Police Bhavan Kalaburagi

Police Bhavan Kalaburagi

Monday, October 15, 2012

BIDAR DISTRICT DAILY CRIME UPDATE 15-10-2012


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 15-10-2012

ಮುಡಬಿ ಪೊಲೀಸ್ ಠಾಣೆ ಗುನ್ನೆ ನಂ. 85/2012 ಕಲಂ 279, 337, 3383 ಐಪಿಸಿ :-

ದಿನಾಂಕ: 14-10-2012 ರಂದು ಮದ್ಯಾನದ ವೇಳೆಗೆ ಫಿರ್ಯಾದಿ ಶ್ರೀ ಸಿದ್ದಪ್ಪಾ ತಂದೆ ನಾಗಪ್ಪಾ ಕೋಟಾಪುರೆ ವಯ: 30 ವರ್ಷ ಉ: ಡ್ರೈವರ್  ಜಾ:ಕುರುಬ ಸಾ:ಸಾತಖೇಡ ತಾ:ಚಿತ್ತಾಪೂರ ಜಿ:ಗುಲಬಗರ್ಾ  ಇವರು  ತನ್ನ ಹೆಂಡತಿಯ ತಂಗಿಯಾದ ಸೋನಾಲಿ ಇವಳಿಗೆ ಚಂಡಕಾಪೂರ ಗ್ರಾಮಕ್ಕೆ ಬಿಡ್ಡುವ ಕುರಿತು ಮೋ.ಸೈ.ನಂ ಕೆ.ಎ 39 ಎಚ 9020  ನೇದರ ಮೇಲೆ ಮುಡಬಿ ಕಮಲಾಪೂರ ರೋಡಿನ ಮೇಲೆ ಹೋಗುವಾಗ ಎಕ್ಕಲೂರ ಕ್ರಾಸ ಹತ್ತಿರ ಎದುರಿನಿಂದ ಹೀರೋ ಹುಂಡಾ ಮೊ.ಸೈ.ನಂ ಎಮ್.ಎಚ 12 ಎ.ಜಿ 3648 ನೇದರ ಚಾಲಕ ವಿಜಯಕುಮಾರ ತಂದೆ ಗುಂಡಪಾ ಈತನು ತ್ನನ ಮೋಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೋಡೆದ ಪರಿಣಾಮ ಫಿಯರ್ಾದಿಯ ಬಲಗೈ ಅಂಗೈಗೆ ರಕ್ತಗಾಯ ಮತ್ತು ಫಿರ್ಯಾದಿ ಮಗನಾದ ಸುಮಿತ ವಯ:4 ವರ್ಷ ಈತನಿಗೆ ಬಲಗಣ್ಣಿನ ಮೇಲೆ ಮತ್ತು ಹಣೆಯ ಮೇಲೆ ಭಾರಿ ರಕ್ತಗಾಯ ವಾಗಿರುತ್ತದೆ. ಮತ್ತು ಫಿರ್ಯಾದಿ ಹೆಂಡತಿಯ ತಂಗಿಯಾದ ಸೋನಾಲಿಗೆ ಯಾವುದೆ ರೀತಿಯ ಗಾಯವಾಗಿರುವದಿಲ್ಲ. ಅಂತ ಕೊಟ್ಟ ಫಿರ್ಯಾದಿಯ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಬಸವ ಕಲ್ಯಾಣ ನಗರ ಪೊಲೀಸ್ ಠಾಣೆ ಗುನ್ನೆ ನಂ. 140/2012 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 14/10/2012 ರಂದು 1830 ಗಂಟೆಗೆ ಖಚಿತ ಬಾತ್ಮಿ ಬಂದ ಮೇರೆಗೆ ಬಸವಕಲ್ಯಾಣ ನಗರದ ಕುಶಾಲ ನಗರ ಚರ್ಚ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಹಚ್ಚಿ ಪಣತೊಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಪಡೆದುಕೊಂಡು ಸಿಬ್ಬಂದಿ ಹಾಗೂ ಪಂಚರೊಂದಿಗೆ ರಾಜಾ ಬಾಗ್ ಶೇರ ಸವಾರ ದಗರ್ಾ ರಸ್ತೆಯ ಮೂಲಕ ಹೋಗಿ ಗದಗಿ ಮಠದ ಕಡೆಗೆ ಹೋಗುವ ರಸ್ತೆಯ ಮೇಲೆ ಕರೀಮ ನಗರ ಹತ್ತಿರ ಜೀಪ ನಿಲ್ಲಿಸಿ ಅಲ್ಲಿಂದ ಎಲ್ಲರು ಇಳಿದು ಕಾಲ ನಡಿಗೆಯಿಂದ ಹೋಗಿ ಮರೆಯಾಗಿ ನೋಡಲು 4. ಜನರು ಇಸ್ಪೀಟ್ ಜೂಜಾಟ ಮಾಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು 16,45 ಗಂಟೆಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತರುಗಳಾದ ಹಸನ ತಂದೆ ಮಹೇತಾಬಸಾಬ ಶೇಖ ಹಾಗು ಇನ್ನು ಮೂವರು ಎಲ್ಲರು ಸಾ; ಶಹಾಪೂರ ಗಲ್ಲಿ ಬಸವಕಲ್ಯಾಣ ಇವರುಗಳನ್ನು ದಸ್ತಗಿರಿ ಮಾಡಿಕೊಂಡು ಅವರಿಂದ ನಗದು ಹಣ 800/- ರೂಪಾಯಿಗಳು, 52, ಇಸ್ಪೀಟ್ ಎಲೆಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ ಠಾಣೆ ಗುನ್ನೆ ನಂ. 100/2012 ಕಲಂ 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 14/10/2012 ರಂದು 1845 ಗಂಟೆಗೆ ರಾ.ಹೆ ನಂ 9 ರ ಮೇಲೆ ಮಂಗಲಗಿ ಗ್ರಾಮದ ಅಂಬೇಡ್ಕರ ಚೌಕ ಹತ್ತಿರ ಒಬ್ಬ ಅಪರಿಚಿತ ಮೋಟಾರ ಸೈಕಲ ಸವಾರನು ಮನ್ನಾಎಖೇಳ್ಳಿ ಕಡೆಯಿಂದ  ಅತೀ ವೇಗೆ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಕೊಂಡು ಬಂದು ಸೈಕಲ ಮೇಲೆ ಹಿಂದೆ ಕುಳಿತ ಫಿರ್ಯಾದಿ ಶ್ರೀ ಗುರನಾಥರಡ್ಡಿ ತಂದೆ ಅಣ್ಣಾರಡ್ಡಿ ರಡ್ಡಿಗಾರ ವಯ 55 ವರ್ಷ ಉದ್ಯೋಗಃ ಒಕ್ಕಲುತನ ಸಾ// ಮಂಗಲಗಿ ಇವರಿಗೆ ಡಿಕ್ಕೆ ಮಾಡಿದರಿಂದ ಫಿರ್ಯಾದಿಎಡ ಎಡಕಾಲ ಮೊಳಕಾಲಿನ ಕೆಳಗೆ ಎಲುಬಿನ ಮೇಲೆ ಭಾರಿ ಗುಪ್ತಗಾಯ ಮತ್ತು ಎಡಮೋಳಕಾಲಿಗೆ ತರಚಿದ ರಕ್ತಗಾಯ  ಆಗಿರುತ್ತವೆ. ಮತ್ತು ಆರೋಪಿತನು ತನ್ನ ಮೋಟಾರ ಸೈಕಲನ್ನು ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ ಅಂತ ಕೊಟ್ಟ ಫಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಗಾಂಧಿ ಗಂಜ ಪೊಲೀಸ್ ಠಾಣೆ ಬೀದರ ಗುನ್ನೆ ನಂ. 158/2012 ಕಲಂ 392 ಐಪಿಸಿ :-

ದಿನಾಂಕ: 11-10-2012 ರಂದು 17:30 ಗಂಟೆಗೆ ಫಿರ್ಯಾದಿತಳಾದ ಶ್ರೀಮತಿ ಉಷಾಬಾಯಿ ಗಂಡ ಮಚಿಂದ್ರ ಬನಸೋಡೆ 47 ವರ್ಷ ,ಜಾ|| ಎಸ್.ಸಿ ದಲಿತ ಉ|| ಮನೆ ಕೆಲಸ ಸಾ|| ಬಳತ(ಕೆ) ತಾ|| ಔರಾದ ಸದ್ಯ ಶರಣ ನಗರ ಕೆ.ಇ.ಬಿ ರೋಡ ನ್ಯಾಶನಲ್ ಕಾಲೇಜ ಹತ್ತಿರ  ಬೀದರ ಇವರು ತಮ್ಮ ಮಗಳ ಜೊತೆಯಲ್ಲಿ ಬೀದರ ನ್ಯೂ ಆದರ್ಶ ಕಾಲೋನಿಗೆ ತಮ್ಮ ಪರಿಚಯಸ್ಥರ ಮನೆಗೆ ಹೋಗಿ ಮರಳಿ ಮನೆಗೆ ನಡೆದುಕೊಂಡು ಬರುವಾಗ ಬೀದರ ನ್ಯೂ ಆದರ್ಶ ಕಾಲೋನಿಯಲ್ಲಿ ನಿಮರ್ಿಸುತ್ತಿರುವ ರೈಲ್ವೇ ಬ್ರಿಜ್ ಹತ್ತಿರ ರೋಡಿನ ಮೇಲೆ ನಡೆದುಕೊಂಡು ಬರುವಾಗ ಮೂರು ಜನ ಅಪರಿಚಿತ ಸೈಕಲ ಮೋಟಾರ ಸವಾರರು (ಅಂದಾಜು 19 ರಿಂದ 21 ರ ಮಧ್ಯದ ವಯಸುಳ್ಳವರು )ಮೋಟಾರ ಸೈಕಲ್ ಮೇಲೆ ಫಿರ್ಯಾದಿತರ ಎದುರಿನಿಂದ ಬಂದವರೇ ಮೋಟಾರ ಸೈಕಲ್ ಸವಾರರ ಪೈಕಿ ಹಿಂದೆ ಕುಳಿತ ಮೂರನೇಯವನು ಫಿರ್ಯಾದಿತರ ಕೊರಳಲ್ಲಿ ಕೈ ಹಾಕಿ, ಕೊರಳಲ್ಲಿದ್ದ ಒಂದು ಬಂಗಾರದ ಗಂಟನ ಸರ 4 ತೋಲೆಯದು ಅ|| ಕಿ|| 1,20,000=00 ರೂ/- ನೇದು ದೋಚಿಕೊಂಡು ಮೋಟಾರ ಸೈಕಲ್ ಸಮೇತ ಓಡಿ  ಹೋಗಿರುತ್ತಾರೆ ಅಂತ ಕೊಟ್ಟ ಫಿರ್ಯಾದಿನ  ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಗುನ್ನೆ ನಂ. 65/2012 ಕಲಂ 279, 337, 338, ಐಪಿಸಿ ಜೊತೆ 187 ಐಎಮವಿ ಕಾಯ್ದೆ :-

ದಿನಾಂಕ: 13/10/2012 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀ ಜ್ಞಾನದೇವ ತಂದೆ ಯಶವಂತರಾವ ಝಂಡೆ 45 ವರ್ಷ ಸಾ: ಹಾಲಳ್ಳಿ ಇವರ ಮಗ ದಿಗಂಬರ ಈತನು ಕುಶನೂರ ಸಂಗಮ ರೋಡ ಚಾಂದೋರಿ ಪಾಟಿ ಹತ್ತಿರ ಇರುವ ಹಪ್ಸಾ (ಹ್ಯಾಂಡ ಪಂಪ) ದಲ್ಲಿ ನೀರು ಕುಡಿದು ನಮ್ಮ ಹೋಲಕ್ಕೆ ಬರುವಾಗ ಕುಸನೂರ ಕಡೆಯಿಂದ ಒಬ್ಬ ಮೋಟಾರ ಸೈಕಲ ಚಾಲಕನು ತನ್ನ ವಾಹನವನ್ನು ಅತಿ ವೇಗವಾಗಿ ನಿಸ್ಕಾಳಜಿತನದಿಂದ ಚಲಾಯಸಿ ಫಿಯರ್ಾದಿಯ ಮಗ ದಿಗಂಬರ ಇತನಿಗೆ ಡಿಕ್ಕಿ ಮಾಡಿ ಕೇಳಗಿನ ತುಟಿಗೆ ತರಚಿದ ಗಾಯ, ಬಾಯಿಯ ಮೇಲಿನ ಮೂರು ಹಲ್ಲೂಗಳು ಬಿದ್ದಿರುತ್ತವೆ. ಮತ್ತು ಎದೆಯ ಎಡಭಾಗದಲ್ಲಿ ತೊರಚಿದ ಗಾಯವಾಗಿರುತ್ತದೆ. ಡಿಕ್ಕಿ ಮಾಡಿದ ಮೊಟಾರ ಸೈಕಲ ಚಾಲಕನ ಹೆಸರು ಬಾಲಾಜಿ ಸಾ: ಕುಶನೂರ ಅಂತ ಗೊತ್ತಾಯಿತು. ಡಿಕ್ಕಿ ಮಾಡಿದ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲ ಎಬ್ಬಿಸಿ ಚಾಲು ಮಾಡಿಕೊಂಡು ಓಡಿ ಹೋದನು. ಮೋಟಾರ ಸೈಕಲ ನಂ, ಗೊತ್ತಿಲ್ಲಾ. ನನ್ನ ಮಗನಿಗೆ ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೊಂಡು ಶ್ರೀ ಆಸ್ಪತ್ರೆ ಬೀದರದಲ್ಲಿ ತಂದು ಸೇರಿಕ ಮಾಡಿರುತ್ತೇವೆ ಅಂತ ಕೊಟ್ಟ ಫಿರ್ಯಾದು  ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ. 120/2012 ಕಲಂ 279, 338 ಐಪಿಸಿ :-

ದಿನಾಂಕ 14-10-2012 ರಂದು ಫಿರ್ಯಾದಿ ಶ್ರೀಮತಿ ಸುನೀತಾ ಗಂಡ ಶಿವಾಜಿ ರಾಠೋಡ ಸಾ: ನಿಲಮ್ಮನಹಳ್ಳಿ ತಾಂಡಾ ಇವರು ಟೇಕನಿ ಥಾಂಡಾದಲ್ಲಿರುವ ತಮ್ಮ ನೆಂಟರಿಗೆ ಭೇಟ್ಟಿ ಮಾಡಲು ಮುಂಜನೆ 11-30 ಗಂಟೆಗೆ ತನ್ನ ಗಂಡ ಶಿವಾಜಿ ರಾಠೋಡ ರೊಂದಿಗೆ ಮೋಟರ ಸೈಕಲ ನಂ ಕೆಎ-36-ಎಲ್-1933 ನೇದ್ದರ ಮೇಲೆ ಕುಳಿತು ನಿಲಮ್ಮನಳ್ಳಿ ತಾಂಡಾದಿಂದ ಬಿಟ್ಟು ಅಂಬೆಸಾಂಗ್ವಿ ಕ್ರಾಸ ರೋಡ ಮೂಲಕ ಹೋಗುತ್ತಿರುವಾಗ ಮದ್ಯಾಹ್ನ ಅಂದಾಜು 1-00 ಗಂಟೆಗೆ ಬೀದರ ಉದಗೀರ ರೋಡ ಮೇಲೆ ಅಂಬೆಸಾಂಗ್ವಿ ಕ್ರಾಸ ಸಮೀಪ ಇರುವಾಗ ತನ್ನ ಗಂಡ ಶಿವಾಜಿ ಇವರು ಮೋಟಾರ ಸೈಕಲ ನೇದ್ದನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿ ರೋಡಿನ ಮೇಲೆ ಇದ್ದ ಜಂಪಿನಲ್ಲಿ ಒಮ್ಮೇಲೆ ಚಲಾಯಿಸಿದ್ದರಿಂದ ಫಿರ್ಯಾದಿ ಯು ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದಿದರಿಂದ ಬಲಗೈ ಮೊಳಕೈ ಹತ್ತಿರ ಹಾಗೂ ಮುಂಗೈ ಹತ್ತಿರ ಮುರಿದು ಭಾರಿ ಗುಪ್ತಗಾಯವಾಗಿರುತ್ತದೆ. ಅಲ್ಲದೆ 2 ಮೊಳಕಾಲು ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ. ಫಿಯರ್ಾದಿಯ ಗಂಡ ಸ್ವಲ್ಪ ಮುಂದೆ ಹೋಗಿ ನಂತರ  ಬಿದ್ದಿರುವುದನ್ನು ನೋಡಿ ವಾಪಸ್ಸು ಬಂದು ಇಲಾಜ ಕುರಿತು ಒಂದು ಖಾಸಗಿ ವಾಹನದಲ್ಲಿ ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಸಿರುತ್ತಾರೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 234/2012 ಕಲಂ 279, 338 ಐ.ಪಿ.ಸಿ ಜೋತೆ 185,ಎಮ,ವಿ ಕಾಯ್ದೆ :-

ದಿನಾಂಕ 14/10/2012 ರಂದು 13:40 ಗಂಟೆಗೆ ಫಿರ್ಯಾದಿತನಾದ ಸಂಗಶೆಟ್ಟಿ ಇವರು ಸೈಕಲ ಮೇಲೆ ಬೀದರ ಮಹಾವೀರ ವೃತ್ತದ ಹತ್ತಿರ ಹೋಗುವಾಗ ಹಿಂದಿನಿಂದ ಬಸವೇಶ್ವರ ವೃತ್ತದ ಕಡೆಯಿಂದ ಕಾರ ನಂ. ಸಿಜಿ04ಝಡ್ಪಿ4738 ನೇದ್ದರ ಚಾಲಕನಾದ ವೈಜಿನಾಥ ತಂದೆ ವಿರಯ್ಯಾ ಸಾ; ಬೀದರ ಈತನು ಸರಾಯಿ ಕುಡಿದ ಅಮಲಿನಲ್ಲಿ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿಯರ್ಾದಿಗೆ ಡಿಕ್ಕಿ ಹೊಡೆದು ಅಪಘಾತಪಡೆಸಿ ಹಣೆಯಲ್ಲಿ, ಎಡಕಾಲಿಗೆ ಮತ್ತು ಎಡಕೈ ಮೊಳಕೈ ಕೆಳಗೆ ಭಾರಿ ರಕ್ತಗಾಯ ಪಡೆಸಿರುತ್ತಾನೆ. ಅಂತ ಕೊಟ್ಟ ಫಿಯರ್ಾದಿತನ ಮೌಖಿಕ ಹೇಳಿಕೆ ಸಾರಂಶವನ್ನು ಆಸ್ಪತ್ರೆಯಲ್ಲಿ ಪಡೆದುಕೊಂಡು 18:15  ಗಂಟೆಗೆ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಬಗದಲ ಪೊಲಿಸ ಠಾಣೆ ಗುನ್ನೆ ನಂ. 100/2012 ಕಲಂ ಹೆಂಗಸು ಕಾಣೆ :-

ದಿನಾಂಕ : 13/10/2012 ರಂದು 0830 ಗಂಟೆಯ ಸಮಯಕ್ಕೆ ಫಿರ್ಯಾದಿ ಶ್ರೀ ಮಾಣೆಮ್ಮ ಗಂಡ ಜೆಸನ 50 ವರ್ಷ, ಕೂಲಿ ಕೆಲಸ,  ಸಾ/ ಬರೂರ ಇವರ ಮಗಳಾದ ಶ್ರೀಮತಿ ಸುಮಲತಾ ಗಂಡ ಕಿರಣ ಕೊಮಲಾ ವಯ: 22 ವರ್ಷ ಸಾ: ಬರೂರ ತಾ: ಜಿ: ಬೀದರ ರವರು ದಿನಾಂಕ: 12/10/2012 ರಂದು ಸಾಯಂಕಾಲ ತನ್ನ ಗಂಡನ ಜೊತೆಯಲ್ಲಿ ಕಿರಿಕಿರಿ ಮಾಡಿದ ಪ್ರಯುಕ್ತ ಮನೆಯಲ್ಲಿ ಯಾರಿಗು ಏಳದೆ ಕೇಳದೆ ತನ್ನ ಗಂಡನ ಮನೆಯಿಂದ ಹೊದವಳು ಮರಳಿ ಮನೆಗೆ ಬಂದಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿನ  ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 242/2012 ಕಲಂ 279, 338, 304ಎ ಐಪಿಸಿ ಜೊತೆ 187 ಐ.ಎಂ.ವಿ ಕಾಯ್ದೆ :-

ದಿನಾಂಕ: 14-10-2012 ರಂದು ಬೆಳಿಗ್ಗೆ 08-15 ಗಂಟೆಗೆ ಪಿರ್ಯಾದಿ ಶ್ರೀ.ಅಮೃತರಾವ್ ತಂದೆ ವೈಜಿನಾಥ್ ಡೊಂನಗಾಪುರೆ, ವಯಸ್ಸು 45 ವರ್ಷ, ಜಾತಿ: ಲಿಂಗಾಯತ, ವೃತ್ತಿ: ಒಕ್ಕಲುತನ, ಸಾ: ಕೋಳಾರ್ (ಬಿ) ಗ್ರಾಮ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಕೊಟ್ಟ ಸಾರಾಂಶವೆನೆಂದರೆ ದಿನಾಂಕ 13-10-2012 ರಂದು ಸಂಜೆ ವೇಳೆಯಲ್ಲಿ ಮನೆಯಿಂದು ತಮ್ಮ ಹೊಲಗಳಿಗೆ ಹೋಗಿ ಹೊಲದಲ್ಲಿ ಕೆಲಸಗಳನ್ನು ಮುಗಿಸಿಕೊಂಡು ಮರಳಿ ರಾತ್ರಿ 0100 ಗಂಟೆಗೆ ಮನೆಗೆ ಹೋಗುವಾಗ ಸುಭದ್ರಾಬಾಯಿ ಕೆಂಚಾ ರವರ ಹೊಲದ ಹತ್ತಿರ ರೋಡಿನ ಮೇಲೆ ನೋಡಿದಾಗ ರೋಡಿನ ಮೇಲೆ ಒಬ್ಬ ಅಪರಿಚಿತ ವ್ಯಕ್ತಿ ವಯಸ್ಸು 40-45 ವರ್ಷವುಳ್ಳವನಿಗೆ ಯಾವುದೋ ಅಪರಿಚಿತ ವಾಹನವು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಬೀದರ್ ಕಡೆಯಿಂದ ನಡೆಸಿಕೊಂಡು ಬಂದು ಹುಮನಾಬಾದ್ ಕಡೆ ಹೋಗುವಾಗ ಸುಮಾರು ಅರ್ಧ ಫಲರ್ಾಂಗ್ದ ವರೆಗೆ ಎಳೆದುಕೊಂಡು ಹೋಗಿ ಭಾರಿ ಗಾಯ ಪಡಿಸಿ ವಾಹನ ಸಮೇತ ಓಡಿಸಿಕೊಂಡು ಹೋಗಿದ್ದು, ಅಪಘಾತದಿಂದ ಭಾರಿ ಗಾಯವಾಗಿದ್ದರಿಂದ ಹೆಚ್ಚಿನ ರಕ್ತ ಸ್ರಾವವಾಗಿ ಮಾತನಾಡುವ ಸ್ಥತ್ತಿಯಲ್ಲಿ ಇಲ್ಲದ ಕಾರಣ ಫಿಯರ್ಾದಿಯು ರಾತ್ರಿ 108 ಅಂಬ್ಯೂಲೆನ್ಸ್ಗೆ ಕರೆ ಮಾಡಿದಾಗ ಸದರಿ ಅಂಬ್ಯೂಲೆನ್ಸ್ ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ಬಂದು ಅಪಘಾತವಾದ ವ್ಯಕ್ತಿಗೆ ಅಂಬ್ಯೂಲೆನ್ಸ್ಗೆ ಹಾಕಿಕೊಂಡು ಬೀದರ್ ಜಿಲ್ಲಾ ಸಕರ್ಾರಿ ಆಸ್ಪತ್ರಗೆ ಬಂದು ಗಾಯಾಳುವನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಮನೆಗೆ ಹೋಗಿರುತ್ತೇನೆ. ಸದರಿ ಅಪಘಾತವು ರಾತ್ರಿ 12-00 ಗಂಟೆಯಿಂದ 1-00 ಗಂಟೆಯ ಅವಧಿಯ ನಡುವೆ ಸದರಿ ಘಟನೆ ಜರುಗಿದ್ದು, ಕಂಡು ಬಂದಿರುತ್ತದೆ. ಸದರಿ ಅಪಘಾತದಲ್ಲಿ ಭಾರಿ ಗಾಯಗೊಂಡ ಅಪರಿಚಿತ ವ್ಯಕ್ತಿಯು ಮೃತ ಪಟ್ಟಿರುವುದಾಗಿ ನನಗೆ ಆಸ್ಪತ್ರೆಯಿಂದ ತಿಳಿದ ನಂತರ ಠಾಣೆಗೆ ಬಂದು ಫಿಯರ್ಾದಿ ನೀಡಿರುತ್ತೇನೆ ಅಂತ ಕೊಟ್ಟ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಬೇಮಳಖೇಡಾ ಪೊಲೀಸ ಠಾಣೆ ಗುನ್ನೆ ನಂ. 71/2012 ಕಲಂ 279, 337, 338 ಐ.ಪಿ.ಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ: 08-10-2012 ರಂದು 1930 ಗಂಟೆಗೆ ಪೊಲಕಪಳ್ಳಿ-ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನ ರೋಡಿನ ಮೇಲೆ ಮೈಸಪ್ಪಾ ಗೌಡರು ರವರ ಹೊಲದ ಹತ್ತಿರ ಟ್ರಾಕ್ಟರ ನಂ ಕೆಎ 39/ಟಿ-2395 ನೇದರ ಚಾಲಕನ್ನು ತನ್ನ ಟ್ರಾಕ್ಟರನ್ನು ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನದ ಕಡೆಯಿಂದ ಪೊಲಕಪಳ್ಳಿ ಗ್ರಾಮದ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿ ತಂದು ಚಾಂಗಲೇರಾ ದೇವಸ್ಥಾನದ ಕಡೆಗೆ ಹೋಗುತ್ತಿದ್ದ ಮೋಟಾರ ಸೈಕಲ ನಂ ಕೆಎ 29/ಎಲ್-5762 ನೇದಕ್ಕೆ ಡಿಕ್ಕಿ ಮಾಡಿ ಮೋಟಾರ ಸೈಕಲ ಚಾಲಕನಾದ ರಮೇಶ ತಂದೆ ರಾಜಪ್ಪಾ ಸಾ: ಪೊಲಕಪಳ್ಳಿ ಮತ್ತು ಅದರ ಹಿಂದೆ ಕುಳಿತ್ತಿದ್ದ ಸತೀಶ ತಂದೆ ಹಣಮಯ್ಯಾ ಸಾ: ಭೂಸನೂರ ತಾ: ಆಳಂದ ಜಿ: ಗುಲ್ಬರ್ಗಾ ಇಬ್ಬರಿಗೂ ಸಾದ ಮತ್ತು ಭಾರಿ ರಕ್ತಗಾಯ ಹಾಗೂ ಒಳಗಾಯ ಪಡಿಸಿ ಸ್ಥಳದಲ್ಲಿ ಟ್ರಾಕ್ಟರ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ. ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: