Police Bhavan Kalaburagi

Police Bhavan Kalaburagi

Friday, August 31, 2012

BIDAR DISTRICT DAILY CRIME UPDATE 31-08-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 31-08-2012

ಹುಮನಾಬಾದ ಪೊಲೀಸ್ ಠಾಣೆ ಗುನ್ನೆ ನಂ. 457. 380 ಐಪಿಸಿ :-

ದಿನಾಂಕ 30/08/2012 ರಂದು ಬೆಳ್ಳಿಗ್ಗೆ 11:00 ಗಂಟೆಗೆ ಫಿರ್ಯಾಧಿ ಶ್ರೀ ಅರುಣ್ ಕುಮಾರ ತಂದೆ ಬಾಬುರಾವ ಪಾಟೀಲ್ ವಯ 40 ವರ್ಷ ಜಾತಿ ಮರಾಠಾ ಉ-ಕಾರ್ಯದರ್ಶಿ ಪಿ.ಕೆ.ಪಿ.ಎಸ್. ಬ್ಯಾಂಕ ಚಂದನಹಳ್ಳಿ ಸಾ-ನಂದಗಾಂವ ಸದ್ಯ ಹುಮನಾಬಾದ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಸಾರಾಂಶವೆನೆಂದರೆ ದಿನಾಂಕ 29/08/2012 ರಂದು ಸಾಯಂಕಾಲ 05:30 ಗಂಟೆಗೆ ಫಿಯರ್ಾಧಿ ಹಾಗು ಬ್ಯಾಂಕಿನ ಸಿಬ್ಬಂದಿಯವರು ಚಂದನಹಳ್ಳಿ ಗ್ರಾಮದ ಪಿ.ಕೆ.ಪಿ.ಎಸ್. ಬ್ಯಾಂಕಿಗೆ ಕೀಲಿ ಹಾಕಿ ಮನೆಗೆ ಹೋಗಿ ದಿನಾಂಕ 30/08/2012 ರಂದು ಬೆಳ್ಳಿಗ್ಗೆ 0630 ಗಂಟೆಗೆ ಬ್ಯಾಂಕಿನ ಪಿವನ್ ಮೈನೋದ್ದಿನ ಇವನು ಕಸ ಗೂಡಿಸಲು ಬ್ಯಾಂಕಿನ ಬೀಗ ತೆರೆದು ಶಟರ್ ಎತ್ತಿ ಒಳಗೆ ನೋಡಲು ಯಾರೋ ಕಳ್ಳರು ಬ್ಯಾಂಕಿನ ಹಿಂದಿನ ಕಿಟಕಿ ಮುರಿದು ಒಳಗೆ ಪ್ರವೇಶ ಮಾಡಿ ಬ್ಯಾಂಕಿನಲ್ಲಿ ಇಟ್ಟಿದ್ದ ಸಾಮಾನುಗಳು ಚಲ್ಲಾಪಿಲ್ಲಿ ಮಾಡಿದ್ದು ಸದರಿ ವಿಷಯವನ್ನು ಫೋನ್ ಮುಖಾಂತರ ಫಿಯರ್ಾಧಿಗೆ ತಿಳಿಸಿದ ಮೇರೆಗೆ ಫಿಯರ್ಾಧಿಯು ಬ್ಯಾಂಕಿಗೆ ಬಂದು ನೋಡಲು ಯಾರೋ ಅಪರಿಚಿತ ಕಳ್ಳರು ಬ್ಯಾಂಕಿನ ಹಿಂದಿನ ಕಿಟಕಿಯಿಂದ ಒಳಗೆ ಬಂದು ಕಟ್ಟಿಗೆಯ ಕೌಂಟರ್ದಲ್ಲಿ ಒಂದು ಕಬ್ಬಿಣದ ಪೆಟ್ಟಿಗೆಯಲ್ಲಿ ಇಟ್ಟಿದ್ದ ಅಂದಾಜು 20,000/- ರೂಪಾಯಿ ಪೆಟ್ಟಿಗೆಯಲ್ಲಿಟ್ಟಿದ್ದ ನಗದು ಹಣ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬೀದರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ. 70/12 ಕಲಂ 279, 337 ಐಪಿಸಿ :-

ದಿನಾಂಕ: 30/08/2012 ರಂದು ಫಿರ್ಯಾಧಿ ಫಿಯಾಜ ಶಹಾ ತಂದೆ ಮೇಹತಾಬ ಶಹಾರವರು ತಮ್ಮ್ಮ ಐಷರ್ ಟೆಂಪೋ ನೇದ್ದರಲ್ಲಿ ಹ್ಶೆದ್ರಾಬಾದಗೆ ಮಾಲು ತುಂಬಿಕೊಂಡು ಹೋಗಿ, ಖಾಲಿ ಮಾಡಿ ಮರಳಿ ಬರುವಾಗ ಬೀದರ ಕಮಠಾಣಾ ರಸ್ತೆ ಮೇಲೆ ಅಮಲಾಪೂರ ಕ್ರಾಸ್ ಹತ್ತಿರ ಟೆಂಪೊ ಚಾಲಕನು ಅತೀವೇಗ ಹಾಗು ಅಜಾಗೂರಕತೆಯಿಂದ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ಒಳಗೆ ಕೂಳಿತ ಚಾಲಕನಿಗೆ ಮತ್ತು ಮಾಲಿಕನ ಮಗನಿಗೆ ಸಾದಾ ರಕ್ತಗಾಯಗಳಾಗಿರುತ್ತವೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಸಂತಪೂರ ಪೊಲೀಸ ಠಾಣೆ ಗುನ್ನೆ ನಂ. 62/2012 ಕಲಂ. 279,337,ಐಪಿಸಿ ಜೋತೆ 187 ಐ ಎಂ ವಿ ಎಕ್ಟ :-

ದಿನಾಂಕ 30/08/2012 ರಂದು 1945 ಗಂಟೆಗೆ ಫಿರ್ಯಾಧಿ ಶ್ರೀ ಕಲ್ಲಪ್ಪಾ ತಂದೆ ಝರಣಪ್ಪಾ ಶಂಕರೆ ವಯ 35 ವರ್ಷ ಜಾ ಲಿಂಗಾಯತ ಉ, ಒಕ್ಕಲುತನ ಸಾ, ಜೋಜನಾ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 30/08/2012 ರಂದು ಸಾಯಂಕಾಲ5.30 ಗಂಟೆ ಸುಮಾರಿಗೆ ಫಿರ್ಯಾಧಿಹಾಗು ಆತನ ತಂದೆ ಹೆಸರು ರಾಶಿ ಮಾಡಿಕೊಂಡು ಮನೆ ಕಡೆಗೆ ಬರುತ್ತಿರುವಾಗ ಜಮಗಿ ಸಂತಪೂರ ರೋಡಿನ ಮೆಲೆ ವಡಗಾಂವ ಕಡೆಯಿಂದ ಮೋಟಾರ ಸೈಕಲ ನಂ ಎಮ ಎಚ12/ಸಿ.ಜಿ2953 ನೆದ್ದರ ಚಾಲಕ ತನ್ನ ಮೋಟಾರ ಸೈಕಲ ಅತಿ ವೇಗ ಹಾಗು ನಿಷ್ಕಾಳಜಿಯಿಂದ ಮಾನವ ಜೀವಕ್ಕೆ ಅಪಾಯವಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾಧಿತಂದೆ ಝರಣಪ್ಪಾ ರವರಿಗೆ ಡಿಕ್ಕಿ ಮಾಡಿ ತನ್ನ ಮೋಟಾರ ಸೈಕಲ ಬಿಟ್ಟು ಓಡಿಹೊಗಿದ್ದು ಝರಣಪ್ಪಾ ಇತನಿಗೆ ತಲೆಗೆ ರಕ್ತಗಾಯವಾಗಿರುತ್ತದೆ ಅಂತಾ ಕೋಟ್ಟ ಫೀಯರ್ಾದಿಯ ಹೇಳಿಕೆ ಸಾರಾಂಶದ ಮೆರೆಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ. ಗುನ್ನೆ ನಂ 210/12. ಕಲಂ 279,338. ಐ.ಪಿ.ಸಿ. ಜೊತೆ 187 ಐ,ಎಮ,ವಿ,ಎಕ್ಟ :-

ದಿನಾಂಕ 30/08/2012 ರಂದು 19:30 ಗಂಟೆಗೆ ಫಿರ್ಯಾಧಿ ವಿಠ್ಠಲ ತಂದೆ ಧರ್ಮಣ್ಣಾ ಕೊಳ್ಳಿ 50 ವರ್ಷ ಉ: ಕೂಲಿಕೇಲಸ ಸಾ/ ಜನವಾಡ ತಾ/ಜಿ/ ಬೀದರ ರವರು ಹಾರೂರಗೇರಿ ಕಮಾನ ಹತಿರದಲ್ಲಿ ಇರುವ ಲಾರಿ ಮೇಕ್ಯಾನಿಕ ಅಂಗಡಿ ಕಡೆಯಿಂದ ಹಾರೂರಗೇರಿ ಕಮಾನ ಕಡೆಗೆ ನಡೆದುಕೊಂಡು ಹೊಗುತ್ತಿರುವಾಗ ಬೀದರ ಬೊಮ್ಮಗೊಂಡೇಶ್ವರ ವೃತ್ತದ ಕಡೆಯಿಂದ ಒಬ್ಬ ಅಪರಿಚಿತ ಆಟೋರಿಕ್ಷಾ ಚಾಲಕನು ಆಟೋವನ್ನು ವೇಗವಾಗಿ ದುಡಕಿನಿಂದ ಹಾಗೂ ನಿಷ್ಕಾಳಜಿತನದಿಂದ ಇತರರ ಜಿವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿಯರ್ಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಬಲಕಾಲಿ ಮೊಳಕಾಲು ಕೇಳಗೆ ಎಲಬು ಮುರಿದು ಭಾರಿಗಾಯ ಪಡಿಸಿ ಆರೋಪಿಯು ಅಪಘಾತ ಸ್ಥಳದಿಂದ ಆಟೋ ಸಮೇತ ಓಡಿ ಹೊಗಿರುತ್ತಾನೆ ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮಾರ್ಕೇಟ ಪೊಲೀಸ ಠಾಣೆ ಬೀದರ. 112/2012 ಕಲಂ. 465,420 ಐಪಿಸಿ:-

ಶ್ರೀ ಶಂಕರ ತಂದೆ ಚಂದ್ರಪ್ಪಾ ವಯ 75  ವರ್ಷ ಉ;ನಿವೃತ್ತ ಸಕರಾರಿ ನೌಕರರು ರೇಲ್ವೆ ಇಲಾಖೆ ಸಾ:ಈಡಗೇರಿ ರವರು ರೈಲ್ವೆ ಇಲಾಖೆಯಲ್ಲಿ ನಿವೃತ್ತ ನೌಕರರಿದ್ದು ಅವರು ತಮ್ಮ ಪಿಂಚಣಿ ಪಡೆದುಕೊಳ್ಳಲು ಬೀದರ ಮುಖ್ಯ ಅಂಚೆ ಕಛೇರಿಯಲ್ಲಿ ಒಂದು ಅರ್.ಪಿ. ಅಕೌಂಟ ನಂ. 232 ಹೊಂದಿರುತ್ತಾರೆ. ದಿನಾಂಕ 18-02-2012 ರಂದು ರೇಲ್ವೆ ಇಲಾಖೆಯವರು ಪಿಂಚಣಿ ಅರಿಯರ್ಸ್ ಮೊತ್ತ 29,832=00 ರೂ ನೇದನ್ನು ಫಿರ್ಯಾದಿಯ ಪೊಸ್ಟಲ್ ಖಾತೆಗೆ ಜಮಾ ಮಾಡಿರುತ್ತಾರೆ. ದಿನಾಂಕ 29-02-2012 ರಂದು ಫಿರ್ಯಾದಿಯ ಪೋಸ್ಟಲ್ ಖಾತೆಯಿಂದ 15000=00 ರೂ ಹಣ ವಿತಡ್ರಾಲ್ ಮಾಡಿದ ಬಗ್ಗೆ ಖಾತೆಯಲ್ಲಿ ನಮೂದಿಸಿದ್ದು ಅದರೆ, ಫಿರ್ಯಾದಿದಾರರು ಸದರಿ ಹಣ ವಿತಡ್ರಾಲ್ ಮಾಡಿರುವದಿಲ್ಲಾ. ಅಂಚೆ ಇಲಾಖೆಯ ಸಂಬಂಧಪಟ್ಟ ಸಿಬ್ಬಂಧಿ ಫಿರ್ಯಾದಿಯ ಖಾತೆಯಿಂದ 15000=00 ರೂ ಹಣ ಮೋಸ ಮಾಡಿ ದುರ್ಬಳಿಕೆ ಮಾಡಿರುತ್ತಾನೆ ಎಂದು ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಔರಾದ ಪೊಲೀಸ್ ಠಾಣೆ ಗುನ್ನೆ ನಂ. 78/12 ಕಲಂ 324, 504 ಜೊತೆ 34 ಐಪಿಸಿ ಮತ್ತು 3(1)(11) ಎಸ್.ಸಿ./ಎಸ್.ಟಿ. ಕಾಯ್ದೆ:-

ದಿನಾಂಕ 30/08/2012 ರಂದು 1200 ಗಂಟೆಗೆ ಖಂಡೇಕೇರಿ ಪ್ರಾಥಮಿಕ ಶಾಲೆ ಯಲ್ಲಿ ಪಿರ್ಯಾದಿ ಶ್ರೀಮತಿ ಜೈಶ್ರೀ ಗಂಡ ಸಂಜು ಜಾಧವ ಸಾ// ಖಂಡೇಕೆರಿ ತಾಂಡೆ ರವರು ಹೇಡ ಕುಕ್ಕರ ಅಂತ ಅಡುಗೆ ಮಾಡುತ್ತಿದ್ದಾಗ.ಖಂಡೇಕೇರಿ ಗ್ರಾಮದ ನರಸಿಂಗ ತಂದೆ ಪಾಂಡು ,ಅನೀಲ ತಂದೆ ಪಂಡರಿ ಬೀರಾದಾರ ರವರು ಶಾಲೆಯಲ್ಲಿ ಬಂದು ಪಿರ್ಯಾದಿಗೆ ನೀನು ನಮ್ಮ ಹುಡುಗರಿಗೆ ಸರಿಯಾಗಿ ಉಟಾ ಮಾಡಿ ಹಾಕುತ್ತಿಲ್ಲ ಎ ಲಮಾಣಿ ಸೂಳಿ ರಂಡಿ ಅಂತ ಬೈದು ಕೈಯಿಂದ ಹೋಡಿ ಬಡಿಮಾಡಿ ಜಾತಿ ನಿಂದನೆಮಾಡಿ, ಅವಮಾನಮಾಡಿರುತ್ತಾರೆ, ಅಂತ ಫಿರ್ಯಾದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೋಳ್ಳಲಾಗಿದೆ.

No comments: