ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 28-08-2012
ಜನವಾಡಾ ಪೊಲೀಸ್
ಠಾಣೆ ಗುನ್ನೆ ನಂ. 96/12 ಕಲಂ 279, 338 ಜೊತೆ 187 ಐಎಎಮ್ ವಿ ಕಾಯ್ದೆ :-
ದಿನಾಂಕ: 27-08-2012 ರಂದು
0930 ಗಂಟೆಯ ಸುಮಾರಿಗೆ ಫಿರ್ಯಾದಿ ನಾಗಶೇಟ್ಟಿ ತಂದೆ ಗುರಪ್ಪಾ ಹುಲಸೂರೆ ರವರು ತನ್ನ ಮೋಟಾರ್
ಸೈಕಲ್ ನಂ. ಕೆಎ-39-ಎಚ್-6800 ನೇದ್ದರ ಮೇಲೆ ಬೀದರ ದಿಂದ ಭಾಲ್ಕಿಗೆ ಹೋಗುತ್ತಿದ್ದಾಗ
ಪುಣ್ಯಾಶ್ರಮದ ಸಮೀಪ ಇರುವ ದರ್ಗಾದ ಹತ್ತಿರ ಎದುರುಗಡೆ ಕಾರ್ ನಂ. ಎಪಿ-13-ಪಿ-2363 ನೇದ್ದರ
ಚಾಲಕನು ತನ್ನ ವಾಹನ ಅತೀ ವೇಗ ಹಾಗೂ ನಿಷ್ಕಾಳಜಿತನದಿಮದ ಚಲಾಯಿಸಿಕೊಂಡು ರಾಂಗ್ ಸೈಡ್ ದಿಂದ ಬಂದು
ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿದ ಪ್ರಯುಕ್ತ ಫಿರ್ಯಾದಿಗೆ ಭಾರಿ ರಕ್ತಗಾಯವಾಗಿದ್ದರಿಂದ
ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ
ಪೊಲೀಸ್ ಠಾಣೆ ಗುನ್ನೆ ನಂ. 128/12 ಕಲಂ 504, 307 ಜೊತೆ 34 ಐಪಿಸಿ :-
ದಿನಾಂಕ : 27/08/2012 ರಂದು
1645 ಗಂಟೆಗೆ ಫಿರ್ಯಾದಿ ನಾಗೇಶ ತಂದೆ ಬಾಬುರಾವ ಸಾ : ದಾಡಗಿ ರವರು ಭಾಲ್ಕಿ ಗಣೇಶ ನಗರದಲ್ಲಿರುವ ವಿದ್ಯಾ ಭಾರತಿ
ಪಬ್ಲೀಕ ಸ್ಕೂಲದಲ್ಲಿನ ಮಕ್ಕಳನ್ನು ಶಾಲೆಯ ವಾಹನದಲ್ಲಿ ಬಿಡಲು ಹಳೆ ಭಾಲ್ಕಿಯಲ್ಲಿ ಹೋದಾಗ ಹಿರಮೇಠ
ಆಚೆ ಕ್ಯಕಾಡಿ ಗಲ್ಲಿ ಕ್ರಾಸ ಹತ್ತಿರ 1) ಕನ್ವರ ತಂದೆ ಸಾಗರ ಕಾಂಬ್ಳೆ 2) ಜಾಫರ ತಂದೆ
ಖಾಜಾಮಿಯ್ಯಾ ಇಬ್ಬರು ಸಾ : ಭಾಲ್ಕಿ ರವರು ನಡು ರಸ್ತೆ ಮೇಲೆ ನಿಂತಿದ್ದರಿಂದ ಫಿರ್ಯಾದಿಯು ತನ್ನ
ವಾಹನ ನಿಲ್ಲಿಸಿ ಹಾರ್ನ ಹೊಡೆಯುತ್ತಿರುವಾಗ ಅವರು ಫಿರ್ಯಾದಿಯ ಹತ್ತೀರ ಬಂದು ಫಿರ್ಯಾದಿಗೆ ವಾಹನದಿಂದ ಕೆಳಗೆ ಇಳಿಸಿ “ ಸೂಳೆ ಮಗನೆ ನಾವು ರಸ್ತೆಯ ಮೇಲೆ ನಿಂತಿರುವದನ್ನು
ಕಾಣಿಸುತ್ತಿಲ್ಲವೆ ನಾವು ಈ ಗಲ್ಲಿಯ ದಾದಾ ಇದ್ದೇವೆ ನಾವು ನಿಂತಾಗ ಹಾರ್ನ ಹೊಡೆಯುತ್ತಿಯಾ ಎಂದು ಅವಾಚ್ಯವಾಗಿ
ಬೈದು ಕನ್ವರ ಈತನು ತನ್ನ ಬೆನ್ನಲ್ಲಿ ಇದ್ದ ಕಮ್ಮಕತ್ತಿಯನ್ನು ತೆಗೆದುಕೊಂಡು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿಯ ಕುತ್ತಿಗೆ ಮೇಲೆ
ಹೊಡೆಯುತ್ತಿರುವಾಗ ಫಿರ್ಯಾದಿಯು ತನ್ನ ಬಲಗೈ
ಮುಂದೆ ಮಾಡೀದಾಗ ಕಮ್ಮಕತ್ತಿ ಫಿರ್ಯಾದಿಯ ಬಲಗೈ ಮುಂಗೈಗೆ ಹತ್ತಿ ಭಾರಿ ರಕ್ತಗಾಯವಾಗಿರುತ್ತದೆ.
ಹಾಗೂ ಕನ್ವರ ಇತನು ಅದೇ ಕಮ್ಮಕತ್ತಿಯಿಂದ ಫಿರ್ಯಾದಿಯಗಟಾಯಿ ಮೇಲೆ ಹೊಡೆದು
ರಕ್ತಗಾಯಗೊಳಿಸಿರುತ್ತಾನೆ. ನಂತರ ಜಾಫರ ತಂದೆ ಖಾಜಾಮಿಯಾ ಇತನು ತನ್ನ ಬೆನ್ನು ಹಿಂದೆ ಇಟ್ಟುಕೊಂಡ
ಕಮ್ಮಕತ್ತಿ ಹೊರಗೆ ತೆಗೆದು ಕೊಲೆ ಮಾಡು ಉದ್ದೇಶದಿಂದ
ಫಿರ್ಯಾದಿಯ ಬಲ ಕಿವಿಯ ಮೇಲೆ ಹೊಡೆದರಿಂದ ಕಿವಿ ಹರಿದು ಹೋಗಿರುತ್ತದೆ. ಮತ್ತು ಜಾಫರ
ಇತನು ಅದೆ ಕಮ್ಮಕತ್ತಿಯಿಂದ ಕುತ್ತಿಗೆ
ಎಡಭಾಗದಲ್ಲಿ ಹೊಡೆಯುತ್ತಿರುವಾಗ ಫಿರ್ಯಾದಿಯು
ಎಡಗೈ ಮುಂದೆ ಮಾಡೀದಾಗ ಎಡಗೈ ಮುಂಗೈ ಮಲೆ ರಕ್ತಗಾಯವಾಗಿರುತ್ತದೆ. ಅಂತಾ ನೀಡಿದ ದೂರಿನ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. .
ಹಳ್ಳಿಖೇಡ
ಪೊಲೀಸ್ ಠಾಣೆ ಗುನ್ನೆ ನಂ. 119/12 ಕಲಂ 341, 504, 323, 48 ಐಪಿಸಿ:-
ದಿನಾಂಕ 27/08/2012 ರಂದು
ಮದ್ಯಾಹ್ನ 14:20 ಗಂಟೆಗೆ ಗ್ರಾಮ ಪಂಚಾಯತ ಕಾರ್ಯಲಯ ಹಳ್ಳಿಖೇಡ (ಬಿ) ನೇದ್ದರಲ್ಲಿ ಸಾಮಾನ್ಯ ಸಭೆ
ನಡೆಯುತ್ತಿದ್ದಾಗ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅಧಿಕಾರಿಗಳು. ಗ್ರಾಮ ಪಂಚಾಯತನ ಎಲ್ಲಾ
ಸದಸ್ಯರು ಅಲ್ಲಿ ಹಾಜರಿದ್ದಾಗ ಆರೋಪಿ ನಾಗರಾಜ ತಂದೆ ಮಲ್ಲಪ್ಪಾ ಖರ್ಗೆ ಹರಿಜನ ಸಾ: ಭೀಮನಗರ
ಹಳ್ಳಿಖೇಡ (ಬಿ) ಇತನು ಗ್ರಾಮ ಪಂಚಾಯತ ಒಳಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು ನೀವು ಏನು
ಸಭೆ ನಡೆಸುತ್ತಿದ್ದಿರಿ ಅಂತಾ ಅಂದು ಆವಾಗ ಗ್ರಾಮ ಪಂಚಾಯತ ಸದಸ್ಯರಾದ ವಿನಾಯಕ ದಾಂಡೇಕರ, ಬಂಡೆಪ್ಪಾ ಬಾವಗಿ ಇವರು ಬುದ್ದಿವಾದ ಹೇಳಲು ಬಂದಾಗ ಅವರಿಗೆ
ಕೈಗಳಿಂದ ಹೊಡೆದಿರುತ್ತಾನೆ. ಅಲ್ಲದೆ ಸಭೆಗೆ ಅಡೆತಡೆಯನ್ನುಂಟು ಮಾಡಿರುತ್ತಾನೆ. ಅಂತಾ ಫಿರ್ಯಾದಿ
ಗಣಪತಿ ತಂದೆ ಮಾರುತ್ತೆಪ್ಪಾ ಮಲ್ಲೇಶಿ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.
No comments:
Post a Comment