Police Bhavan Kalaburagi

Police Bhavan Kalaburagi

Sunday, July 8, 2012

Gulbarga District Reported Crimes


ಅಶೋಕ ನಗರ ಪೊಲೀಸರ ಕಾರ್ಯಚರಣೆ ಅಂತರರಾಜ್ಯ ಕಳ್ಳನ ಬಂಧನ
 ಅಶೋಕ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಕ್ತಿ ನಗರ ಬಡಾವಣೆಯಲ್ಲಿ ಶ್ರೀ ಶಾಂತಯ್ಯಾ ತಂದೆ ಶರಣಯ್ಯಾ ಮಠಪತಿ ಸಹ ಶಿಕ್ಷಕರು ಸಾ: ಹಿರೇಮಸಳಿ ಗ್ರಾಮ ತಾ: ಇಂಡಿ ಜಿ:ಬಿಜಾಪುರ ರವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ದಿನಾಂಕ 02/03/2010 ರಂದು ಮನೆಗೆ ಬೀಗ ಹಾಕಿ ತನ್ನ ಸ್ವಗ್ರಾಮಕ್ಕೆ ಹೋಗಿದಾಗ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲ ಬೀಗ ಮುರಿದು ಒಟ್ಟು 24,800/- ರೂ ಬೇಲೆ ಬಾಳುವ ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಸಾಮಾನುಗಳು ಕಳುವಾಗಿದ್ದ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯ ಗುನ್ನೆ ನಂ. 24/2010 ಕಲಂ. 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಘಟನಾ ಸ್ಥಳಕ್ಕೆ ಬೆರಚ್ಚು ಮುದ್ರೆ ತಜ್ಞರು ಮತ್ತು ಸ್ವಾನ ದಳದವರಿಂದ ಪರಿಶೀಲನೆ ಮಾಡಿಸಿದ್ದು ಕಳೆದ 2 ವರ್ಷಗಳಿಂದ ಕಳ್ಳರ ಪತ್ತೆ ಕಾರ್ಯ ಜಾರಿಯಲ್ಲಿರುವಾಗ ಶ್ರೀ ಬಿ.ಐ. ಪಾಟೀಲ  ಡಿ.ಎಸ್.ಪಿ ಬೆರಳು ಮುದ್ರೆ ಘಟಕ ಈಶಾನ್ಯ ವಲಯ ಗುಲಬರ್ಗಾ ಹಾಗು ಅವರ ಸಿಬ್ಬಂದಿ ಘಟನಾ ಸ್ಥಳದಲ್ಲಿ ದೊರೆತ ಚಾನ್ಸ ಪ್ರಿಂಟ್ ಪತ್ತೆ ಹಚ್ಚಿ ಆರೋಪಿತನ ಬಗ್ಗೆ ಸುಳಿವು ನೀಡಿದ ಮೇರೆಗೆ ಶ್ರೀ ಟಿ.ಹೆಚ್.ಕರೀಕಲ್ ಪಿ.ಐ ಅಶೋಕ ನಗರ ಹಾಗು ಅವರ ಸಿಬ್ಬಂದಿ ತಂಡವು ಬಿಜಾಪೂರ, ಭಾಗಲಕೋಟಿ, ಹುಬ್ಬಳ್ಳಿ, ಧಾರವಾಡಕ್ಕೆ ಹೋಗಿ ಸುಮಾರು 35 ಮನೆ ಕಳ್ಳತನ ಪ್ರಕರಣಗಳಲ್ಲಿ   ಭಾಗಿಯಿರುವ ಅಂತರ ರಾಜ್ಯ ಕಳ್ಳ ಸುರೇಶ  ತಂದೆ ಯಲ್ಲಪ್ಪ ಶಿವಪೂರೆ ಸಾ: ಸೋಲ್ಲಾಪುರ ಎನ್ನುವವನಿಗೆ ದಸ್ತಗಿರಿ ಮಾಡಿಕೊಂಡು ಕಳ್ಳತನ ಮಾಡಿದ ಒಟ್ಟು 24,800/- ರೂ ಬೇಲೆ ಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದು ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇರುತ್ತದೆ. ಸದರಿ ಆರೋಪಿ ಸುರೇಶ ತಂದೆ ಯಲ್ಲಪ್ಪ ಇತನು ಸೋಲ್ಲಾಪೂರ , ಪುಣೆ, ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ  ಕಳ್ಳತನ ಮಾಡಿದ್ದು ಇತನ ಮೇಲೆ ಸುಮಾರು 35 ಪ್ರಕರಣಗಳು ಇದ್ದು ಕುಖ್ಯಾತ ಅಂತರರಾಜ್ಯ ಕಳ್ಳನಿದ್ದು ಪತ್ತೆ ಹಚ್ಚಿದ ಸಿಬ್ಬಂದಿಯವರ ಕಾರ್ಯವನ್ನು  ಶ್ರೀ ಭೂಷಣ ಬೋರಸೆ ಎ.ಎಸ್.ಪಿ (ಎ) ಉಪ ವಿಭಾಗ ಗುಲಬರ್ಗಾ ಇವರು ಶ್ಲಾಘಿಸಿರುತ್ತಾರೆ.  
ವರದಕ್ಷಣಿ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀ ಸೈಯದ ಅಜರ ತಂದೆ ಸೈಯದ ಸಲೀಂ ವ:23 ವರ್ಷ ಉ: ವಿಡಿಯೋ ಗ್ರಾಫರ ಸಾ: ಶಾಂತಿ ನಗರ ಗುಲಬರ್ಗಾ ಇವರು ದಿನಾಂಕ: 17.02.2012 ರಂದು ತನ್ನ ಅಕ್ಕಳಾದ ಸೈಯದ ಪರವೀನ ಇವಳಿಗೆ ಎಮ್.ಬಿ.ನಗರದ ಸಿರಾಜೋದ್ದಿನ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ವೇಳೆಗೆ ಮಾತು ಕತೆ ಆಡಿದ ಪ್ರಕಾರ ವರನಿಗೆ ಒಂದು ಹೊಂಡಾ ಶೈನ ಗಾಡಿ, 1 1/2 ತೊಲೆ ಬಂಗಾರ , 21 ಸಾವಿರ ರೂಪಾಯಿಗಳು  ಹಾಗೂ 35 ಸಾವಿರ ರೂಪಾಯಿಗಳೂ ದಹೇಜ ಕೊಟ್ಟಿದ್ದು ಇರುತ್ತದೆ. ಮದುವೆ ದಿನವೇ ತನ್ನ ಅಕ್ಕನಿಗೆ ಗಂಡನ ಮನೆಯವರಾದನಾದಿಯರು, ಅತ್ತೆ, ಮಾವ ಗಂಡ ಕಿರುಕುಳ ಕೊಡಲು ಪ್ರಾರಂಭಿಸಿದ್ದು ಆಕೆಯ ಗಂಡನಿಗೆ ವಿನಾ: ಕಾರಣ ಇಲ್ಲ ಸಲ್ಲದ್ದನ್ನು ಹೇಳಿ ಮಾನಸಿಕವಾಗಿ ದಹಿಕವಾಗಿ ಹಿಂಸೆ ಕೊಡುತ್ತಾ ಬಂದಿದ್ದು ಈ ವಷಯ ತವರು ಮನೆಯವರಿಗೆ ಹೇಳಬಾರದು ಅಂತಾ ಅಂಜಿಸಿ ದಿನಾಂಕ:03.07.2012 ರಂದು ಹಬ್ಬಕ್ಕೆಂದು ನಮ್ಮ ಭಾವ ನಮ್ಮ ಮನೆಗೆ ತಂದು ಬಿಟ್ಟಿರುತ್ತಾನೆ.ನಮ್ಮ ಮನೆಗೆ ಬಂದ ಅಕ್ಕ ತನಗೆ ತನ್ನ ಗಂಡ, ಅತ್ತೆ, ಮಾವ, ನಾದಿನಿಯರು ಎಲ್ಲರು ಸೇರಿ ಮಾನಸಿಕ ಹಾಗೈ ದೈಹಿಕ ಹಿಂಸೆ ನೀಡುತ್ತಾರೆ ನಾನು ಗಂಡನ ಮನೆಗೆ ಹೋಗುವುದಿಲ್ಲಾ ಅಂತಾ ಹೇಳಿದ್ದಳು. ಆಕೆಯ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟಿದ್ದರಿಂದಲೇ ಅವನ ಹಿಂಸೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆ ಗೊಂಡು ನನ್ನ ಅಕ್ಕ ದಿನಾಂಕ:06.07.2012 ರಂದು ತನ್ನ ತಾಯಿ ಮತ್ತು ತಂಗಿ ಮಾರ್ಕೇಟಿಗೆ ಹೋದ ಸಮಯದಲ್ಲಿ 5-00 ಪಿ.ಎಮ್.ದ ಸುಮಾರಿಗೆ  ನಮ್ಮ ಮನೆಯ   ಮಹಡಿ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುತ್ತಾಳೆ. ಅಂತಾ ಹೇಳಿಕೆ ಫಿರ್ಯಾದು ಮೇಲಿಂದ ಠಾಣಾ ಗುನ್ನೆ ನಂ.53/12 ಕಲಂ. 498(ಎ), 306, ಸಂ.149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ :
ಗ್ರಾಮೀಣ ಠಾಣೆ :ಕುಮಾರಿ ಆನಂದಾ ತಂದೆ ಚಂದ್ರಕಾಂತ ಶ್ರೀಖಂಡಿ ವ:58 ವರ್ಷ ಉ: ಅಧೀಕ್ಷಕರು ಸೆಂಟ್ರಲ್ ಎಕ್ಸಾಯಿಜ್ ಗುಲಬರ್ಗಾ  ಉಪವಿಭಾಗ ಇವರು ದಿನಾಂಕ  07-07-12 ರಂದು ತಾನು ವಾಸವಾಗಿರುವ ರಾಮನಗರ ಬಡಾವಣೆಯಲ್ಲಿರುವ ಸೆಂಟ್ರಲ್ ಎಕ್ಸಾಯಿಜ್ ವಸತಿ ಗೃಹ  ಟೈಪ 4 ರಲ್ಲಿರುವ ಬೆಡ ರೂಮಿನಲ್ಲಿ 20 ಗ್ರಾಂ ಬಂಗಾರದ ಬಳೆಗಳು ಅ:ಕಿ: 60,000/-ರೂ. 20 ಗ್ರಾಂ ಬಂಗಾರ ಚೈನ ಅ:ಕಿ: 60,000/-ರೂ 5 ಗ್ರಾಂ ಬಂಗಾರ ಕಿವಿ ಓಲೆ ಅ:ಕಿ: 10,000/-ರೂ. 5ಗ್ರಾಂ ಬಂಗಾರ ಉಂಗುರು ಬಿಳಿ ಹರಳು ಇದ್ದಿದ್ದು ಅ:ಕಿ: 10,000/-ರೂ ಒಟ್ಟು 1,40,000/- ರೂ. ಸಾಮಾನುಗಳು ಇಟ್ಟಿದ್ದು ಫಿರ್ಯಾದಿ ಮನೆಯಲ್ಲಿ ಮತ್ತು ಆಫೀಸನಲ್ಲಿ ಕೆಲಸ ಮಾಡುತ್ತಿದ್ದ ಸವಿತಾ ಕೊತ್ತರಂಬಿ ಮನೆಗೆ ಬಂದಿದ್ದು, ಅವಳು ಬೆಳಿಗ್ಗೆ ತನ್ನ ತಂದೆಗೆ ಆರಾಮ ಇರುವುದಿಲ್ಲಾ ಪೂನಾ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದು, ಅವಳು ಹೋದ 10 ನಿಮಿಷದಲ್ಲಿ ಬೆಡ್  ರೂಮಿನಲ್ಲಿ ಹೋಗಿ ಬಂಗಾರದ ಆಭರಣಗಳು ನೋಡಲಾಗಿ  ಇರಲಿಲ್ಲಾ ಸದರಿ ಆಭರಣಗಳು ಸವಿತಾ ಇವಳೇ ಕಳ್ಳತನ ಮಾಡಿರುತ್ತಾಳೆ ಎಂದು ಖಚಿತವಾಗಿರುತ್ತದೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 225/12 ಕಲಂ 381 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈ ಕೊಳ್ಳಲಾಗಿದೆ.

No comments: