Police Bhavan Kalaburagi

Police Bhavan Kalaburagi

Thursday, July 26, 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ಬೈಲನಂದನಗುಡಿ ತಂದೆ ಸೋಮಣ್ಣಾ ಗಡಸೆ  ಸಾ|| ಬ್ರಹ್ಮಪುರ ಗುಲಬರ್ಗಾರವರು ನಾನು ದಿನಾಂಕ 25-07-2012 ರಂದು ಸಾಯಂಕಾಲ4-00 ಗಂಟೆಗೆ ನನ್ನ ಸೈಕಲ ಮೇಲೆ ಆರ್.ಟಿ.ಓ ಕ್ರಾಸ ಕಡೆಗೆ ಹೋಗುತ್ತಿದ್ದಾಗ ಮಹೀಂದ್ರಾ ಷೋ ರೂಮ ಕ್ರಾಸ ಹತ್ತಿರ ಮೋಟಾರ ಸೈಕಲ ನಂ. ಸಿ.ಎನ್.ಕ್ಯೂ. 2526 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 40/2012 ಕಲಂ 279, 337 ಐಪಿಸಿ ಸಂಗಡ 187 ಐ,ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ :ಶ್ರೀಮತಿ  ಫರಜಾನ ಬೇಗಂ ಗಂಡ ನಿಜಾಮದ್ದೀನ್ ಪಟೇಲ್  ಸಾ ||ಎಕ್ಬಾಲ ಕಾಲೋನಿ ಎಮ್.ಎಸ್.ಕೆ. ಮಿಲ್ ಗುಲಬರ್ಗಾರವರು ನಮ್ಮ ಹೋಲ ಆಳಂದ ಗ್ರಾಮದಲ್ಲಿದ್ದು, ಸದರಿ ಜಮೀನಿಗೆ ನೀರಾವರಿಗೊಸ್ಕರ  ಹಸನ ಅನ್ಸಾರಿ  ಸಾ || ಆಳಂದ ಇವರ ಹತ್ತಿರ 2,35,000/- ರೂ. ಹಣ ನನ್ನ ಗಂಡ ಕೈಗಡ ತೆಗೆದುಕೊಂಡು ಒಂದು ವರ್ಷದ ಒಳಗಾಗಿ ಹಣ ಕೊಡುವದಾಗಿ ಮಾತಾಗಿತ್ತು. ದಿನಾಂಕ 23.07.2012 ರಂದು ಮುಂಜಾನೆ 10 ಗಂಟೆಗೆ ನಾನು ಮನೆಯಲ್ಲಿ ಇದ್ದಾಗ ಹಸನ ಅನ್ಸಾರಿ ಹಾಗೂ ಮಹ್ಮದ ಇಸ್ಮಾಯಿಲ ರವರು ಮನೆಗೆ ಬಂದು ನನ್ನ ಗಂಡನಿಗೆ ಕೇಳಿದರು, ಆಗ ನಾನು ನನ್ನ ಗಂಡ ಮನೆಯಲ್ಲಿ ಇಲ್ಲಾ ಬಂದ ಮೇಲೆ ತಿಳಿಸುತ್ತೇನೆ  ಅಂತಾ ಹೇಳಿದರೂ ಸಹ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:52/2012 ಕಲಂ.341, 504, 506  ಸಂಗಡ 34 ಐಪಿಸಿ ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: