Police Bhavan Kalaburagi

Police Bhavan Kalaburagi

Tuesday, September 18, 2012

GULBARGA DISTRICT REPORTED CRIMES


ಮಟಕಾ ಜೂಜಾಟ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ:17-09-2012 ರಂದು ರಾತ್ರಿ 7-45 ಗಂಟೆಗೆ ಶ್ರೀ ಎಸ್.ಎಸ್. ಹುಲ್ಲೂರ್ ಪಿ.ಐ ಡಿಸಿಐಬಿ ಘಟಕ ಗುಲಬರ್ಗಾರವರು ತಮ್ಮ ಸಿಬ್ಬಂದಿಯವರು ಮದಿನಾ ಕಾಲೋನಿಯಲ್ಲಿ ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಪಡೆದುಕೊಂಡು ದಾಳಿ ಮಾಡಿ, ಶಫಿಖಾನ್ ಈತನಿಗೆ ವಶಕ್ಕೆ ತೆಗೆದುಕೊಂಡು ಅವನ ಹತ್ತಿರ ಮಟಕಾ ನಂಬರ ಬರೆದ ಚೀಟಿ, ನಗದು ಹಣ 1750/-ರೂಪಾಯಿಗಳು, ಒಂದು ಬಾಲ್ ಪೆನ್ ಮತ್ತು ಒಂದು ಎಮ್.ಟಿ.ಎಸ್ ಮೊಬೈಲ್ ಪಂಚರ ಸಮಕ್ಷಮ ಜಪ್ತಿ ಮಾಡಿದ್ದರ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 68/2012 ಕಲಂ 420 ಐಪಿಸಿ ಸಂಗಡ 78 (3) ಕರ್ನಾಟಕ ಪೊಲೀಸ್ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ ಗುಲಬರ್ಗಾ: ಶ್ರೀ ಮೋಹನ ತಂದೆ ಸಚಿನ ನಾರಾಯಾಣರಾವ  ಕರ್ರಿ ಉ||ಸಾಯಿ ಶ್ರೀ ಕಂಪನಿಯಲ್ಲಿ ಸುಪರವೈಜರ  ಕೆಲಸ ಸಾ||ಜಗನಾಥಪೂರಂ ಕಾಕಿನಾಡ ತಾ||ಕಾಕಿನಾಡ ಜಿ: ಪೂರ್ವ ಗೋದಾವರ (East Godavari) ಆಂದ್ರ ಪ್ರದೇಶ ಹಾ||ವ|| ಸಾಯಿ ಶ್ರೀ ಕಂಪನಿ ಪಟ್ಟಣ ಸೀಮೆ ಸ್ಟೇಶನ ಗಾಣಗಾಪೂರ ರೋಡ ಗುಲಬರ್ಗಾ ರವರು ದಿನಾಂಕ:17/09/2012 ರಂದು ರಾತ್ರಿ 7-30 ಗಂಟೆ ಸುಮಾರಿಗೆ ನಮ್ಮ ಸಾಯಿ ಶ್ರೀ ಕಂಪನಿಯಲ್ಲಿ ಕೆಲಸ ಮಾಡುವ ರಾಜು ತಂದೆ ಕೃಷ್ಣಪ್ಪಾ ಸಾ: ಹೈದ್ರಬಾದ (ಎಪಿ) ಮತ್ತು  ಮಂಜುನಾಥ ತಂದೆ ನಾಗನಗೌಡ ಇವರಿಬ್ಬರು ಕೂಡಿಕೊಂಡು ಪಟ್ಟಣ ಗ್ರಾಮ ಕ್ರಾಸಿನ ದಾಬಾಕ್ಕೆ ಊಟ ಮಾಡಲು ಸ್ಟೇಶನ ಗಾಣಗಾಪೂರ ರೋಡ ಕ್ರಾಸದಿಂದ ಪಟ್ಟಣಕ್ಕೆ ಬರುವಾಗ ಟೋಲ ಗೇಟ ದಾಟಿ ಮುಂದೆ ಬರುತ್ತಿರುವಾಗ ಮಂಜುನಾಥ ಇತನು ನಡೆಸುತಿದ್ದ ಮೋಟಾರ ಸೈಕಲ ನಂ ಎಪಿ 5 ಎಇ 2140 ನೇದ್ದನ್ನು  ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಸ್ಪೀಡ ಕಂಟ್ರೋಲ್ ಮಾಡುವದಕ್ಕೆ ಆಗದೆ ಮುಂದೆ ಹೊಗುತಿದ್ದ  ಎತ್ತಿನ ಗಾಡಿಗೆ  ಡಿಕ್ಕಿ ಹೊಡೆದು ಕೆಳಗೆ ಬಿದಿದ್ದು  ಅವರಿಗೆ ಭಾರಿ ಗಾಯಗಳಾಗಿ ರಾಜು ಇತನು  ಸ್ಥಳದಲ್ಲಿಯೇ  ಮೃತಪಟ್ಟಿದ್ದು  ಮತ್ತು  ಮಂಜುನಾಥ ಇತನಿಗೆ ಉಪಚಾರ ಕುರಿತು ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ತರುವಾಗ  ಮಧ್ಯದ ಮಾರ್ಗದಲ್ಲಿ ಮೃತಪಟ್ಟಿದ್ದು ಇರುತ್ತದೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:295/2012 ಕಲಂ 279 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: