ಅಟೋ
ಕಳ್ಳತನ :
ಸುಲೇಪೇಟ
ಪೊಲೀಸ ಠಾಣೆ: ಶ್ರೀ ಕಾಳೇಶ್ವರ ತಂಧೆ ಶಿವಶಂಕರಯ್ಯಾ ಮಠಪತಿ ಸಾ|| ಕೆರೋಳ್ಳಿ ರವರು ನನ್ನ
ಆಟೋ ರಿಕ್ಷಾ ನಂ. ಕೆಎ 32, ಬಿ-0507 ನೇದ್ದನ್ನು ದಿನಾಂಕ 17/07/2012 ರಂದು ರಾತ್ರಿ 9.00 ಗಂಟೆಗೆ
ಸುಮಾರಿಗೆ ಕೆರೋಳ್ಳಿ ಗ್ರಾಮದ ನನ್ನ ಮನೆಯ
ಮುಂದಿನ ರಸ್ತೆಯ ಮೇಲೆ ನಿಲ್ಲಿಸಿ ಮಲಗಿ ಕೊಂಡಿದ್ದು. ದಿನಾಂಕ 18/07/2012 ರಂದು
ಬೆಳಿಗ್ಗೆ 6.00 ಗಂಟಗೆ ಎದ್ದು ನೋಡಲು ನನ್ನ ಆಟೋ
ರಿಕ್ಷಾ ಇರಲಿಲ್ಲಾ, ಯಾರೂ ಕಳ್ಳರು ನನ್ನ ಅಟೋ ರಿಕ್ಷಾ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 68/2012
ಕಲಂ, 379 ಐಪಿಸಿ ರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಟಾರ ಸೈಕಲ ಕಳ್ಳತನ::
ದೇವಲ ಗಾಣಗಾಪೂರ ಪೊಲೀಸ್ ಠಾಣೆ: ಶ್ರೀ ರಾಜು
ತಂದೆ ಗೋವಿಂದಪ್ಪ ಜಮಾದಾರ ಸಾ|| ದೇವಲ ಗಾಣಗಾಪೂರ
ರವರು ನನ್ನ ಮೋಟಾರ ಸೈಕಲ ನಂ: ಕೆಎ 32 ಇಬಿ-4440 ನೇದ್ದನ್ನು ದಿನಾಂಕ 16-06-2012 ರಂದು ರಾತ್ರಿ
10:00 ಗಂಟೆಗೆ ಮನೆಯ ಮುಂದೆ ನಿಲ್ಲಿಸಿ ಮಲಗಿಕೊಂಡಿದ್ದು, ದಿನಾಂಕ 17-07-2012 ರಂದು ಮುಂಜಾನೆ
6:00 ಗಂಟೆಗೆ ಎದ್ದು ನೋಡಲು ನನ್ನ ಮೋಟರ ಸೈಕಲ ಇರಲಿಲ್ಲ. ನಾವು ಎಲ್ಲಾ ಕಡೆ ಇಲ್ಲಿಯವರೆಗೆ
ಹುಡಕಾಡಿದರು ಮೋಟಾರ ಸೈಕಲ ಸಿಕ್ಕಿರುವದಿಲ್ಲ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ
ನಂಬರ:89/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment