Police Bhavan Kalaburagi

Police Bhavan Kalaburagi

Friday, August 17, 2012

GULBARGA DISTRICT


ಅಟೋದಲ್ಲಿ ಶವ ಬಿಟ್ಟು ಹೋದ ಕೊಲೆ ಪ್ರಕರಣ ಪತ್ತೆ,
ಒಬ್ಬನ  ಬಂದನ, ಅಟೋ ರೀಕ್ಷಾ, ಬಂಗಾರದ ಆಭರಣ &ಮೊಬಾಯಿಲ್ ಪೋನ ವಶ.
ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು, ಮತ್ತು ಮಾನ್ಯ ಅಪರ್ ಪೊಲೀಸ್ ಅಧೀಕ್ಷಕರಾದ ಶ್ರೀ ಕಾಶಿನಾಥ ತಳಕೇರಿ, ಮಾನ್ಯ ಡಿ.ಎಸ.ಪಿ ಗ್ರಾಮಾಂತರ ಉಪ-ವಿಭಾಗದ ಎಸ.ತಿಮ್ಮಪ್ಪ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ  ಸಿಪಿಐ ಎಂ.ಬಿ ನಗರ ರವರ ನೇತ್ರತ್ವದಲ್ಲಿ ಶ್ರೀ ಭೋಜರಾಜ ಪಿ.ಎಸ.ಐ ಫರತಬಾದ, ಪಂಡಿತ ಸಗರ ವಿಸ್ವ ವಿದ್ಯಾಲಯ, ಸಂಜೀವಕುಮಾರ ಎಂ.ಬಿ.ನಗರ ಠಾಣೆ,ಪ್ರಬೋಶನರಿ ಪಿ.ಎಸ.ಐ ರವರಾದ ಶ್ರೀದೇವಿ ಬಿರಾದಾರ, ಆನಂದ ಡೊಣಿ  ಹಾಗೂ ಸಿಬ್ಬಂದಿಯವರಾದ ಶಂಕರ  ಹೆಚ.ಸಿ,   ಸುಧೀರ ಪಿಸಿ, ಚಂದ್ರಕಾಂತ ಪಿಸಿ, ವಿಜಯಕುಮಾರ ಪಿಸಿ, ಅರ್ಜುನ ಎಪಿಸಿ, ಪ್ರಭಾಕರ ಪಿಸಿ, ವೇದರತ್ನಂ ಪಿಸಿ   ರವರು ಇಂದು ದಿನಾಂಕ 17/8/2012  ರಂದು ಗುಲಬರ್ಗಾ ನಗರದ ರೇಲ್ವೆ  ನಿಲ್ದಾಣದ ಹತ್ತಿರ  ಬೆಳಿಗ್ಗೆ ಭಾತ್ಮಿ ಮೇರೆಗೆ ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಶ್ರೀಮತಿ ಶಶಿಕಲಾ ಗಂಡ ಮೈಲಾರಿ ಪೂಜಾರಿ ವಃ 35 ವರ್ಷ ಸಾ|| ಮಾಲಗತ್ತಿ ಎಂಬುವಳನ್ನು ಕೊಲೆ ಮಾಡಿ ತನ್ನ ಅಟೋ ನಂ ಕೆ.ಎ 32 5074 ನೇದ್ದರಲ್ಲಿ ಬಿಟ್ಟು ಹೋಗಿದ್ದ  ಆರೋಪಿತನಾದ ಶಾಂತಪ್ಪ ತಂದೆ ಬಸವರಾಜ ಮುಗಳಿ ವಃ 32 ವರ್ಷ ಜಾಃ ಲಿಂಗಾಯತ ಉಃ ಅಟೋ ಚಾಲಕ ಸಾ|| ಮಾಲಗತ್ತಿ ತಾ||ಜಿ|| ಗುಲಬರ್ಗಾ ಇತನನ್ನು  ವಶಕ್ಕೆ  ತೆಗೆದುಕೊಂಡು ತನಿಖೆಗೆ ಒಳ ಪಡಿಸಿದಾಗ  ಆರೋಪಿತನು ಶ್ರೀಮತಿ ಶಶಿಕಲಾ ಇವಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಶಶಿಕಲಾ ಇವಳು ತನಗೆ ಬಿಟ್ಟು ಬೇರೆಯವರೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಸಂಶಯ ಮಾಡಿ ಶಶಿಕಲಾ ಇವಳಿಗೆ ಕೆಸರಟಗಿ ಗಾರ್ಡನ ಹತ್ತಿರ ಒಂದು ಹೊಲದಲ್ಲಿ ಕರೆದುಕೊಂಡು ಹೋಗಿ ಟಾವೇಲನಿಂದ ಬಾಯಿ ಮತ್ತು ಮೂಗು  ಒತ್ತಿ ಹಿಡಿದು ಉಸಿರು ಗಟ್ಟಿಸಿ ಕೊಲೆ ಮಾಡಿ, ಮೃತಳ ಶವವನ್ನು ಭೀಮಾ ನದಿಯಲ್ಲಿ ಬಿಸಾಕುವ ಉದ್ದೇಶದಿಂದ ತನ್ನ ಅಟೋದಲ್ಲಿ ಹಾಕಿಕೊಂಡು ಹೋಗುತ್ತಿರುವಾಗ ಫರಹತಾಬಾದ ಗ್ರಾಮದ ಸಮೀಪ ಅಟೋ ಕೆಟ್ಟಿದ್ದರಿಂದ, ಮೃತ ದೇಹ ಅಟೋದಲ್ಲಿ ಬಿಟ್ಟು ಮೃತಳ ಕಿವಿಯಲ್ಲಿ ಬಂಗಾರದ ಆಭರಣಗಳು ಮತ್ತು ಆಕೆಯ ಮೊಬಾಯಿಲ್ ತೆಗೆದುಕೊಂಡು ಹೋಗಿದ್ದು, ತನಿಖೆಯಿಂದ ತಿಳಿದು ಬಂದಿರುತ್ತದೆ. ಈ ಬಗ್ಗೆ ಫರಹತಾಬಾದ ಪೊಲೀಸ ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿದ್ದು ಇರುತ್ತದೆ.ತನಿಖೆ ಕಾಲಕ್ಕೆ ಆರೋಪಿತನಿಂದ ಕೃತ್ಯಕ್ಕೆ ಉಪಯೊಗಿಸಿದ ಒಂದು ಅಟೋ ನಂ ಕೆ.ಎ 32 5074, ಬಂಗಾರದ ಕಿವಿ ಓಲೆಗಳು  ಮೊಬಾಯಿಲ್ ಪೊನಗಳು ವಗೈರೆ ವಸ್ತುಗಳನ್ನು ಜಪ್ತು ಪಡಿಸಿಕೊಂಡಿದ್ದು ಇರುತ್ತದೆ. ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಕೊಲೆ ಸಂಚಿನ ಆರೊಪಿತನನ್ನು ಪತ್ತೆ ಹಚ್ಚಿ ಪ್ರಕರಣವನ್ನು ಬೇಧಿಸಲಾಗಿದೆ. ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆ ಮಾಡಿದ ತಂಡಕ್ಕೆ ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ ರವರು  ಪ್ರಶಂಸಸಿ  ಬಹುಮಾನ ಘೋಷಣೆ ಮಾಡಿರುತ್ತಾರೆ.

No comments: