ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 25-08-2012
ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 206/12 ಕಲಂ 279,337. ಐ.ಪಿ.ಸಿ. ಜೊತೆ 187 ಐ.ಎಮ.ವಿ.ಎಕ್ಟ :-
ದಿನಾಂಕ 24/08/2012 ರಂದು 13:00 ಗಂಟೆಗೆ ಫಿರ್ಯಾದಿ ಮೆಹತಾಬ ತಂದೆ ಮೈನೊದ್ದಿನ್ ಫಕೀರ್ ಸಾ: ನಿರ್ಣಾ ರವರು ಬೊಮ್ಮಗೊಂಡೇಶ್ವರ ವೃತ್ತದ ಕಡೆಯಿಂದ ಮೋಟಾರ ಸೈಕಲ ನಂ ಕೆಎ38ಎಲ್646 ನೇದ್ದರ ಮೇಲೆ ತಾಜ್ ಬಿರ್ಯಾನಿ ಹೊಟೇಲಗೆ ತನ್ನ ಸೈಡಿನಿಂದ ಹೊಗುತ್ತಿರುವಾಗ ಅದೆ ಸಮಯಕ್ಕೆ ಚಿದ್ರಿ ಗ್ರಾಮದ ಕಡೆಯಿಂದ ಕಾರ ನಂ ಎಮ್.ಹೆಚ.05 ಎ7281 ನೇದ್ದರ ಚಾಲಕನಾದ ರಾಮನಾಥ ಇತನ್ನು ಕಾರನ್ನು ವೇಗವಾಗಿ ದುಡಕಿನಿಂದ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬೀದರ ಗಾಂಧಿಗಂಜ ವಾಟರ ಟ್ಯಾಂಕ ಹತ್ತಿರ ಇರುವ ಡಿವೈಡರ ಗ್ಯಾಪ ಹತ್ತಿರ ಒಮ್ಮೆಲೆ ತಿರಿಗಿಸಿಕೊಂಡು ಫಿರ್ಯಾದಿಯ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಾಗತ ಸಂಭವಿಸಿದರಿಂದ ಫಿರ್ಯಾದಿಗೆ ಸಾದಾಗಾಯ ಪಡಿಸಿ ಕಾರನ್ನು ಅಪಘಾತ ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ಫಿರ್ಯಾದಿಯ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲಿಸ ಠಾಣೆ ಗುನ್ನೆ ನಂ. 126/12 ಕಲಂ 379 ಐಪಿಸಿ :-
ದಿನಾಂಕ 24/08/2012 ರಂದು 1815 ಗಂಟೆಗೆ ಫಿರ್ಯಾದಿ ಶ್ರೀ ಸುನೀಲ ತಂದೆ ದೇವಿದಾಸ ಬೆಲ್ಲಾಳೆ ವಯ 26 ವರ್ಷ ಜಾತಿ ಮರಾಠಾ ಉ: ಕಂಪ್ಯೂಟರ ಆಪರೇಟರ್ ಸಾ: ಗೋಧಿಹಿಪ್ಪಗರ್ಾ ತಾ: ಭಾಲ್ಕಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸರಾಂಶವೆನೆಂದರೆ ದಿನಾಂಕ 24/08/2012 ರಂದು 1225 ಗಂಟೆಗೆ ಭಾಲ್ಕಿ ಸರಕಾರಿ ಆಸ್ಪತ್ರೆಗೆ ತನ್ನ ಮೋಟಾರ ಸೈಕಲ ನಂ ಕೆ.ಎ-39 ಜೆ-5285 ನೆದರ ಮೇಲೆ ಬಂದು ಸದರಿ ಮೋಟಾರ ಸೈಕಲ ಆಸ್ಪತ್ರೆಯ ಹೋರಗಡೆ ನಿಲ್ಲಿಸಿ ಅದರ ಸೈಡ ಬ್ಯಗದಲ್ಲಿ ಲ್ಯಾಪಟಾಪ ಇಟ್ಟು ಆಸ್ಪತ್ರೆಯ ಒಳಗಡೆ ಹೋಗಿ ತನ್ನ ಹೆಂಡತಿಯ ಹೇರಿಗೆಯಾಗಿದ್ದು ನೋಡಲು ಹೋಗಿ ಮರಳಿ ಬಂದು ನೋಡಲು ಸದರಿ ಮೋಟಾರ ಸೈಕಲ ಸೈಡ ಬ್ಯಾಗದಲ್ಲಿಟ್ಟ ಡೆಲ್ ಕಂಪನಿಯ ಲ್ಯಾಪಟಾಪ ಅ.ಕಿ. 35,000/- ರೂ ಬೆಲೆ ಉಳ್ಳದು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ. ಸದರಿ ಲ್ಯಾಪ ಟಾಪ್ ಜೋಳದಾಬಕಾ ಗ್ರಾಮ ಪಂಚಾಯತಕ್ಕೆ ಸರಕಾರದಿಂದ ಮಂಜೂರುಯಾಗಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಔರಾದ ಪೊಲೀಸ ಠಾಣೆ ಗುನ್ನೆ ನಂ. 75/12 ಕಲಂ 279, 338 ಐ.ಪಿ.ಸಿ ಜೋತೆ 187 ಐ,ಎಂ.ವಿ ಆಕ್ಟ್ :-
ದಿನಾಂಕ: 24-08-2012 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ಫಿರ್ಯಾದಿ ಶಿರೋಮಣಿ ತಂದೆ ಹಣಮಂತ ಮೇತ್ರೆ ವಯ್:32 ಸಾ// ವಡಗಾಂವ ಸದ್ಯ ಹಮಾಲಿ ಕಾಲೋನಿ ಔರಾದ ರವರ ಮಗ ಜಡ್ಸನ್ ಇತನು ಮಾರ್ಕೆೇಟನಿಂದ ಮನೆಗೆ ಬರುತ್ತಿದ್ದಾಗ ಔರಾದ ಪಟ್ಟಣದ ನವಚೇತನ ಶಾಲೆ ಹತ್ತಿರ ಹಿಂದಿನಿಂದ ಒಂದು ಜೀಪ್ ನಂ. ಎಮ್.ಎಚ್.24-ಸಿ-ನೇದರ ಚಾಲಕ ತನ್ನ ಜೀಪ್ ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಫಿರ್ಯಾದಿಯ ಮಗನಿಗೆ ಡಿಕ್ಕಿ ಮಾಡಿ ಭಾರಿ ರಕ್ತಗಾಗಯ ಪಡಿಸಿರುತ್ತಾನೆ. ಆದ್ದರಿಂದ ಆತನ ವಿರುದ್ದ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಔರಾದ ಪೊಲೀಸ ಠಾಣೆ ಗುನ್ನೆ ನಂ. 74/2012 ಕಲಂ. 379 ಐ.ಪಿ.ಸಿ :-
ದಿ: 24-08-2012 ರಂದು ಫಿರ್ಯಾದಿ ಶ್ರೀ. ಉಮೇಶ ತಂದೆ ಸನ್ಮೂಖಪ್ಪಾ ತೆಗಂಪೂರೆ ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿ: 22-08-2012 ರಂದು ಟೀಚರ್ ಕಾಲೋನಿಯಲ್ಲಿ ತಮ್ಮ ಮನೆಯ ಹೊರಗಡೆ ಹಿರೋ ಹೊಂಡಾ ಪ್ಯಾಷನ್ ಮೋ.ಸೈಕಲ್ ನಂ. ಕೆ.ಎ-38-ಕೆ-411 ನಿಲ್ಲಿಸಿದಾಗ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ ಫಿರ್ಯಾದಿ ರವರು ಎಲ್ಲಾ ಕಡೆ ಹುಡುಕಾಡಿದರು ಮೋ.ಸೈಕಲ್ ಸಿಗದೇ ಇರುವುದರಿಂದ ದಿ: 24-08-2012 ರಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಗೋಳ್ಳಲಾಗಿದೆ.
ಕಮಲನಗರ ಪೊಲೀಸ್ ಠಾಣೆ ಗುನ್ನೆ ನಂ. 70/12 ಕಲ. 32, 34 ಕೆ. ಇ. ಕಾಯ್ದೆ ;-
ದಿನಾಂಕ: 24-08-2012 ರಂದು ಆರೋಪಿತರಾದ ಪ್ರಕಾಶ ತಂದೆ ಪಾಂಡುರಂಗ ಮತ್ತು ನಾಗೇಂದ್ರ ತಂದೆ ವೈಜಿನಾಥರಾವ ಹಮೀಲಪುರೆ ರವರುಗಳು ಖತಗಾಂವ ಕ್ರಾಸ್ ಹತ್ತಿರ ಗೂಡ್ಸ್ ಮ್ಯಾಜಿಕ್ ವಾಹನ ನಂ. ಎಮ್.ಹೆಚ್.24-ಜೆ-7023 ನೇದ್ದರಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡಲು ತೆಗೆದುಕೊಂಡು ಹೋಗುವಾಗ ಪಿಎಸ್ಐ ಕಮಲನಗರ ಮತ್ತು ಎನ್.ಎಮ್. ಪಾಟೀಲ್ ಪಿ.ಐ. ಅಪರಾಧ ಪತ್ತೆದಳ ಬೀದರ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಅವರನ್ನು ದಸ್ತಗಿರಿ ಮಾಡಿ ಅವರ ವಶದಿಂದ ಒಟ್ಟು 16 ಕಾಟನ್ 180 ಎಮ್.ಎಲ್. ಯು.ಎಸ್. ವಿಸ್ಕಿ ಬಾಟಲಗಳು ಅಂ.ಕಿ. 33,323/- ರೂ. ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment