Police Bhavan Kalaburagi

Police Bhavan Kalaburagi

Sunday, September 16, 2012

GULBARGA DISTRICT REPORTED CRIME


ಕಂಕರ ಮಷಿನದ ಖಣಿಯಲ್ಲಿ ಈಜಾಡುತ್ತಿರುವಾಗ ಮೃತ ಪಟ್ಟ ಬಗ್ಗೆ:
ವಿಶ್ವ ವಿದ್ಯಾಲಯ ಪೊಲೀಸ ಠಾಣೆ: ಮಾನ್ಯ 3 ನೇ ಅಪಾರ ಜೆ.ಎಮ್,ಎಪ್.ಸಿ ನ್ಯಾಯಾಲಯದ ಆದೇಶದ ಮೇರೆಗೆ ಶ್ರೀ ಕಾಶೀನಾಥ ತಂದೆ ಲಕ್ಷ್ಮಣ ರಾಠೋಡ ಇವರ ಮಗಳಾದ ಸುನೀತಾ, ಸೀತಾ ತಂದೆ ಹರೀಸಿಂಗ  ಮತ್ತು ಶ್ಯಾಮಬಾಯಿ ತಂದೆ ದುರ್ಗಪ್ಪಾ ಇವರು ದಿನಾಂಕ:11-09-2011 ರಂದು ಶಹಾಬಾದ ರೋಡದಲ್ಲಿರುವ ಲಾಹೋಟಿ ಕಂಕರ ಮಷಿನದ ಖಣಿಯಲ್ಲಿ  ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಸಂತೋಷ ತಂದೆ ಸುರೇಶ ಲಾಹೋಟಿ, ಸುರೇಶ ತಂದೆ ರಾಮವಿಲಾಸ ಲಾಹೋಟಿ ಸಾ:ಲಾಹೋಟಿ ಕಂಕರ ಮಿಷನ ಗುಲಬರ್ಗಾ ರವರು ಮೃತಪಟ್ಟವರಿಗೆ ಯಾವದೇ ಪರಿಹಾರ ಧನ ಕೊಡದೆ ಮೃತಪಟ್ಟ ವಾರಸುದಾರರಿಂದ ಬಿಳಿ ಹಾಳಿ ಮೇಲೆ ಸಹಿ ತಗೆದುಕೊಂಡಿರುತ್ತಾರೆ. ಸದರಿ ಖಣಿಯಲ್ಲಿ ಲೇಬರ ಕೆಲಸ ಮಾಡುತ್ತಿರುವವರಿಗೆ ಯಾವದೇ ಸುರಕ್ಷತೆ ಒದಗಿಸದೆ ಇರುವದರಿಂದ ನಮ್ಮ  ಮಗಳು ಮತ್ತು ಸೀತಾ ತಂದೆ ಹರೀಸಿಂಗ  ಮತ್ತು ಶ್ಯಾಮಬಾಯಿ ತಂದೆ ದುರ್ಗಪ್ಪಾ ಇವರು ಮೃತಪಟ್ಟಿರುತ್ತಾರೆ.  ಸದರಿ ಲಾಹೋಟಿ ಕಂಕರ ಮಿಷನ ಮಾಲಿಕರ ಮೇಲೆ ಕ್ರಮ ಜರುಗಿಸಬೇಕು ಅಂತಾ ಶ್ರೀ ಕಾಶೀನಾಥ ತಂದೆ ಲಕ್ಷ್ಮಣ ರಾಠೋಡ ತಾ||ರೇವೂರ ತಾಂಡಾ ರವರು ದೂರು ಸಲ್ಲಿಸಿದ  ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂ:205/2012 ಕಲಂ 304(ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: