Police Bhavan Kalaburagi

Police Bhavan Kalaburagi

Friday, August 10, 2012

GULBARGA DISTRICT REPORTED CRIMES


ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುವುದರ ಮೂಲಕ ಸರಕಾರಕ್ಕೆ ವಂಚನೆ ಪ್ರಕರಣ
 ಬ್ರಹ್ಮಪೂರ ಪೊಲೀಸ್ ಠಾಣೆ:ದಿನಾಂಕ:09-08-2012 ರಂದು ಸಾಯಂಕಾಲ 7-00 ಗಂಟೆಗೆ ಹೆಚ್.ವೈ ತುರಾಯಿ ಪೊಲೀಸ ಉಪಾಧೀಕ್ಷರು ನಾಗರೀಕ ಹಕ್ಕುಗಳ ಜಾರಿ ನಿದರ್ೇಶನಾಲಯ ಗುಲಬರ್ಗಾ ರವರು ಶರಣಬಸವೇಶ್ವರ ತಂದೆ ವೀರಯ್ಯಾ ಸ್ವಾಮಿ ನವಣಿ ಸಹಾಯಕ ಲೆಕ್ಕಿಗ ಕೆ.ಎಸ್.ಆರ್.ಟಿ.ಸಿ ಗುಲಬರ್ಗಾ ಇತನು ಮೂಲತಃ ಲಿಂಗಾಯತ ಜಂಗಮ ಜಾತಿಯವನಿದ್ದು, ದಿನಾಂಕ:23-12-1986 ರಂದು ಮಹಾನಗರ ಸಭೆ ಗುಲಬರ್ಗಾರವರಿಂದ ಪರಿಶಿಷ್ಟ ಜಾತಿಯ ಸುಳ್ಳು ಬೇಡ ಜಂಗಮ ಜಾತಿಯನ್ನು ಪಡೆದುಕೊಂಡು ಮೀಸಲಾತಿ ಅಡಿಯಲ್ಲಿ ಕೆ.ಎಸ್.ಆರ್.ಟಿ.ಸಿಯಲ್ಲಿ ಸಹಾಯಕ ಲೆಕ್ಕಿಗ  ಹುದ್ದೆಯಲ್ಲಿ  ನೇಮಕಾತಿ ಹೊಂದಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಮತ್ತು ಸರಕಾರಕ್ಕೆ ಮೋಸ ಮಾಡಿದ್ದು, ಸದರಿಯವನ ವಿರುದ್ದ ಕಲಂ: 198, 420, ಐ.ಪಿ.ಸಿ. ಮತ್ತು ಕಲಂ: 3 (1) (9) ಎಸ್.ಸಿ/ಎಸ್.ಟಿ. ಪಿ.ಎ. ಆಕ್ಟ್ 1989 ರ ಪ್ರಕಾರ ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಂಡು ಮುಂದಿನ ತನಿಖೆಗಾಗಿ ಪಿರ್ಯಾದಿದಾರರಿಗೆ ಒಪ್ಪಿಸಲಾಗಿದೆ.
(ಕೊರ್ಟ ರೆಪರ್ಡ ಕೇಸ) ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ :09/08/2012 ರಂದು ಮಾನ್ಯ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಾವೆಟ ಕಂಪ್ಲೆಂಟ ನಂ.06/2012 ನೇದ್ದರ ಆದೇಶ ಪತ್ರದೊಂದಿಗೆ ಶ್ರೀ ವಿಜಯಕುಮಾರ ತಂದೆ ನಿಲಕಂಠ ತಳವಾರ ಸಾ|| ಕಾಂತ ಕಾಲೋನಿ ಗುಲಬರ್ಗಾ ರವರು ನ್ಯಾಯಾಲಯಕ್ಕೆ ಸಲ್ಲಿಸಿದ ಉಲ್ಲೇಖಿತ ಅರ್ಜಿ ಸ್ವೀಕೃತವಾಗಿದ್ದು, ಸದರಿ ಅರ್ಜಿಯ ಸಂಕ್ಷಿಪ್ತ ಸಾರಾಂಶ ವೆನೆಂದರೆ ವಿಜಯಕುಮಾರ ಇತನು  ಅನುಷಾ ತಂದೆ ದೇವರಾವ ರವರೊಂದಿಗೆ ದಿನಾಂಕ: 24/12/2010 ರಂದು ಹೀರಾಪೂರ ಗ್ರಾಮದ ಎಲ್ಲಮ್ಮ ದೇವಿ ಗುಡಿಯಲ್ಲಿ ಮದುವೆ ಮಾಡಿಕೊಂಡು ನಂತರ ದಿನಾಂಕ: 21/04/2011 ರಂದು ಉಪ ನೊಂದನಾಧಿಕಾರಿ ಕಛೇರಿಯಲ್ಲಿ ಮದುವೆ ನೊಂದಣಿ ಮಾಡಿಕೊಂಡಿದ್ದು, ನನ್ನ ಹೆಂಡತಿ ಅನುಷಾ ಇವಳು ತವರು ಮನೆಗೆ ಹೊಗುತ್ತೆನೆ ಅಂತಾ ಹೇಳಿದ್ದರಿಂದ ಕಳುಹಿಸಿಕೊಟ್ಟಿರುತ್ತೆನೆ. ಇಲ್ಲಿಯವರೆಗೆ ಮರಳಿ ಬರದೆ ಇರುವದರಿಂದ ಮಾನ್ಯ ನ್ಯಾಯಾಲಯದ ದಾವೆ ಸಂ. 132/2012 ರ ಪ್ರಕಾರ ಹೆಂಡತಿ ಬರುವಿಕೆಗಾಗಿ ದಾವೆ ಹುಡಿದ್ದು ಚಾಲ್ತಿಯಲ್ಲಿರುತ್ತದೆ. ದಿನಾಂಕ :02/08/2012 ರಂದು ಬೆಳಿಗ್ಗೆ 6-30 ಗಂಟೆ ಸುಮಾರಿಗೆ ನಾನು ಮತ್ತು ನ್ನ ಗೆಳೆಯರೊಂದಿಗೆ ವಾಕಿಂಗ ಮಾಡಿಕೊಂಡು ರಾಕೇಶ ರೋಶನ ಸ್ಕೂಲ ಮಾರ್ಗವಾಗಿ ಮನೆಗೆ ಬರುತ್ತಿರುವಾಗ ನನ್ನ ಮಾವನಾದ ದೇವರಾವ ತಂದೆ ವೆಂಕಟರಾವ ಕುಲಕರ್ಣಿ, ಶಾಂತ ಗಂಡ ದೇವರಾವ ಕುಲಕರ್ಣಿ,ಅಕೀಲಾ ತಂದೆ ದೇವರಾವ ಕುಲಕರ್ಣಿ ಹಾಗೂ ಸಂಗಡ ಇನ್ನಿಬ್ಬರು ಕೂಡಿಕೊಂಡು ಅವಾಚ್ಯವಾಗಿ ಬೈದು  ಅಂಗಿಯ ಕಾಲರ ಹಿಡಿದು ಎಳೆದಾಡಿ ಕೈಯಿಂದ ಹೊಡೆದು ಕುತ್ತಿಗೆ ಇಚುಕಿ ಸಾಯಿಸಲು ಪ್ರಯತ್ನಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂ. 69/2012 ಕಲಂ 143, 147, 148, 323, 324, 307, 440, 504, 506, ಸಂ. 149 ಐ.ಪಿ.ಸಿ ಮತ್ತು 3(1) (10) ಎಸ್.ಸಿ/ಎಸ್.ಟಿ ಪಿ.ಆಯ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ನಿಂದನೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ಶ್ರೀ ದೇವಿಂದ್ರಪ್ಪ ತಂದೆ ಶಿವರಾಮ ಬಾಲ್ಕೆ ಸಾ|| ನವಬಾದ ಗ್ರಾಮ ತಾ||  ಜಿ||  ಬೀದರ. ಕಾರ್ಯದರ್ಶಿ (ಪ್ರಭಾರಿ ಪಿ ಡಿ ಓ ಗ್ರಾಮ ಪಂಚಾಯತ ಬಳೂರ್ಗಿ) ರವರು ದಿನಾಂಕ: 27-07-2012 ರಂದು 12-30 ಗಂಟೆಗೆ ಬಳ್ಳೂರ್ಗಿ ಗ್ರಾಮ ಪಂಚಾಯತ ಸಭೆಯಲ್ಲಿ 2012-13  ನೇ ಸಾಲಿನ ಕ್ರೀಯಾ ಯೋಜನೆ ತಯ್ಯಾರಿಸುವ ಬಗ್ಗೆ ಚರ್ಚಿಸುತ್ತಿರುವಾಗ ಬಸಮ್ಮ ಗಂಡ ಅಶೋಕ, ಮಹಾನಂದ ಗಂಡ ಮಲ್ಲಣ್ಣ ರೋಡಗಿ, ಗಂಗೂಭಾಯಿ ಗಂಡ ಬಸಣ್ಣ ಚಲಗೇರಿ ಈ ಮೂರು ಜನರು ಕೂಡಿಕೊಂಡು ಕ್ರೀಯಾ ಯೋಜನೆ ವಿಷಯದಲ್ಲಿ ತಕರಾರು ಮಾಡಿ ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 139/2012 ಕಲಂ 3 (1) (10) ಎಸ.ಸಿ/ಎಸಟಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಅರವಿಂದ ತಂದೆ ಸದಾಶಿವಪ್ಪ ಸುಲೇಗಾಂವ ಉ||ಟ್ರಾನ್ಸಪೊರ್ಟ ಸಾ: ಗಂಜ ಬ್ಯಾಂಕ ಕಾಲೋನಿ ಈಶ್ವರ ಗುಡಿಯ ಹತ್ತಿರ ಗುಲಬರ್ಗಾರವರು ನನ್ನ ತಮ್ಮನಾದ ಕೀಶನರಾವ ಇತನು ದಿನಾಂಕ: 08-08-2012 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಸೈಯದ ಚಿಂಚೋಳಿ ಕ್ರಾಸ ಹತ್ತಿರ ಇರುವ ಸಂಗಮೇಶ್ವರ ಟ್ರಾನ್ಸಪೋರ್ಟದಿಂದ ನಂದಿ ಕಾಲೋನಿಗೆ ಸ್ಕ್ಯೂಟಿ ನಂ ಕೆಎ/32-ಇಬಿ-5730 ನೇದ್ದರ ಮೇಲೆ ಬರುತ್ತಿರುವಾಗ ಕಾಕಡೆ ಚೌಕ ಹತ್ತಿರ ಅವರ ಹಿಂದಿನಿಂದ ಲಾರಿ ನಂ ಕೆಎ/22-ಡಿ-5445 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ಹಾರ್ನ ವಗೈರೆ ಮಾಡದೇ ಕೀಶನರಾವ ಇವರ ಸ್ಕ್ಯೂಟಿಗೆ ಡಿಕ್ಕಿ ಹೊಡೆದು ಭಾರಿ ರಕ್ತಗಾಯ ಪಡಿಸಿ ಓಡಿ ಹೋಗಿದ್ದು, ಕೀಶನರಾವ ಇತನಿಗೆ  ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ 108 ವಾಹನದಲ್ಲಿ ಸೇರಿಕೆ ಮಾಡಿದ್ದು, ಉಪಚಾರ ಹೊಂದುತ್ತಾ ಗುಣಮುಖ ಹೊಂದದೆ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 259/2012 ಕಲಂ 279, 304 (ಎ) ಐಪಿಸಿ ಸಂಗಡ 187 ಐ.ಎಮ್. ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

No comments: