ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ ನಿಲಮ್ಮಾ
ಗಂಡ ಲಕ್ಕಪ್ಪ ಉ: ಅಡಿಗೆ ಕೆಲಸ ಸಾ:
ಹನುಮಾನ ದೇವಸ್ಥಾನದ ಹತ್ತಿರ ಸುಂದರ ನಗರ ಗುಲಬರ್ಗಾರವರು ನಾನು ದಿನಾಂಕ:11-09-2012
ರಂದು 9-30 ಗಂಟೆ ಸುಮಾರಿಗೆ ಆರ.ಟಿ.ಓ.ಕ್ರಾಸ್ ದಿಂದ ಜಿ.ಜಿ.ಹೆಚ್. ಸರ್ಕಲ್ ಮೇನ ರೋಡಿನ ಜಿಲ್ಲಾ ಸರಕಾರಿ
ಆಸ್ಪತ್ರೆಯ ಎದುರಿನ ಮೇನ ಗೇಟ ಎದುರು ನಡೆದುಕೊಂಡು ಹೋಗುತ್ತಿದ್ದಾಗ ಜಿ.ಜಿ.ಹೆಚ್.ಸರ್ಕಲ್
ಕಡೆಯಿಂದ ಅಟೋರೀಕ್ಷಾ ನಂ: ಕೆಎ 32 ಎ 8612 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ಅಟೋರೀಕ್ಷಾ ಸ್ಥಳದಲಿ ಬಿಟ್ಟು ಅಟೋಚಾಲಕ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 89/2012 ಕಲಂ,
279, 337 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಮಂಗಳ ಸೂತ್ರ ದರೋಡೆ ಮಾಡಿದ
ಬಗ್ಗೆ:
ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀಮತಿ. ಶೋಭಾದೇವಿ ಗಂಡ ಕೃಷ್ಣ ನಿರಾಳೆ ಸಾ|| ನಂದಗೊಕುಲ ನಿವಾಸ ಲಕ್ಷ್ಮಿನಾರಾಯಣ ನಿವಾಸ
ಗುಲಬರ್ಗಾರವರು ದಿನಾಂಕ.11.09.2012 ರಂದು ಮದ್ಯಾಹ್ನ 12.15 ಗಂಟೆಗೆ ಮನೆಯ
ಕಂಪೌಂಡಿನಲ್ಲಿರುವಾಗ ಸೈಕಲ ಮೊಟಾರ ಮೇಲೆ ಇಬ್ಬರು ಅಪರಿಚಿತ ವ್ಯೆಕ್ತಿಗಳು ಬಂದು ಮನೆಯ ಮುಂದೆ
ನಿಲ್ಲಿಸಿ, ಅದರಲ್ಲಿ ಒಬ್ಬನು ಸೈಕಲ್ ಮೋಟಾರನಿಂದ ಇಳಿದು ಗೇಟ್ ಹತ್ತಿರ ಬಂದು ಶೀಲಾ
ಮೌಸಿ ಮನೆ ಎಲ್ಲಿದೆ ಎಂದು ಕೇಳಿದಾಗ ನಾನು ಗೇಟ ತಗೆದು ಹೋರಗೆ ಬಂದು ವಿಚಾರಿಸುತ್ತಿರುವಾಗ
ನನ್ನ ಕೊರಳಿಗೆ
ಕೈಹಾಕಿ ಮಂಗಳ ಸೂತ್ರ ಕಿತ್ತಿಕೊಳ್ಳುವಾಗ ನಾನು ನನ್ನ ಕೈಯಿಂದ ಮಂಗಳ ಸೂತ್ರ
ಹಿಡಿದುಕೊಂಡಿದ್ದು ಅರ್ದ ಮಂಗಳ ಸೂತ್ರ ಕಿತ್ತಿಕೊಂಡು ಸೈಕಲ್ ಮೊಟಾರ್ ಮೇಲೆ ಕುಳಿತು ಓಡಿ
ಹೋದರು, ನಾನು ಕೂಗಾಡುವದನ್ನು ಕೇಳಿಸಿಕೊಂಡ ಅವರ ಸೊಸೆ ಶ್ವೇತಾ ಒಡಿ ಬಂದು ಸದರಿಯವರಿಗೆ ಬೆನ್ನು ಹತ್ತಿದರು
ಅವರು ಪರಾರಿಯಾಗಿರುತ್ತಾರೆ
ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.115/2012 ಕಲಂ.392 ಐ.ಪಿ.ಸಿ ಪ್ರಕಾರ
ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment