Police Bhavan Kalaburagi

Police Bhavan Kalaburagi

Monday, August 6, 2012

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ;ಶ್ರೀ ಶಾಂತಕುಮಾರ ತಂದೆ ವೀರಸಂಗಪ್ಪಾ ಜಟ್ಟೂರ, ಸಾಃ ಎಮ್.ಬಿ ನಗರ ಗುಲಬರ್ಗಾರವರು ನಾನು ದಿನಾಂಕ:04-08-2012 ರಂದು ಬೆಳಿಗ್ಗೆ 11-20 ಗಂಟೆಗೆ ನನ್ನ ಮೋಟಾರ ಸೈಕಲ ನಂ. ಕೆ.ಎ 32 ಇ.ಎ 5491 ನೇದ್ದನ್ನು ಚಲಾಯಿಸಿಕೊಂಡು ಜಟಪಟ ಬಿಬಿ ದರ್ಗಾದ ಹತ್ತಿರ ಬರುತ್ತಿದ್ದಾಗ ಎದರುಗಡೆಯಿಂದ ಮೋಟಾರ ಸೈಕಲ  ನಂ:ಕೆಎ-36 ಎಕ್ಸ-9595 ನೇದ್ದರ ಸವಾರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:42/2012 ಕಲಂ 279,338 ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಕೊಲೆಗೆ ಪ್ರಯತ್ನ:
ನೆಲೋಗಿ ಪೊಲೀಸ ಠಾಣೆ: ಶ್ರೀ ಬಸವರಾಜ ತಂದೆ ಮಾಹದೇವಪ್ಪ ಶಿರಕನಳ್ಳಿ ಸಾ|| ಕಾಸಬೊಸಗಾ ರವರು ನಾನು ದಿನಾಂಕ: 05-08-2012 ರಂದು ಮುಂಜಾನೆ 9-00 ಗಂಟೆಯ ಸುಮಾರಿಗೆ ಜೇವರ್ಗಿಗೆ ಹೋಗಬೇಕೆಂದು ನಮ್ಮೂರ ಬಸ್ಸ ಸ್ಟಾಂಡನಲ್ಲಿ ನಿಂತ್ತಿರುವಾಗ ನಮ್ಮ ಅಣ್ಣ ಮಕ್ಕಳಾದ ಲಕ್ಷ್ಮಣ ಶಿರಕನಳ್ಳಿ, ಮಲ್ಲಪ್ಪ ಶಿರಕನಳ್ಳಿ, ಶಿವಪುತ್ರ ಶಿರಕನಳ್ಳಿ, ರಾಜು ಶಿರಕನಳ್ಳಿ, ವರು ಅವಾಚ್ಯವಾಗಿ ಬೈದು ಹೊಲದ ಬಾಂದಾರಿಯ ಬಗ್ಗೆ ವಿನಾಕಾರಣ ಜಗಳ ತಗೆದು ಕೊಡಲಿಯಿಂದ ನನ್ನ ತಲೆಗೆ ಹೊಡೆದು ರಕ್ತ ಗಾಯ ಮಾಡಿ ನನ್ನಗೆ ಕೊಲೆ ಮಾಡಲು ಪ್ರಯತ್ನ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:103/2012 ಕಲಂ 323,324,504,506,307 ಸಂಗಡ 34 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:05/08/12 ರಂದು ಠಾಣೆಯಲ್ಲಿದ್ದಾಗ ಕೆರೆಬೋಸಗಾ ಸೀಮೆಯ ಬಣಗಾರ ಇವರ ಹೊಲದಲ್ಲಿ ಇಸ್ಪೇಟ ಜೂಜಾಟವನ್ನು ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ.ಐ ಆನಂದರಾವ ಗುಲಬರ್ಗಾ ಗ್ರಾಮೀಣ ಠಾಣೆ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ 9 ಜನರನ್ನು ಹಿಡಿದು ಜೂಜಾಟಕ್ಕೆ ಬಳಸಿದ ಒಟ್ಟು ಹಣ 7330/- ರೂಗಳು ಹಾಗೂ 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 256/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: