ಕೊಲೆ ಪ್ರಕರಣ:
ರಾಘವೇಂದ್ರ ನಗರ
ಪೊಲೀಸ್ ಠಾಣೆ: ಶಿವಪುತ್ರ ತಂದೆ ಚಂದ್ರಶಾ
ಕ್ಯಾರ, ವಯ|| 27 ವರ್ಷ, ಉ|| ಒಕ್ಕಲುತನ, ಸಾ|| ಕಡಗಂಚಿ ರವರು ನಾನು ಮತ್ತು ಅರವಿಂದ ನರೋಣಿ, ಶರಣು ನರೋಣಿ, ಚಿದಾನಂದ ಢೊಳ್ಳಿ, ಎಲ್ಲರೂ ಕೂಡಿಕೊಂಡು ದಿನಾಂಕ:25-09-2012 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಕಡಗಂಚಿಯಿಂದ
ಗುಲಬರ್ಗಾ ನಗರದ ಚಿಂಚೋಳಿ ಲೇಔಟನಲ್ಲಿ ಬರುವ ಅರವಿಂದ ನರೋಣಿ ಇವರ ಕಟ್ಟಡ ನಡೆಯುತ್ತಿರುವ
ಕಾಂಪ್ಲೇಕ್ಸಗೆ ಬಂದಿರುತ್ತೇವೆ. ಕಾಂಪ್ಲೇಕ್ಸದಲ್ಲಿ ನಡೆಯುತ್ತಿರುವ ಕೆಲಸವನ್ನು ನೋಡಿ ಸಾಯಂಕಾಲ
6-30 ಗಂಟೆಯ ಸುಮಾರಿಗೆ ನಾವೆಲ್ಲರೂ ಕಡಗಂಚಿಗೆ ಹೋಗಬೇಕೆಂದು ಕಾಂಪ್ಲೇಕ್ಸ ಎದುರುಗಡೆ
ನಿಂತಿದ್ದೇವು. ಅಷ್ಟರಲ್ಲಿ ಕಡಗಂಚಿ ಗ್ರಾಮದ ಯೋಗೇಶ ಹೊಸಕುರುಬರ, ಬೀರಣ್ಣ ವಗ್ಗಿ, ಭೀಮರಾಯ ಹೊಸಕುರುಬರ, ಮಲ್ಲಪ್ಪ ವಗ್ಗಿ, ಸೋಮಯ್ಯ ಸ್ವಾಮಿ, ಶ್ರೀಶೈಲ ಅಲ್ದಿ, ಜಗಪ್ಪ ಹೊಸಕುರುಬರ ವಿಠಲ ಹೊಸಕುರುಬರ
ಹಾಗೂ ಇತರರು ಕೂಡಿಕೊಂಡು ಬಂದು ಇವರಲ್ಲಿ ಮಲ್ಲಪ್ಪ ವಗ್ಗಿ ಈತನು ಅರವಿಂದ ನರೋಣಿ ಇವರ ಎದೆಯ ಮೇಲೆ
ಪಿಸ್ತೂಲದಿಂದ ಗುಂಡು ಹಾರಿಸಿದನು. ಯೋಗೇಶ, ಶ್ರೀಶೈಲ ಮತ್ತು ವಿಠಲ ಇವರು ಅರವಿಂದ ನರೋಣಿ ಇವರಿಗೆ ಹಿಡಿದುಕೊಂಡಿದ್ದು ಭೀಮರಾಯ ಈತನು
ತಾನು ತಂದ ತಲವಾರದಿಂದ ಕುತ್ತಿಗೆಯ ಮುಂಭಾಗದಲ್ಲಿ ಮತ್ತು ಎದೆಯ ಮೇಲೆ ಹೊಡೆಯುತ್ತಿದ್ದನು. ಆಗ
ನಾನು ಓಡಿ ಹೋಗಿ ಮಲ್ಲಪ್ಪ ವಗ್ಗಿ ಈತನಿಗೆ ಹಿಡಿದಾಗ ಅವನು ನನ್ನಿಂದ ತಪ್ಪಿಸಿಕೊಂಡು ಓಡಿ
ಹೋಗುತ್ತಿರುವಾಗ ನಾನು ಅವನ ಕೈಯಿಂದ ಪಿಸ್ತೂಲನ್ನು ಕಸಿದುಕೊಳ್ಳುವಾಗ ಅವನು ಅಲ್ಲಿ ಬಿಸಾಕಿ ಓಡಿ
ಹೋದನು. ನಾನು, ಚಿದಾನಂದ ಡೊಳ್ಳಿ ಮತ್ತು ಶರಣು ನರೋಣಿ ಎಲ್ಲರೂ ಕೂಡಿ ಜಗಳ ಬಿಡಿಸಲು ಹೋದಾಗ ಬೀರಣ್ಣ ವಗ್ಗಿ, ಮತ್ತು ಸೋಮಯ್ಯ ಸ್ವಾಮಿ ಇವರು ಬಿಡಬೇಡರಿ
ಇವನಿಗೆ ಖಲಾಸ ಮಾಡಿರಿ ಅಂತಾ ಅಂದಾಗ ಜಗಪ್ಪ ಇವನು ಅರವಿಂದ ನರೋಣಿ ಇವರ ಟೊಂಕದಲ್ಲಿ ಇದ್ದ ಲೈಸನ್ಸ
ಪಿಸ್ತೂಲ್ ತೆಗೆದುಕೊಂಡು ಶರಣು ಇವನಿಗೆ ಕೊಲೆ ಮಾಡುವ ಉದ್ದೇಶದಿಂದ ಅವನ ಗುಂಡು ಹಾರಿಸಿದ್ದು ಅವನ
ಬಲಗಾಲ ತೊಡೆಯ ಮೇಲೆ ಹತ್ತಿ ಭಾರಿಗಾಯವಾಗಿದ್ದು ಇರುತ್ತದೆ. ನಂತರ ನಾವು ಚೀರಾಡುವದನ್ನು ನೋಡಿ
ನೆರೆ ಹೊರೆಯ ಜನರು ಬರುವದನ್ನು ನೋಡಿ ಅವರು ಓಡಿ ಹೋದರು. ಕಾರಣ ಅರವಿಂದ ನರೋಣಿ ಇವರಿಗೆ ಕೊಲೆ ಮಾಡಿದ ಮತ್ತು ಶರಣು ಇವರಿಗೆ ಕೊಲೆ ಮಾಡಲು
ಪ್ರಯತ್ನಪಟ್ಟವರ ಮೇಲೆ ಕಾನೂನು ರೀತಿಯ ಕ್ರಮ
ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 69/2012 ಕಲಂ: 143, 147, 148, 325,
307, 302 ಸಂಗಡ 149 ಐ.ಪಿ.ಸಿ ಮತ್ತು 25 ಮತ್ತು
27 ಆಯುಧ ಅಧಿನಿಯಮ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment