ಯು.ಡಿ.ಅರ್. ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ : ಶ್ರೀ ಪ್ರಭಾಕರ ತಂದೆ ವಿಠಲರಾವ ನಾಯಕ ಸಾ|| ಕೋಬ್ರಾ ಕಾಲನಿ ಹೀರಾಪೂರರವರು ದಿನಾಂಕ: 01/08/2012 ರಂದು ಮುಂಜಾನೆ 10:05 ಎಎಮ ದಿಂದ 10:45 ಎಎಮ ಮಧ್ಯದಲ್ಲಿ ಕುಮಾರಿ ಪುಷ್ಪಾ ತಂದೆ ವಿಠಲರಾವ ನಾಯಕ ವ: 25 ವರ್ಷ ಜಾ: ಬ್ರಾಹ್ಮಣ ಸಾ: ಕೋಬ್ರಾ ಕಾಲನಿ ರವರು ಹೀರಾಪೂರ ತಾ: ಜಿ: ಗುಲಬರ್ಗಾ ಮೃತಳು ತಾನು ಹೋದ ವರ್ಷ 1 ಲಕ್ಷ ರೂಪಾಯಗಳು ಕೊಟ್ಟು ಬಿ.ಎಸಿ ನರ್ಸಿಂಗ ಕೋರ್ಸ ಮಾಡಿದ್ದು ಹಾಗು ತಾನು ಹೊರದೇಶಕ್ಕೆ ಹೋಗುವ ಕುರಿತು 1 ಲಕ್ಷ ರೂಪಾಯಿಗಳು ಅವಶ್ಯಕತೆ ಇದ್ದ ಕಾರಣ ಅದನ್ನು ಹೇಗೆ ಜೋಡಿಸಬೇಕು ಮತ್ತು ಅದರಿಂದ ತನ್ನ ಕುಟುಂಬಕ್ಕೆ ಆರ್ಥಿಕ ಬಾರ ಹೆಚ್ಚಾಗಬಹುದು ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಅಂತಾ ಶ್ರೀ ಪ್ರಭಾಕರ ತಂದೆ ವಿಠಲರಾವ ನಾಯಕ ಸಾ|| ಕೋಬ್ರಾ ಕಾಲನಿ ಹೀರಾಪೂರರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಅರ್. ನಂ: 21/2012 ಕಲಂ 174 ಸಿಅರ.ಪಿಸಿ ಪ್ರಕಾರ ಯು.ಡಿ.ಅರ್. ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಪೀರಪ್ಪ ತಂದೆ ರಾಣಪ್ಪ ಕಡೋಳ್ಳಿ ಉ: ಚಾಲಕ ಕಮ್ ನಿರ್ವಾಹಕ ಸಾ: ಚಿಂಚನಸೂರ ರವರು ನಾನು ಮತ್ತು ವಿವೇಕಾನಂದ ಕೂಡಿಕೊಂಡು ದಿನಾಂಕ:01-08-2012 ರಂದು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಕಲ್ಲಹಂಗರಗಾ ಗ್ರಾಮದ ಸರಕಾರಿ ಶಾಲೆಯ ಮುಂದಿನ ಬ್ರೀಡ್ಜಿನ ಮೇಲೆ ಕೆಎ 32 ವಾಯ್ -3697 ಮೋಟಾರ ಸೈಕಲ ಮೇಲೆ ಹೋಗುತ್ತಿರುವಾಗ ಬ್ರೀಡ್ಜಿನ ಮೇಲೆ ಎಮ್ಮೆಗಳು ಹೋಗುತ್ತಿದ್ದು. ಒಮ್ಮೆಲೆ ಕಟ ಮಾಡಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಬಾರಿ ರಕ್ತಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 248/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment