ಹಲ್ಲೆ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ ಠಾಣೆ: ಶ್ರೀ ವಿನಾಯಕ ತಂದೆ ಮಲ್ಲಿಕಾರ್ಜುನ ಕಂಬಳಿ ವಿದ್ಯಾರ್ಥಿ ಸಾ||ವಿಶ್ವ ವಿದ್ಯಾಲಯ ವಸತಿ ಗೃಹ ಡಿ-7 ಗುಲಬರ್ಗಾ ವಿಶ್ವ ವಿದ್ಯಾಲಯ ಗುಲಬರ್ಗಾರವರು ನಾನು ದಿನಾಂಕ 04-07-2012 ರಂದು ರಾತ್ರಿ 10-15 ಗಂಟೆ ಸುಮಾರಿಗೆ ನನ್ನ ಗೆಳೆಯರು ಕೂಡಿಕೊಂಡು ಜಗದೀಶ ವೈನ ಶಾಪ ಬಾಜು ಇರುವ ಮೊಬೈಲ ರಿಚಾರ್ಜ ಮಾಡುವ ಅಂಗಡಿಯ ಮುಂದೆ ಮಾತಾಡುತ್ತಾ ನಿಂತಾಗ ಪ್ರವೀಣ ತಂದೆ ಅಂಬದಾಸ ಮತ್ತು ಹರ್ಷವರ್ಧನ ತಂದೆ ಮಲ್ಲೇಶಪ್ಪ ಬಸವರಾಜ ತಂದೆ ಸಿದ್ದಣ್ಣ ತೋಂಟಿ ಸಾ: ರಾಜಾಪೂರ ಗುಲಬರ್ಗಾ ಸಂಗಡ ಇತರರು ಕೂಡಿಕೊಂಡು ಬಂದವರೆ ಇಲ್ಲಿ ಏಕೆ ನಿಂತಿದಿರಿ ಅಂತ ಅವ್ಯಾಚ ಶಬ್ದಗಳಿಂದ ಬೈದು ಪ್ರವೀಣ ಮತ್ತು ಬಸವರಾಜ ಮತ್ತು ಇತರರು ಕೂಡಿ ನನಗೆ ಬಡಿಗೆಯಿಂದ ತೆಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ.152/2012 ಕಲಂ 341.324,504.307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ, ಜಾತಿ ನಿಂದನೆ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ:ಶ್ರೀ ಬಸವರಾಜ ತಂದೆ ಸಿದ್ದಣ್ಣ ತೊಂಟಿ ಸಾ:ಸರ್ವೋದಯ ನಗರ ಶಹಬಾದ ರೋಡ ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳೆಯರಾದ ಪ್ರವೀಣ ತಂದೆ ಅಂಬಾದಾಸ ರಾಠೋಡ ಸಾ||ಸರ್ವೋದಯ ನಗರ,ಹರ್ಷವರ್ಧನ ತಂದೆ ಮಲ್ಲೇಶಪ್ಪ ತಳವಾರ ಸಾ: ಶಕ್ತಿ ನಗರ 3 ಜನರು ಕೂಡಿಕೊಂಡು ರಾಜಾಪೂರ ಮಹಾಂತೇಶ ಇವರ ಶಿವ ಹೋಟೆಲದ ಎದುರಿನ ಬಯಲು ಜಾಗದಲ್ಲಿ ದಿನಾಂಕ:04-07-2012 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಮಾತನಾಡುತ್ತಾ ನಿಂತಾಗ ರಾಹುಲ ತಂದೆ ಅಶೋಕ ಹೊನ್ನಳ್ಳಿ ಸಂಗಡ ಅವನ ಗೆಳೆಯರು ನಮ್ಮ ಹತ್ತಿರ ಬಂದು ರಾಹುಲ ಇತನು ನನ್ನ ಗೆಳೆಯ ವಿನಾಯಕನಿಗೆ ಎಕೆ ಹೋಡೆದಿದ್ದಿರಿ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಈ ಏರಿಯಾದ ಪುಡಾರಿ ಇದ್ದಿನಿ ಅಂತಾ ಅವಾಚ್ಯವಾಗಿ ಜಾತಿ ನಿಂದನೆ ಮಾಡಿ ನನಗೆ ಮತ್ತು ನನ್ನ ಗೆಳೆಯ ಪ್ರವೀಣ ಮತ್ತು ಹರೀಶ ಇವರಿಗೆ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶ ಮೇಲಿಂದ ಠಾಣೆ ಗುನ್ನೆ ನಂ 151/2012 ಕಲಂ, 147, 148, 307, 324, 504 ಸಂಗಡ 3 (1) (10) ಎಸ.ಸಿ/ಎಸಟಿ ಪಿ.ಎ. ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment