Police Bhavan Kalaburagi

Police Bhavan Kalaburagi

Sunday, September 23, 2012

GULBARGA DISTRICT REPORTED CRIME


ಕೊಲೆಗೆ ಪ್ರಯತ್ನ:
ಮುದೋಳ ಪೊಲೀಸ್ ಠಾಣೆ: ಶ್ರೀ ಭೀಮಶಪ್ಪಾ ತಂದೆ ಕುರುಮಪ್ಪಾ ಗೊಲ್ಲರ ಸಾ||ಕದಲಾಪೂರ ಗ್ರಾಮ ತಾ|| ಸೇಡಂ ರವರು ನಾನು ಕದಲಾಪೂರ ಗ್ರಾಮದ ದೊಡ್ಡ ನರಸಮ್ಮಾ ಇವರ ಮಗಳಾದ ಚಿನ್ನ ಬಂದೆಮ್ಮಾ ಇವಳೊಂದಿಗೆ ಮದುವೆಯಾಗಿ ಇವರ ಮನೆಗೆ ದತ್ತಕ್ಕೆ ಬಂದಿರುತ್ತೇನೆ. ನಮ್ಮ ಅತ್ತೆಯ ತಂಗಿಯ ಗಂಡನಾದ ರಂಗಪ್ಪಾ ತಂದೆ ಯಲ್ಲಪ್ಪ  ಗೊಲ್ಲರ ಇತನು ನಮ್ಮ ಅತ್ತೆಯ ಆಸ್ತಿಯಲ್ಲಿ ಪಾಲು ಬೇಕೆಂದು ಕೋರ್ಟನಲ್ಲಿ ಕೆಸು ಹಾಕಿದ್ದು ಹೈಕೋರ್ಟಲ್ಲಿ ಕೇಸ್ ನಡೆದಿರುತ್ತದೆ ಸದರಿ ರಂಗಪ್ಪಾ ಇತನು ಆಸ್ತಿ ತಾನೆ ತಗೆದುಕೊಳ್ಳಬೇಕೆಂದು ಆಗಾಗ ಜಗಳ ಮಾಡುತ್ತಿರುತ್ತಾನೆ . ದಿನಾಂಕ:23-09-2012 ರಂದು  ಮದ್ಯಾಹ್ನ 12-30  ಗಂಟೆಯ ಸುಮಾರಿಗೆ ಮುಧೋಳ ಬಸ್ಸ ನಿಲ್ದಾಣದ ಹತ್ತಿರ ಇರುವ ರಾಜು ಮೆಕ್ಯಾನಿಕ ಇತನ ಹತ್ತಿರ ಮಸೀನ ರಿಪೇರಿ ಮಾಡಿಸಲು ಬಂದಾಗ ನನಗೆ ನಮ್ಮ ಮಾವನಾದ ರಂಗಪ್ಪಾ ತಂದೆ ಯಲ್ಲಪ್ಪಾ ಗೊಲ್ಲರ ಹಾಗು ಇತನ ಮಕ್ಕಳಾದ ಯಂಕಟಪ್ಪಾ ತಂದೆ ರಂಗಪ್ಪಾ, ಯಲ್ಲಪ್ಪಾ ತಂದೆ ರಂಗಪ್ಪಾ , ಇವರ ಮಗಳಾದ , ಲಕ್ಷ್ಮೀ ಗಂಡ ನರಸಪ್ಪಾ ಗೊಲ್ಲರ , ಹಾಗೂ ಅಳಿಯನಾದ ನರಸಪ್ಪಾ ತಂದೆ ಚಿನ್ನಯ್ಯಾ ಗೊಲ್ಲರ ಸಾ|| ಕದಲಾಪುರ ಇವರು ಕೈಯಲ್ಲಿ ಬಡಿಗೆ,ರಾಡ, ಹಾಗೂ ಚಾಕು ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈದು  ತಮ್ಮ ಕೈಗಳಲ್ಲಿದ್ದ ಬಡಿಗೆ, ಚಾಕು, ರಾಡಿನಿಂದ ಹೊಡೆದಿದ್ದು ಮತ್ತು ಕಾರದ ಪುಡಿ ಮೈಮೇಲೆ  ಚಲ್ಲಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:112/2012 ಕಲಂ 143, 147, 148, 323, 324, 307, 504 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: