ಕೊಲೆಗೆ ಪ್ರಯತ್ನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಮತಿ ವಿಜಯಲಕ್ಷ್ಮಿ ಗಂಡ ಸೋಮಶೇಖರ ತಳವಾರ ಸಾ: ಟೀಚರ ಕಾಲೋನಿ ಜೇವರ್ಗಿ ರೋಡ ಗುಲಬರ್ಗಾ ರವರು ನಾನು ನನ್ನ ಗಂಡನಾದ ಸೋಮಶೇಕರ ಇತನು ದಿನ ನಿತ್ಯ ಸರಾಯಿ ಕುಡಿಯುವದು ಮತ್ತು ಜೂಜಾಟ ಆಡುವ ಚಟ್ಟದವನಿದ್ದು. ನನ್ನ ಶೀಲದ ಬಗ್ಗೆ ಸಂಶಯ ಪಟ್ಟಿರುತ್ತಾನೆ. ದಿನಾಂಕ:01-07-2012 ರಂದು ರಾತ್ರಿ 11-00 ಗಂಟೆಗೆ ಸುಮಾರಿಗೆ ನಾನು ಮತ್ತು ನನ್ನ ಮಗಳು ಸ್ನೇಹಾ ಇಬ್ಬರು ಮನೆಯಲ್ಲಿ ಮಲಗಿಕೊಂಡಾಗ ಗಂಡನಾದ ಸೋಮಶೇಖರ ಇತನು ಸರಾಯಿ ಕುಡಿದು ಮನೆಗೆ ಬಂದು ನಮ್ಮ ಅಣ್ಣ ಅತ್ತಿಗೆ ನನಗೆ ಇನ್ನೋಂದು ಮದುವೆ ಮಾಡುತ್ತೇವೆ ಅಂತಾ ಹೇಳಿದ್ದಾರೆ, ನಿನಗೆ ಬಿಡುವದಿಲ್ಲಾ ಅಂತ ಕೈಯಿಂದ ಮುಖದ ಮೇಲೆ ಹೊಡೆದು ಹೊಟ್ಟೆಯ ಮೇಲೆ ಒದ್ದಿರುತ್ತಾನೆ .ಕೊಲೆ ಮಾಡುವ ಉದ್ದೇಶದಿಂದ ಅವನು ತನ್ನ ಕಿಸೇಯಲ್ಲಿದ್ದ ಪ್ಲಾಸ್ಟಿಕ ವೈರದಿಂದ ನನ್ನ ಕೊರಳಿಗೆ ಬಿಗಿದು ಕೊಲೆಗೆ ಪ್ರಯತ್ನ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:99/2012 ಕಲಂ 109 323 504 307 ಸಂ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:ರೋಜಾ ಪೊಲೀಸ್ ಠಾಣೆ:ದಿನಾಂಕ: 04-07-2012 ರಂದು ರಾತ್ರಿ 8-30 ಗಂಟೆಗೆ ದೀಪಕ ಚೌವ್ವಾಣ ತಂದೆ ಭಾಸ್ಕರ ಚೌವ್ವಾಣ ಉ: ಸೆನಟರಿ ಇನ್ಸಪೆಕ್ಟರ್ ಸಾ: ಮುನೀಮ ಸಂಗ ನೆಹಗು ಗಂಜ ಗುಲಬರ್ಗಾ ರವರು ನಾನು ಮಹಾನಗರ ಪಾಲಿಕೆ ಗುಲಬರ್ಗಾದಲ್ಲಿ ಸೆನಟರಿ ಇನ್ಸಪೆಕ್ಟರ ಇದ್ದು ವಲಯ ಕಛೇರಿ 3 ರಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ.ನಯಾಮೊಹಲ್ಲಾ ಮಿಜಗುರಿಯಲ್ಲಿ ಒಂದು ಕಛೇರಿ ಇಟ್ಟಿಕೊಂಡಿರುತ್ತೇವೆ. ಪ್ರತಿ ದಿವಸ ಬೆಳಿಗ್ಗೆ 6:00 ಎಎಮ್ ದಿಂದ 2:00 ಪಿಎಮ್ ವರೆಗೆ ಈ ಕಛೇರಿಯಲ್ಲಿ ಕೆಲಸ ಮಾಡಿಕೊಂಡು ಬರುತ್ತೇವೆ ನಮ್ಮ ಕಛೇರಿಯ ಎದುರುಗಡೆ ಬಡಾವಣೆಯ ಸಾರ್ವಜನಿಕರ ಮನೆ ಮನೆಗಳಿಂದ ಕಸಗಳನ್ನು ಸಂಗ್ರಹಿಸುವ ಕುರಿತು 4 ಟ್ರೈ ಸೈಕಲ್ ಗಳನ್ನು ಇಟ್ಟುಕೊಂಡಿದ್ದು, ನಮ್ಮ ಕೆಲಸಗಾರರೂ ಬೆಳಿಗ್ಗೆ 6:00 ರಿಂದ ಮಧ್ಯಾನ 2:00 ಗಂಟೆಯ ವರೆಗೆ ಕೆಲಸ ಮಾಡಿ ಆ ಟ್ರೈ ಸೈಕಲ್ ಗಳನ್ನು ಕಛೇರಿಯ ಎದುರುಗಡೆ ನಿಲ್ಲಿಸಿ ಹೋಗುತ್ತಾರೆ .ದಿನಾಂಕ:04/07/2012 ರಂದು ನಮ್ಮ ಕಚೇರಿಯ ಟ್ರೈ ಸೈಕಲ್ ನಡೆಸುವ ಕೆಲಸಗಾರರೂ ತಮ್ಮ ಟ್ರೈ ಸೈಕಲ್ ಕೆಲಸಗಳನ್ನು ಮುಗಿಸಿ ಮಧ್ಯಾನ 2:00 ಗಂಟೆಗೆ ನಮ್ಮ ಆಫೀಸ ಮುಂದೆ 4 ಟ್ರೈ ಸೈಕಲ್ ಗಳನ್ನು ನಿಲ್ಲಿಸಿ ಹೋಗಿದ್ದು, ನಾವು ಮಧ್ಯಾನ ಊಟ ಮುಗಿಸಿಕೊಂಡು ಸಾಯಂಕಾಲ 6:00 ಗಂಟೆಗೆ ಬಂದು ನೋಡಲು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:59/2012 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಗ್ರಾಮಿಣ ಪೊಲೀಸ್ ಠಾಣೆ: ಶ್ರೀ ಷಣ್ಮುಖ ತಂದೆ ಹಣಮಂತ ವಗ್ಗೆ ಸಾ: ಪಟ್ಟಣ ಗ್ರಾಮ ತಾ:ಜಿ: ಗುಲಬರ್ಗಾ ರವರು ನನ್ನ ಮಗ ರಾಕೇಶ ಮತ್ತು ಆತನ ಗೆಳೆಯ ಮರೆಪ್ಪ ಇಬ್ಬರು ಪಟ್ಟಣ ಗ್ರಾಮದಲ್ಲಿರುವ ಗುಂಡಪ್ಪ ಹೋಟಲ ಪಕ್ಕದಲ್ಲಿರುವ ಅಂಗಡಿಗೆ ಶೇಂಗಾ ಖರೀದಿ ಮಾಡಲು ಹೋದಾಗ ಮಲ್ಲಿಕಾರ್ಜುನ ಬಿಸಗೊಂಡ, ಬಾಬು ಮುತ್ತಿಮೊಡ, ಶಾಂತಪ್ಪ ರಾಯಗೊಂಡ ಇವರು ಬಂದು ಮಲ್ಲಿಕಾರ್ಜುನ ಈತನು ರಾಕೇಶನಿಗೆ ಡಿಕ್ಕಿ ಹೊಡೆದಿದ್ದರಿಂದ ನೋಡಿ, ಶೇಂಗಾ ಖರೀದಿ ಮಾಡಲಿಕ್ಕೆ ಬರುವುದಿಲ್ಲಾ ಎಂದು ಕೇಳಿದ್ದಕ್ಕೆ ಈ ಮೊವರು ಜನರು ಹೊಲೆಯ ಸೂಳೆ ಮಕ್ಕಳೇ ಅಗಸಿಯಲ್ಲಿ ನಿಮ್ಮದು ಎನು ಕೆಲಸ ಬೈಯ್ಯುತ್ತಾ ಹೊಡೆ ಬಡೆ ಮಾಡಿರುತ್ತಾರೆ. ಯಾಕೆ ಅಂತಾ ಕೇಳಲು ನಾನು ಮತ್ತು ಸಾಗರ ಇವರೊಂದಿಗೆ ಗುಂಡಪ್ಪ ಹೋಟಲ ಹತ್ತಿರ ಸಂಜೆ 7-00 ಗಂಟೆ ಸುಮಾರಿಗೆ ಹೋಗಿ ಮಲ್ಲಿಕಾರ್ಜುನ ಈತನಿಗೆ ಇವರಿಗೆ ಯಾಕೇ ಗ್ರೌಡರೇ ನನ್ನ ಮಗನಿಗೆ ಹೊಡೆದಿದ್ದಿರೀ ಎಂದು ಕೇಳಿದ್ದಕ್ಕೆ ಎಲ್ಲರೂ ಕೂಡಿಕೊಂಡು ಹೊಡೆ ಬಡೆ ಮಾಡಿ ಜಾತಿ ಎತ್ತಿ ಬೈಉದಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆ ಗುನ್ನೆ ನಂ. ಗುನ್ನೆ ನಂ. 222/12 ಕಲಂ 504,324, 323 ಸಂ. 34 ಐಪಿಸಿ ಮತ್ತು 3(i), (x) SC/ST P.A. Act 1989 ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment