್.ವಿ.ಪಿ ಸರ್ಕಲ ಕಡೆಯಿಂದ ಜಗತ ಸರ್ಕಲ  ಕಡೆಗೆ ಬರುತ್ತಿದ್ದಾಗ ಎಸ್.ಬಿ ಪಾಟೀಲ ಪೆಟ್ರೊಲ್  ಪಂಪ  ಎದುರು ರೋಡಿನ ಮೇಲೆ ಎದುರುಗಡೆಯಿಂದ ಟ್ರ್ಯಾಕ್ಟರ  ನಂ:ಕೆಎ32 ಟಿಎ-1157 ನೇದ್ದರ ಚಾಲಕನು ತನ್ನ ವಾಹನವನ್ನು  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಅಟೋರಿಕ್ಷಾ ವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ನನ್ನ ಅಟೋರೀಕ್ಷಾ ಡ್ಯಾಮೇಜ ಆಗಿರುತ್ತದೆ ಆತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 70/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:01/07/2012 ರಂದು ಸಾಯಂಕಾಲ ಅವರಾದ (ಬಿ) ಸೀಮಾಂತರದಲ್ಲಿ ಬರುವ ಅಂಬಾರಾಯ ಇವರ ಹೊಲದಲ್ಲಿ ಅಂದರ ಬಾಹರ ಇಸ್ಪೇಟ ಜೂಜಾಟ  ಆಡುತ್ತಿದ್ದ ಮಹ್ಮದ ಖಾಜಾಮಿಯ್ಯ ತಂದೆ ಫರೀದ ಸಾಬ ಸಾ: ಬುಲಂದ ಪರವೇಜ ಕಾಲೋನಿ,                      ಸಿರಾಜ ತಂದೆ ಪೈಜೋದ್ದೀನ,ಕರಿಮೋದಿನ ತಂದೆ ಪೀರ ಅಹ್ಮದ ಸಾ:ಬುಲಂದ ಪರವೇಜ ಕಾಲೋನಿ,ಬಾಲೆಸಾಬ ತಂದೆ ಮೈನೋದಿನ  ಸಾ:ಬುಲಂದ ಪರವೇಜ ಕಾಲೋನಿ,ಮತ್ತು ಅಕ್ಬರ ತಂದೆ ಶರಪೋದಿನ ಸಾ||ಖಮರ ಕಾಲೋನಿ ಗುಲಬರ್ಗಾ 6 ಜನರನ್ನು ಹಾಗೂ ನಗದು ಹಣ 8100/- ರೂಪಾಯಿಗಳು ಹಾಗೂ ಇಸ್ಪೇಟ ಎಲೆಗಳು ಮಾನ್ಯ ಡಿವೈಎಸ್ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರು ತಮ್ಮ  ನೇತೃತ್ವದಲ್ಲಿ ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದರಿಂದ ಠಾಣೆ ಗುನ್ನೆ ನಂ: 218/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: