ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ. ಶಿವಕುಮಾರ ತಂದೆ ಗುರಪ್ಪಾ ಲಸ್ಕರ ಸಾ: ಮನೆ ವಡ್ಡರಗಲ್ಲಿ ಬ್ರಹ್ಮಪೂರ ಗುಲಬರ್ಗಾ ರವರು ನನ್ನ ಹೆಂಡತಿಯಾದ ಅನಿತಾ ಇವಳು ರಾಖಿ
ಹುಣ್ಣಿಗೆ ಸಲುವಾಗಿ ತವರು
ಮನೆ ಅಫಜಲಪೂರಕ್ಕೆ ಹೋಗಿದ್ದು, ನಾನು ಗೌಂಡಿ ಕೆಲಸ ಮುಗಿಸಿಕೊಂಡು
ರಾತ್ರಿ 7 ಗಂಟೆಗೆ ಮನೆಗೆ ಬಂದು ಬಿಗ ಹಾಕಿಕೊಂಡು ಅಣ್ಣತಮ್ಮಕಿಯ ಮನೆ
ಶಾಂತಿಗೆ ಹೋಗಿರುತ್ತೆನೆ. ದಿನಾಂಕ;02-03/08/2012 ರಂದು ರಾತ್ರಿ ನಾವು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲು ಮುರಿದು ಅತಿಕ್ರಮ ಪ್ರವೇಶ ಮಾಡಿ ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಮತ್ತು ನಗದು
ಹಣ 2000/- ರೂಪಾಯಿಗಳು ಹೀಗೆ ಒಟ್ಟು ಅಂದಾಜು ಕಿಮ್ಮತ್ತು 60,000/- ರೂಪಾಯಿ ಬೆಲೆ ಬಾಳುವ ಬಂಗಾರದ ಮತ್ತು ಬೆಳ್ಳಿ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ.64/2012 ಕಲಂ.
457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment