ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ : ಶ್ರೀ ಮಲ್ಲಿಕಾರ್ಜುನ
ತಂದೆ ಹಣಮಂತ ಕಟ್ಟಿಮನಿ ಸಾ: ಬಸವ ನಗರ ಸೇಡಂ ತಾ:ಸೇಡಂ ರವರು ನಾನು ಮತ್ತು ಶಾಂತಪ್ಪ ದೊಡ್ಡಮನಿ
ಇಬ್ಬರೂ ಕೂಡಿಕೊಂಡು ಅಳ್ಳೊಳ್ಳಿ ಗ್ರಾಮಕ್ಕೆ ಹೋಗಿ
ವಾಪಸ್ ಸೇಡಂಕ್ಕೆ ಬರುವ ಸಲುವಾಗಿ ಅಳ್ಳೊಳ್ಳಿ ಗೇಟ್ ಹತ್ತಿರ ಟಂಟಂ ನಂ ಕೆಎ- 32 ಬಿ 4082
ನೇದ್ದರಲ್ಲಿ ಕುಳಿತುಕೊಂಡು ಟಂಟಂನಲ್ಲಿ ಸೇಡಂಕ್ಕೆ ಬರುತ್ತಿದ್ದಾಗ ಟಂಟಂ ಚಾಲಕ ಸಂಬಣ್ಣ ತಂದೆ ಶಿವರಾಯ
ಯಡಗಾ ಸಾ:ಕಲಕಂಬಾ ಇತನು ತನ್ನ ಟಂಟಂನ್ನು ಅತೀವೇಗ
ಹಾಗೂ ನಿಸ್ಕಾಳಜೀತನದಿಂದ ನಡೆಸುತ್ತಾ ಸೇಡಂ ಮುಖ್ಯ ರಸ್ತೆಯ ಬಾಬಾ ಸೇಠ ಮನಿಯಾರ್ ಇವರ ಪೆಟ್ರೋಲ್ ಬಂಕನಿಂದ
ಮುಖ್ಯ ರಸ್ತೆಯ ಕಡೆಗೆ ಬರುತ್ತಿದ್ದಾಗ ನಮ್ಮ ಟಂಟಂ ಚಾಲಕ ಸಂಬಣ್ಣ ಇತನು ತನ್ನ ಟಂಟಂ ನೇದ್ದಕ್ಕೆ ಒಮ್ಮಲೇ
ಬ್ರೆಕ್ ಹಾಕಿದ್ದರಿಂದ ನಾವು ಕುಳಿತ ಟಂಟಂ ಪಲ್ಟಿ ಆಯಿತು.ನನಗೆ ಎಡಗೈ ಮೊಳಕೈಗೆ ಎಡಗೈಗೆ ತರಚಿದ ಗಾಯ
ಹಾಗೂ ಬಲಗೈ ಮುಂಗೈಯಿಗೆ ತರಚಿದ ಗಾಯವಾಗಿರುತ್ತದೆ ಶಾಂತಪ್ಪ ದೊಡ್ಡಮನಿ ಇತನಿಗೆ ಗುಪ್ತ ಗಾಯವಾಯಿತು, ಶಿವಪುತ್ರ ತಂದೆ ಸಣ್ಣ ಚಂದ್ರಪ್ಪ ಬಂಟನಳ್ಳಿ ಸಾ||
ಕಲಕಂಬಾ ಇತನಿಗೆ ಭಾರಿಗಾಯವಾಗಿ ಬಾಯಿಂದ ಹಾಗೂ ಮೂಗಿನಿಂದ ರಕ್ತ ಬರುತ್ತಿತ್ತು, ಮತ್ತು ಮಾಹಾದೇವ ಹೊನ್ನಪ್ಪನವರ, ನಿರ್ಮಾಲ ಹೊನ್ನಪ್ಪನವರ, ಚಿಂಟು ಹೊನ್ನಪ್ಪನವರ ಇವರಿಗೆ ಗುಪ್ತ ಗಾಯವಾಗಿರುತ್ತವೆ
. ಶಿವಪುತ್ರ ಇತನು ಉಪಚಾರ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಸದರಿ ಚಾಲಕನ ಮೇಲೆ
ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:206/2012
ಕಲಂ 279, 337, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment