ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ನನ್ನ ಹಿರಿಯ ಮಗ ಆನಂದ ವಯಾ:26 ವರ್ಷ
ಈತನು ನಮ್ಮ ಮನೆಯ ಮೋಟಾರ ಸೈಕಲ್ ನಂ: ಕೆಎ32
ಕ್ಯೂ 2218 ನೇದ್ದರ ಮೇಲೆ ತನ್ನ ಗೆಳೆಯರ ಹತ್ತಿರ ಹೋಗಿ ಬರುತ್ತೆನೆ. ಅಂತಾ ಹೇಳಿ ಹೋಗಿದ್ದನು.
ಆತನು ಮನೆಗೆ ಬರಲಿಲ್ಲಾ ಆತನ ದಾರಿ ಕಾಯುತ್ತಾ ಕುಳಿತಿರುವಾಗ ಮಧ್ಯರಾತ್ರಿ 12-30 ಗಂಟೆಯ
ಸುಮಾರಿಗೆ ನನ್ನ ಅಳಿಯ ರಾಜೇಶ ಈತನು ನಮ್ಮ ಮನೆಗೆ ಫೋನಮಾಡಿ ಜಗತ ಸರ್ಕಲ್ ದಿಂದ ಗೋವಾ ಹೊಟೇಲ ರೋಡ
ಮಧ್ಯದಲ್ಲಿ ಬರುವ ಮೋರೆ ಆಸ್ಪತ್ರೆ ಕ್ರಾಸ್ ಹತ್ತಿರ ಆನಂದ ಈತನು ಜಗತ ಸರ್ಕಲ್ ಕಡೆಯಿಂದ ಗೋವಾ
ಹೊಟೇಲ ಕಡೆಗೆ ಹೋಗುವಾಗ ಮೋರೆ ಆಸ್ಪತ್ರೆ ರೋಡಿನಲ್ಲಿ ಅಟೋರೀಕ್ಷಾ ನಂ:ಕೆಎ 32 -8554 ನೇದ್ದರ
ಚಾಲಕ ತನ್ನ ಅಟೋವನನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಕ್ಕೆ
ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಟೋ ಸ್ಥಳದಲ್ಲಿಯೇ ಬಿಟ್ಟು ಚಾಲಕ ಓಡಿ ಹೋಗಿದ್ದು. ಆನಂದ ಈತನಿಗೆ
ಎಡಕಣ್ಣಿನ ಮೇಲೆ ರಕ್ತಗಾಯ ತಲೆಗೆ ಪೆಟ್ಟು ಬಿದ್ದು
ಬಾಯಿಂದ ವಾಂತಿಯಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಸದರ ಘಟನೆಯು ರಾತ್ರಿ 00=15 ಗಂಟೆಗೆ
ಜರುಗಿದ್ದು ಅಂತಾ ತಿಳಿಸಿದಾಗ ನಾನು ಮತ್ತು ನನ್ನ ಮಗ ಆದರ್ಶ ಇಬ್ಬರು ಸ್ಥಳಕ್ಕೆ ಬಂದು ನೋಡಲು
ನನ್ನ ಮಗ ಆನಂದ ಈತನು ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾವೆಲ್ಲರೂ ಸರ್ಕಾರಿ
ಆಸ್ಪತ್ರೆಗೆ ಬಂದು ನೋಡಿದೆವು, ಸದರಿ ಅಟೋ ಚಾಲಕನ
ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಂತಾ ಶ್ರೀ ಕಮಲಾಕರ ತಂದೆ ವೀರಭದ್ರಪ್ಪ ಯಲಕಪಳ್ಳಿ ಸಾ: ಮಹಾಲಕ್ಷ್ಮಿ ಲೇಔಟ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ
ಠಾಣಾ ಗುನ್ನೆ ನಂ:87/2012 ಕಲಂ:279, 304 (ಎ) ಐಪಿಸಿ ಸಂಗಡ 187 ಐ,ಎಮ್.ವಿ
ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳದಿಂದ ಸಾವು:
ಚಿತ್ತಾಪೂರ ಪೊಲೀಸ್ ಠಾಣೆ: ಶ್ರೀ ಗಂಗಾರಾಮ ತಂದೆ ಭೀಮರಾವ ದಳಪತಿ ಸಾ|| ಹುಳಗೋಳ ತಾ|| ಸೇಡಂ ರವರು ನನ್ನ ಮಗಳಾದ
ಯಶೋಧಾ ಇವಳಿಗೆ ದಿನಾಂಕ:10-05-2004 ರಂದು ಚಿತ್ತಾಪೂರದ ರವಿ ತಂದೆ ಶಾಂತಪ್ಪ ಬಂದಳ್ಳಿ ಇವರ
ಜೋತೆ ಸಾಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ನಂತರ ಅವಳ ಗಂಡ ರವಿ ಮತ್ತು ಅತ್ತೆ ಮಲ್ಲಮ್ಮ
ಹಾಗು ಮೈದುನರಾದ ವೆಂಕಟೇಶ, ಸಾಬಣ್ಣ ಇವರು ಅವಾಚ್ಯ ಶಬ್ದದಿಂದ ಬೈದು ಹೊಡೆ ಬಡೆ ಮಾಡುತ್ತ ಮೈದುನರಾದ ವೆಂಕಟೆಶ ಮತ್ತು ಸಾಬಣ್ಣ ಇವರೂ ಕೂಡಾ ಕೆಟ್ಟ
ವರ್ತನೆಯಿಂದ ವರ್ತಿಸುವದು ಮಲ್ಲಮ್ಮ ಅತ್ತೆ ಕೂಡಾ ಎಲ್ಲರೂ ಅವಳನ್ನು ಸರಿಯಾಗಿ ನೋಡಕೊಳ್ಳದೆ
ದೈಹಿಕ ಹಾಗು ಮಾನಸಿಕ ಕಿರುಕುಳ ಕೊಡುತ್ತಾ ಬಂದಿದ್ದು ಅವರ ಕಿರುಕುಳ ತಾಳಲಾರದೇ ಮಗಳು ಯಶೋಧಾ
ಇವಳು ದಿನಾಂಕ:07-09-2012 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ವಿಷ ಸೇವನೆ
ಮಾಡಿ ಮೃತಪಟ್ಟಿರುತ್ತಾಳೆ. ವಿನಾಃಕಾರಣ ನನ್ನ ಮಗಳಿಗೆ ದೈಹಿಕ ಹಾಗು ಮಾನಸಿಕ ಕಿರುಕುಳ ಕೊಟ್ಟಂತಹ
ಗಂಡ ರವಿ ಅತ್ತೆ ಮಲ್ಲಮ್ಮ ಮೈದುನ ವೆಂಕಟೇಶ
ಮತ್ತು ಸಾಬಣ್ಣ ಇವರ ಮೇಲೆ ಕಾನೂನು ಪ್ರಕಾರ ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ:80/2012 ಕಲಂ 498(ಎ), 306, ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಶಿವಕುಮಾರ ತಂದೆ ಸೈಬಣ್ಣ ಸಾವಳಗಿ ಕೆಲಸ ಸಾ: ಶರಣಸಿರಸಗಿ ರವರು ದಿನಾಂಕ:09/09/2012 ರಂದು ಮದ್ಯಾಹ್ನ4-30 ಗಂಟೆಯ ಸುಮಾರಿಗೆ ನಾನು ಮಲ್ಲಪ್ಪ
ತಂದೆ ಹಣಮಂತ ತಂಬಾಕವಾಡಿ,ಹಣಮಂತ ತಂದೆ ಹೊನ್ನಪ್ಪ ತಂಬಾಕವಾಡಿ ಸಾ: ಇಬ್ಬರೂ ಶರಣಸಿರಸಗಿ ರವರ ಹೊಟೇಲಿಗೆ ಹೋಗಿ ಚಾಹ ಕೇಳಿದಾಗ ಹೊಟೇಲ ಬಾಕಿ
500/- ರೂಪಾಯಿ ಕೊಡು ಅಂತಾ
ಅವ್ಯಾಚ್ಯವಾಗಿ ಬೈದು ರಾಡಿನಿಂದ ತಲೆಗೆ , ಕೈಯಿಂದ ಮುಷ್ಠಿ
ಮಾಡಿ ಬಾಯಿಗೆ ಮೈಗೆ ಹೊಡೆಬಡೆ ಮಾಡಿರುತ್ತಾರೆ ಅಂತಾ
ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 287/2012 ಕಲಂ 504 324 323 506 (2) ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment