Police Bhavan Kalaburagi

Police Bhavan Kalaburagi

Saturday, August 11, 2012

GULBARGA DISTRICT REPORTED CRIMES


ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ: ಶ್ರೀಮತಿ ಕೇಶರ ಗಂಡ ಬಾಲಚಂದ್ರ ಮೋರೆ  ಸಾ|| ಗಂಜ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:09/08/2012 ರಂದು ಬೆಳಿಗ್ಗೆ 10:30 ಗಂಟೆಗೆ ಮನೆಯ ಎದುರುಗಡೆ ಸುಜುಕಿ ಆಕ್ಸ್ ಸಂ: 125 ನಂ. ಕೆ.ಎ 32 ಎಕ್ಸ್ 2756 ಚೆಸ್ಸಿ ನಂಬರ: MB8CFA4CAHA8194234 ಇಂಜನ  ನಂಬರ : F486429553, ಮಾಡೆಲ 2010,ಕಲರ : ಬಿಳಿ, ನೇದ್ದನ್ನು ನಿಲ್ಲಿಸಿ ಮನೆಯೊಳಗೆ ಹೋಗಿದ್ದು, ಮರಳಿ ಬಂದು ನೋಡಲಾಗಿ ಯಾರೋ ಕಳ್ಳರು ನನ್ನ ಮೋಟಾರ ಸೈಕಲ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 68/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ
ಅಪಘಾತ ಪ್ರಕರಣ:
ಗ್ರಾಮೀಣ  ಪೊಲೀಸ್ ಠಾಣೆ:ಶ್ರೀ  ಸೈಯ್ಯದ ಪಾಶಾ ತಂದೆ ಖಾಸೀಮಸಾಬ ಬಿಲ್ಲಾಡ ಸಾ||ನಯಾ ಮೊಹಲ್ಲಾ ಮಿಜಗರಿ ನಿಯರ ಮಹ್ಮದೀಯಾ ಮಜೀದ ಹತ್ತಿರ ಗುಲಬರ್ಗಾರವರು ನಾನು ದಿನಾಂಕ 10-08-12 ರಂದು ರಾತ್ರಿ 9-10 ಗಂಟೆ ಸುಮಾರಿಗೆ ಟಿಪ್ಪು ಸುಲ್ತಾನ ಚೌಕದಿಂದ ತನ್ನ ಮೋಟಾರ ಸೈಕಲ ಕೆಎ 32 ಕೆ 9493 ನೇದ್ದಕ್ಕೆ ಮಹ್ಮದ ರಫೀ ಚೌಕ ಹತ್ತಿರುವ ಪೆಟ್ರೋಲ ಪಂಪಿನಲ್ಲಿ  ಪೆಟ್ರೋಲ ಹಾಕಿಕೊಂಡು ಬರಲು ಹೊರಟಾಗ ರಾತ್ರಿ 9-30 ಗಂಟೆ ಸುಮಾರಿಗೆ ಪೀರ ಬಂಗಾಲಿ ದರ್ಗಾ ಮೈದಾನ ಎದುರಿನ ಹುಮನಾಬಾದ ಸೇಡಂ ರಿಂಗ ರೋಡಿನಲ್ಲಿ  ಹಿಂದಿನಿಂದ ಲಾರಿ ಎಪಿ 25 ಟಿ 671 ಚಾಲಕ ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದು ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು, ಬೆನ್ನಿಗೆ ಟೊಂಕಕ್ಕೆ ಎಡಗಾಲ ತೊಡೆಗೆ ಭಾರಿ ಗುಪ್ತಗಾಯಗೊಳಿಸಿ ಸ್ಥಳದಲ್ಲಿ ಲಾರಿ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ261/12  ಕಲಂ 279, 338 ಐಪಿಸಿ ಸಂ. 187 ಎಂ.ವಿ.ಆಕ್ಟ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: