Police Bhavan Kalaburagi

Police Bhavan Kalaburagi

Friday, September 14, 2012

GULBARGA DISTRICT REPORTED CRIMES


ಅಪಹರಣ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ  ಶಕುಂತಲಾ ಗಂಡ ಚಂದ್ರಕಾಂತ ಒಂಟಿ ಸಾ: ಶಾಂತಿ ನಗರ ಗುಲಬರ್ಗಾರವರು ನಮಗೆ 4 ಜನ ಮಕ್ಕಳಿದ್ದು  ಅವರಲ್ಲಿ  ಹಿರಿಯವಳಾದ ಅಶ್ವಿನಿ ಇವಳು ಹಿರಿಯ ಮಗಳಿದ್ದು ,ಸರಕಾರಿ ಮಹಿಳಾ ಕಾಲೇಜನಲ್ಲಿ  ದ್ವೀತಿಯ ಪಿ.ಯು.ಸಿ ಓದುತ್ತಿದ್ದಾಳೆ.  ಪ್ರತಿದಿನ ಕಾಲೇಜ ಮುಗಿಸಿಕೊಂಡು ಮನೆಗೆ ಬಂದು ಸಾಯಾಂಕಾಲ್ ಟೈಪಿಂಗ್ ಕ್ಲಾಸಿಗೆ  ಹೋಗುತ್ತಿದ್ದಳು, ದಿನಾಂಕ: 27.08.2012 ರಂದು ಕಾಲೇಜದಿಂದ ಮನೆಗೆ ಬಂದು  4.00 ಗಂಟೆಗೆ ಟೈಪಿಂಗ್ ಕ್ಲಾಸಿಗೆ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು ಮನೆಗೆ ಬರದೇ ಇದ್ದಾಗ ನಾವು ಗಾಬರಿಗೊಂಡು ಟೈಪಿಂಗ್ ಇನ್ಸಟ್ಯೂಟ ಹೋಗಿ ವಿಚಾರಿಸಲಾಗಿ ಈ ದಿನ ನಿಮ್ಮ ಮಗಳು ಅಶ್ವಿನಿ ಟೈಪಿಂಗ ಕ್ಲಾಸಿಗೆ ಬಂದಿರುವುದಿಲ್ಲಾ ಅಂತಾ ತಿಳಿಯಿತು. ಅಶ್ವಿನಿ ಗೆಳತಿಯರಾದ ಹೀನಾ ಮತ್ತು  ಸುಶ್ಮಾ ರವರಿಗೆ ವಿಚಾರಿಸಲಾಗಿ ನಿಮ್ಮ ಮಗಳು ವಿನೋದ ಸಿರನೂರ ಎಂಬುನೊಂದಿಗೆ ಹೋಗಿರುತ್ತಾಳೆ ಅಂತಾ ತಿಳಿಸಿದ್ದು, ವಿನೋದ ತಂದೆ ಗಿಡ್ಡಪ್ಪಾ ಅಟೋ ಚಾಲಕ ಸಾ|| ಸಿರನೂರ ಇತನು ನನ್ನ ಮಗಳಿಗೆ ಅಪಹರಿಸಿಕೊಂಡು ಹೋಗಿರುತ್ತಾನೆ ಆತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 68/2012  ಕಲಂ 366 (ಎ) ಐ.ಪಿ.ಸಿ ಪ್ರಕಾರ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ, ಗೌರಮ್ಮ ಗಂಡ ಸಿದ್ದಣ್ಣ  ಸಾ: ಎಂ.ಐ.ಜಿ  ಕೆ.ಹೆಚ.ಬಿ ಕಾಲೋನಿ   ಪಿಲ್ಟರ್ ಬೇಡ  ಗುಲಬರ್ಗಾ ರವರು ದಿನಾಂಕ:05-09-1999 ರಂದು ಗೋಳಾ(ಬಿ) ಗ್ರಾಮದ ಸಿದ್ದಣ್ಣ ದಸ್ತಾಪೂರ ಇವರೊಂದಿಗೆ ಶಹಾಬಾದ ನಗರದಲ್ಲಿ ಮದುವೆ ಮಾಡಿಕೊಟ್ಟಿದ್ದು,  ಮದುವೆಯ ಕಾಲಕ್ಕೆ  51,000/-ನಗದು ಹಣ  ಮತ್ತು 15 ತೊಲೆ ಬಂಗಾರ ಕೊಟ್ಟು ಮದುವೆ ಮಾಡಿಕೊಟ್ಟಿದ್ದು  ಮದುವೆಯಾದ  ಕೇವಲ 8-10 ದಿವಸಗಳಲ್ಲಿ ಬಂಗಾರ ವರದಕ್ಷೀಣೆ ಕಡಿಮೆ ಕೊಟ್ಟಿರುತ್ತೀರಿ ಅಂತಾ ವಿನಾಃಕಾರಣ  ನನ್ನ ಗಂಡ ಸಿದ್ದಣ್ಣ ಅತ್ತೆ ನಾಗಮ್ಮ ಮಾವ ಬಸವಕಲ್ಯಾಣ ಇವರೆಲ್ಲರೂ ನನಗೆ ದೈಹಿಕ ಮಾನಸಿಕ ಕಿರುಕುಳ ಕೊಡಲು ಪ್ರಾರಂಭಿಸಿದರು. ಈ ಬಗ್ಗೆ ನಮ್ಮ ತಂದೆಗೆ ನನ್ನ ಅಣ್ಣ ಸಿದ್ದಲಿಂಗ ಇವರಿಗೆ ವಿಷಯ ತಿಳಿಸಿದ್ದು ಇವರು ನನ್ನ ಗಂಡನ ಮನೆಗೆ ಬಂದು ನನ್ನ ಗಂಡ ಅತ್ತೆ, ಮಾವ ಇವರಿಗೆ ಮದುವೆಯ ಕಾಲಕ್ಕೆ ಹಣ ಬಂಗಾರ ಕೊಟ್ಟಿರುತ್ತೇವೆ, ನನ್ನ ಮಗಳಿಗೆ ತೊಂದರೆ ಕೋಡಬೇಡಿರಿ ಅಂತಾ ಹೇಳಿ ಹೋಗಿದ್ದರು. ಸುಮಾರು 1 ವರ್ಷದ ಹಿಂದೆ ನನ್ನ ಗಂಡ ಅತ್ತೆ ಮತ್ತು ಮಾವ ಇವರೆಲ್ಲರೂ ನನ್ನ ಅಣ್ಣ ರೇವಣಸಿದ್ದಪ್ಪನ ಮಗನಾದ ಶಂಕರ ಇತನ ತೊಟ್ಟಿಲು ಕಾರ್ಯಕ್ರಮಕ್ಕೆ ತವರು ಮನೆಗೆ ಕಳುಹಿಸುವಾಗ  ನನಗೆ   ಇನ್ನು ಬಂಗಾರ ಮತ್ತು ಹಣ ತೆಗೆದುಕೊಂಡು ಬಾ ಅಂತಾ ಇಲ್ಲವಾದರೆ ನೀನು ವಾಪಸ ನಮ್ಮ ಮನೆಗೆ ಬರಬೇಡ ಅಂತಾ ಅಂದು ನಾವು ಕರೆಯಲು ಬರುವವರೆಗೆ ಬರಬೇಡ ಅಂತಾ ಹೇಳಿ ಹೆದರಿಸಿ ಕಳುಹಿಸಿರುತ್ತಾರೆ. ನಾನು ಒಂದು ವರ್ಷದಿಂದ ಕೆ,ಹೆಚ.ಬಿ ಕಾಲೋನಿಯ ನನ್ನ ತಂದೆಯ ಮನೆಯಲ್ಲಿ ವಾಸವಾಗಿರುತ್ತೇನೆ.ದಿನಾಂಕ:12-09-2012 ರಂದು ರಾತ್ರಿ 11-00 ನನ್ನ ಗಂಡ ಸಿದ್ದಣ್ಣ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದ್ದು ಮನೆಯಲ್ಲಿಯ ಸೋಫಾ ಸೆಟ ಮತ್ತು ಕಿಡಕಿ ಬಾಗಿಲುಗಳಿಗೆ ಕಲ್ಲಿನಿಂದ ಹೊಡೆದು ಮುರಿದು ಹಾಕಿ ಲುಕ್ಸಾನ  ಮಾಡಿರುತ್ತಾನೆ.  ಅಂತಾ  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂ:67/2012 ಕಲಂ, 498 (ಎ) 323, 427, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: