Police Bhavan Kalaburagi

Police Bhavan Kalaburagi

Saturday, September 1, 2012

GULBARGA DISTRICT REPORTED CRIMES


ದರೋಡೆ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ ಠಾಣೆ:ಕುಮಾರಿ|| ಸ್ಮೀತಾ ತಂದೆ ಸಿದ್ದರಾಮಪ್ಪ ಪಡಶೆಟ್ಟಿ ಉ: ಇಂಜಿನಿಯರಿಂಗ ವಿದ್ಯಾರ್ಥಿ ಸಾ: ವೆಂಕಟೇಶ್ವರ ನಗರ ಹಳೆ ಜೇವರ್ಗಿ  ರಸ್ತೆ ಗುಲಬರ್ಗಾ ರವರು ನಾನು  ಮತ್ತು ನನ್ನ ಗೆಳೆತಿಯರಾದ ಸ್ಮೀತಾ ತಂದೆ ಅಣ್ಣಾರಾವ ಪಾಟೀಲ  ಸಾ: ವೀರಬಸವ ನಿಲಯ ಸ್ವಸ್ತಿಕ ನಗರ ಗುಲಬರ್ಗಾ, ಪ್ರಿಯಾಂಕ ತಂದೆ ಅಶೋಕ ಕುಮಾರ ರಾವುತ ಸಾ:ಪೂಜಾ ಕಾಲನಿ ಗುಲಬರ್ಗಾ, ದೀಪ್ತಿ ತಂದೆ ಜಗನ್ನಾಥ ಸಾಗರ ಸಾ: ಸಂತೋಷ ಕಾಲನಿ ವರದಾ ನಗರ ಗುಲಬರ್ಗಾ, ಭಾಗ್ಯಶ್ರೀ ತಂದೆ ಬಸವರಾಜ ಬಿರಾದಾರ ಸಾ: ಸಂತೋಷ ಕಾಲನಿ ವರದಾ ನಗರ ಗುಲಬರ್ಗಾ  ಎಲ್ಲರು ಕೂಡಿಕೊಂಡು ನಮ್ಮ ಮೊಟಾರ ಸೈಕಲಗಳ ಮೇಲೆ ಬುದ್ದ ಮಂದಿರ ನೋಡುವ ಕುರಿತು ಬಂದಿದ್ದು. ಬುದ್ದ ಮಂದಿರ ನೋಡಿಕೊಂಡು ಮರಳಿ 12-15 ಗಂಟೆ ಸುಮಾರಿಗೆ ಮನೆಗೆ ಹೋಗುವ ಕುರಿತು ಬುದ್ದ ಮಂದಿರದಿಂದ  ಹಿಂದುಗಡೆಯ ಕುಸನೂರ ರೋಡ ಮುಖಾಂತರ ಬರುವಾಗ ಬುದ್ದ ಮಂದಿರ ಹಿಂದುಗಡೆಯ ತಿರುವಿನಲ್ಲಿ ಬುದ್ದ ಮಂದಿರ  ಕಡೆಯಿಂದ ಒಂದು ಟಾಟಾ ಇಂಡಿಕಾ ಕಾರ ಬಂದು ಅಡ್ಡಗಟ್ಟಿದ್ದು ಅದರಲ್ಲಿದ್ದ ಮೂರು ಜನ ಅಪರಿಚತ ಜನರು ಬಂದು ಒಬ್ಬನು ಚಾಕು ತೋರಿಸಿ ಹಿಂದಿಯಲ್ಲಿ ಪಹಲೇ ಚೈನ ದೋ ತುಮೆ ಕುಚ ಭೀ ನಹಿ ಕರೆಂಗೆ  ಅಂತಾ ಅಂದಾಗ ನಾವು ಅವರಿಗೆ ಹೆದರಿ ನನ್ನ ಹತ್ತಿರವಿದ್ದ 7 ಗ್ರಾಂ ಬಂಗಾರದ ಲಾಕೇಟ ಮತ್ತು ಸ್ಮೀತಾ ಪಾಟೀಲ ಇವಳ ಹತ್ತಿರವಿದ್ದ 10 ಗ್ರಾಂ ಬಂಗಾರದ  ಲಾಕೇಟ, 3 ಗ್ರಾಂ ಬಂಗಾರದ ಕಿವಿಯೊಲೆ ಮತ್ತು ನೋಕಿಯಾ ಕಂಪನಿ ಮೊಬೈಲ ಮತ್ತು ಪ್ರಿಯಾಂಕ ಇವಳ ಕಾರ್ಬನ ಕಂಪನಿಯ ಮೊಬೈಲ ಹೀಗೆ ಒಟ್ಟು ಎಲ್ಲಾ ಸೇರಿ ಅಂದಾಜು 50,000/- ರೂಪಾಯಿ ಕಿಮ್ಮತ್ತಿನದ್ದು ಮೂರು ಜನರು ಅವರು  ತಂದಿದ್ದ ಕಾರಿನಲ್ಲಿ ನಂದೂರ ರೋಡ ಕಡೆಗೆ ಕಾರು ಸಮೇತೆ ಓಡಿ ಹೋಗಿರುತ್ತಾರೆ. ಸದರಿ ಕಾರ ಇಂಡಿಕಾ ಕಂಪನಿಯ ಗ್ರೇ ಅಥವಾ ಸಿಲ್ವರ ಬಣ್ಣದ್ದು ಇರಬಹುದು. ಸದರಿ ಕಾರಿನಲ್ಲಿರುವ ಮೂರು ಜನ ಅಪರಿಚಿತರನ್ನು ನೋಡಿದರೆ ಗುರುತಿಸುತ್ತೇನೆ. ಇವರ ವಯಸ್ಸು ಅಂದಾಜು 20-25 ವರ್ಷ ವಯಸ್ಸಿನವರಿದ್ದು ಹಿಂದಿ ಕನ್ನಡ ಮಾತನಾಡುತ್ತಿದ್ದರು. ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ.194/2012 ಕಲಂ 392 ಐಪಿಸಿ ದಾಖಲು ಮಾಡಿಕೊಂಡಿದ್ದು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ ಶ್ರೀ ಶರಣಬಸ್ಸಪ್ಪಾ ತಂದೆ ಹಣಮಂತರಾವ ದಿಕ್ಸಂಗಿ ಸಾ|| ದುತ್ತರಗಾಂವ ತಾ|| ಆಳಂದ ಜಿ|| ಗುಲಬರ್ಗಾ ರವರು ನನ್ನ ತಮ್ಮನಾದ ಸಂತೋಷಕುಮಾರ ಇತನು ಮೋಟಾರ ಸೈಕಲ ಹೀರೋ ಹೊಂಡಾ  ಸ್ಪ್ಲೆಂಡರ ಪ್ಲಸ್  ನಂ.ಕೆಎ-32 ಎಕ್ಸ-9978 ನೇದ್ದನ್ನು  ಸರ್ವಿಸಿಂಗ ಕುರಿತು ಮುಂಜಾನೆ ದುತ್ತರಗಾಂವ ದಿಂದ ಗುಲ್ಬರ್ಗಾಕ್ಕೆ ಬರುತ್ತಿರುವಾಗ ಕೆರಿ ಬೋಸಗಾ ಹತ್ತಿರ ಮಧ್ಯಾಹ್ನ 12-45 ಗಂಟೆ ಸುಮಾರಿಗೆ  ನನ್ನ ತಮ್ಮ (ಮೃತನ)  ಮೋಬೈಲದಿಂದ ಬಸವರಾಜ ಹಡಗಿಲ ಇವರು ನನಗೆ ಫೋನ ಮಾಡಿ, ಕೆರಿಬೋಸಗಾ ಕ್ರಾಸ  ಹತ್ತಿರ  ಸಂತೋಷಕುಮಾರ ಇತನು ಮೋಟಾರ ಸೈಕಲನ್ನು ವೇಗವಾಗಿ ನಡೆಯಿಸಿ ಕೊಂಡು ಹೋಗಿ ರೋಡ ಕೆಳಗೆ ಇರುವ ಲೈಟಿನ ಕಂಬಕ್ಕೆ  ಡಿಕ್ಕಿ ಹೋಡೆದು ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದನು. ನಾನು ಕೆರಿಬೋಸಗಾ ಕ್ರಾಸ ಹತ್ತಿರ ಬಂದು ನೋಡಲಾಗಿ  ಲೈಟಿನ ಕಂಬದ ಹತ್ತಿರ ಅಂಗಾತವಾಗಿ ಬಿದಿದ್ದು ಎದೆಗೆ, ಪಕ್ಕೆಗೆ ಭಾರಿಗುಪ್ತ ಪೆಟ್ಟಾಗಿದ್ದು  ಬಲಮೊಳಕೈ ಮುರಿದಂತೆ ಆಗಿದ್ದು ಸ್ಥಳದಲ್ಲಿ ಮೃತಪಟ್ಟಿದ್ದು ನಿಜವಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 277/2012 ಕಲಂ 279 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಪ್ರದೀಪ ತಂದೆ ವೈಜನಾಥ ಭಾವೆ ವಯ|| 20 ವರ್ಷ, ಜಾ|| ಮಾದಿಗ. ಸಾ|| ಬೋರಬಾಯಿ ನಗರ ಬ್ರಹ್ಮಪೂರ ಗುಲಬರ್ಗಾರವರು  ಮ್ಮ ಬಡಾವಣೆಯ ವಿಕ್ರಮ ತಂದೆ ವಿಟ್ಠಲ್ ಈತನು ತನ್ನ ತಂಗಿ ಪ್ರತಿಮಾ ಇವಳಿಗೆ ಬಹಳ ದಿವಸಗಳಿಂದ ಚುಡಾಯಿಸುತ್ತಾ ಇದ್ದನು. ಅದಕ್ಕೆ ಈ ರೀತಿ ಮಾಡುವದು ಸರಿಯಲ್ಲ ಅಂತ ಹೇಳಿದ್ದಕ್ಕೆ, ವಿಕ್ರಮ ಈತನು ನನ್ನ ಜೊತೆ ತಕರಾರು ಮಾಡುತ್ತಿದ್ದನು. ದಿನಾಂಕ 01-09-2012 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ಮತ್ತು ನನ್ನ ಜೊತೆಯಲ್ಲಿ ತನ್ನ ಗೆಳೆಯರಾದ ಸಂತೋಷ ಮತ್ತು ಶಿವಕುಮಾರ ಇವರೊಂದಿಗೆ ಬ್ರಹ್ಮಪೂರ ಬಡಾವಣೆಯ ಯಂಕವ್ವ ಮಾರ್ಕೆಟ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ, ವಿಕ್ರಮನ ತಂದೆ ವಿಟ್ಠಲ ಈತನು ತನ್ನ ಜೊತೆಯಲ್ಲಿ ಕಾಂತು ನಾಟಿಕಾರ್, ಮಹಾಂತೇಶ ನಾಟಿಕಾರ್, ಪ್ರಶಾಂತ @ ಪರಶು ನಾಟಿಕಾರ್, ವಿಜಯಕುಮಾರ ತಂದೆ ವಿಟ್ಠಲ್ ಹಾಗು ರಾಜಕುಮಾರ ತಂದೆ ವಿಟ್ಠಲ್ ಎಲ್ಲರೂ ಕೂಡಿಕೊಂಡು ತಮ್ಮ ಕೈಯಲ್ಲಿ ಬಾಟ್ಲಿ, ಕ್ರಿಕೆಟ್ ಸ್ಟಂಪ್ ಹಾಗು ಬಡಿಗೆಗಳಿಂದ ಬಂದವರೇ, ನನಗೆ ತನ್ನ ಕೈಯಲ್ಲಿದ್ದ ಬಾಟ್ಲಿಯಿಂದ ತಲೆಯ ಮೇಲೆ ಹೊಡೆದು ರಕ್ತ ಗಾಯಪಡಿಸಿದರು. ಅವನ ಜೋತೆಯಲ್ಲಿದ್ದವರು ಕ್ರಿಕೆಟ್ ಸ್ಟಂಪದಿಂದ ಮತ್ತು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 64/2012 ಕಲಂ 143, 147, 148, 341, 323, 324, 504, 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: