ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಅಣ್ಣೇಮ್ಮ ತಂದೆ ದಿ: ಸಾಯಬಣ್ಣ ನಂದಿಕೂರ ವ: 21 ವರ್ಷ, ಸಾ: ಕಪನೂರರವರು ನಾನು ದಿ: 19/07/2012 ರಂದು ಮುಂಜಾನೆ 7-00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ರಾಜಕುಮಾರ ತಂದೆ ಭೀಮಶ್ಯಾ ನಂದಿಕೂರ ಇನ್ನೂ 2 ಜನರು ನಮ್ಮ ಮನೆಯ ಮುಂದೆ ಬಂದು ನನ್ನನ್ನು ಕರೆದು ನಿಮ್ಮ ಮನೆಯ ಮುಂದೆ ಕಂಕರ ಹಾಕಿದ್ದರಿಂದ ನಮ್ಮ ಮನೆಯ ಮುಂದೆ ಮಳೆಯ ನೀರು ನಿಂತಿರುತ್ತದೆ ಅಂತಾ ಅವ್ಯಾಚ್ಛವಾಗಿ ಬೈಯುತ್ತಿದ್ದಾಗ ಏಕೆ ಬೈಯುತ್ತಿದ್ದಿರಿ ಅಂತ ಕೇಳಿದಾಗ ನನಗೆ ಮತ್ತು ಈರಮ್ಮ, ದೇವಮ್ಮ ಇವರಿಗೆ ಹೊಡೆಬಡೆ ಮಾಡಿ ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 236/12 ಕಲಂ 323 324 504 506 ಸಂ/ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಚಂದ್ರಕಾಂತ ತಂದೆ ಮಲಕಾಜಪ್ಪ ರೇವೂರ ಸಾ|| ಝಳಕಿ (ಕೆ) ರವರು ನಾನು ಮತ್ತು ನಮ್ಮ ಗ್ರಾಮದ ರೇವಬಾಯಿ ಮಠಪತಿ, ಅನಿತಾಬಾಯಿ, ಬುದ್ದಮ್ಮ, ಶೇಖರ, ಬಸವರಾಜ, ಶರಣಪ್ಪ ಹಾಗೂ ಇನ್ನು 3-4 ಜನರು ಕೂಡಿಕೊಂಡು ಆಳಂದದಿಂದ ಮಧ್ಯಾಹ್ನ 3-00 ಗಂಟೆಗೆ ನಮ್ಮ ಗ್ರಾಮದ ದೀಲಿಪ ತಂದೆ ಮಡಿವಾಳಪ್ಪ ಕೊಚಿ ಇವರು ಚಲಾಯಿಸುತ್ತಿದ್ದ ಜೀಪ ನಂ. ಕೆಎ-23, ಎಮ-4209 ನೇದ್ದರಲ್ಲಿ ಕುಳಿತು ಅಮರ್ಜಾ ಕೆನಲಾ ರೋಡಿನ ಪಕ್ಕದ ರಸ್ತೆಯಿಂದ ಝಳಕಿ (ಕೆ) ಗ್ರಾಮಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಶರಣಪ್ಪ ನೀಲೂರ ಇವರ ಹೊಲದ ಹತ್ತಿರ ಜೀಪ ಚಾಲಕನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ರೇವಬಾಯಿ ಗಂಡ ಶ್ರೀಶೈಲ ಮಠಪತಿ ವ|| 40 ವರ್ಷ, ಸಾ|| ಝಳಕಿ ( ಕೆ) ಗ್ರಾಮ ಇವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅನಿತಾಬಾಯಿ, ಬುದ್ದಮ್ಮಾಮತ್ತು ಶೇಖ ಇವರಿಗೆ ಗಾಯಗಳಾಗಿರುತ್ತವೆ, ಜೀಪ ಚಾಲಕನು ಓಡಿ ಹೋಗಿರುತ್ತಾನೆ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 56/2012 ಕಲಂ 279, 337, 338, 304(ಎ) ಐಪಿಸಿ ಮತ್ತು 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
No comments:
Post a Comment