Police Bhavan Kalaburagi

Police Bhavan Kalaburagi

Saturday, August 4, 2012

REPORTED CRIME

ಕಳ್ಳತನ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಮಹಾದೇವಪ್ಪ  ತಂದೆ ಎಗಪ್ಪ ಹರವಾಳ  ಮ್ಯಾನೇಜರ  ಕರ್ನಾಟಕ ಉಗ್ರಾಣ ನಿಗಮ,  ಘಟಕ ನಂ 2  ಗುಲಬರ್ಗಾರವರು ದಿನಾಂಕ:03/08/2012  ರಂದು  ಸೈಯದ ಚಿಂಚೋಳಿ ರಸ್ತೆಗೆ ಇರುವ  ಸಚ್ಚಿನ  ವೇರ್ ಹೌಸ ಗೋದಾಮ  ನಮ್ಮ ನಿಗಮದ  ಸಿಪಾಯಿಯಾದ  ಅಂಬರೀಷ ಇತನು  ಸಾಯಂಕಾಲ 5-00 ಗಂಟೆಗೆ ಕೀಲಿ ಹಾಕಿಕೊಂಡು  ಹೋಗಿದ್ದು, ಸದರಿ ಗೋದಾಮಿನ ಕಾವಲುಗಾರ  ತಿಪ್ಪಣ್ಣ ಕಟ್ಟಿಮನಿ  ರಾತ್ರಿ  1-00 ಗಂಟೆಯ ವರೆಗೆ ಎಲ್ಲಾ ಕೀಲಿಗಳನ್ನು ಚೆಕ್ಕ ಮಾಡಿ  ಮಲಗಿಕೊಂಡಿದ್ದು, ನಂತರ 3-00 ಗಂಟೆಗೆ  ಎದ್ದು ನೋಡಲಾಗಿ  ಗೋದಾಮಿನ  ಶೇಟ್ಟರಿನ ಕೀಲಿ ಮುರಿದಿದ್ದರಿಂದ ನನಗೆ ಫೋನ ಮುಖಾಂತರ ತಿಳಿಸಿದಾಗ ನಾನು  ಹೋಗಿ  ನೋಡಲಾಗಿ  ಸದರ ಗೋದಾಮಿನ ಶೇಟ್ಟರಿನ ಕೀಲಿ ಮುರಿದಿದ್ದು  18 ಕ್ಯೀಂಟಲ್ ತೋಗರಿ  ಅಂದರ ಅಂದಾಜ ಕಿಮ್ಮತ್ತು 68,400/-   ಬೆಲೆ ಬಾಳುವದನ್ನು ರಾತ್ರಿ ವೇಳೆಯಲ್ಲಿ  ಯಾರೊ ಕಳ್ಳರು  ಕಳವು ಮಾಡಿಕೊಂಡು  ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:253/2012 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: